ಮಾದಿಗ ಸಮುದಾಯ ತಮ್ಮ ನ್ಯಾಯಯುತ ಹಕ್ಕು ಕೇಳುತ್ತಿದೆ..

ಮಾದಿಗ ಸಮುದಾಯ ತಮ್ಮ ನ್ಯಾಯಯುತ ಹಕ್ಕು ಕೇಳುತ್ತಿದೆ..

ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಬದ್ಧವಿದೆ..

ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ : ಮಾದಿಗ ಸಮುದಾಯ ಬಹುದಿನಗಳಿಂದ ತನ್ನ ನ್ಯಾಯಯುತ ಹಕ್ಕು ಕೇಳುತ್ತಿದ್ದು, ಸದಾಶಿವ ಆಯೋಗದ ಒಳಮೀಸಲಾತಿ ಸರ್ವರಿಗೂ ಸಮಪಾಲು ಸಮಬಾಳು ಎಂಬ ಸಂವಿಧಾನದ ಮೂಲ ಆಶಯವಾಗಿದ್ದು, ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿಯ ಫಲವನ್ನು ನಮ್ಮ ಸರ್ಕಾರ ಶೀಘ್ರವೇ ಒದಗಿಸಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಮಾಲಿನಿ ಸಿಟಿ, ಯಡಿಯೂರಪ್ಪ ರಸ್ತೆಯಲ್ಲಿ ಒಳಮೀಸಲಾತಿ ಹಕ್ಕೊತ್ತಾಯ ಕುರಿತು ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಮಾದಿಗ ಸಮುದಾಯಗಳು ನ್ಯಾಯಯುತ ಹಕ್ಕು ಕೇಳುತ್ತಿರುವುದು ಸ್ವಾಗತಾರ್ಹ. ಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಬದ್ಧವಿದೆ ಎಂದು ತಿಳಿಸಿದರು.

ನಿಮ್ಮ ಪರವಾಗಿ ಇಂದು ಎಲ್ಲಾ ಪಕ್ಷದವರು ಇಲ್ಲಿ ಬಂದಿದ್ದಾರೆ. ಅದರ ಲಾಭ ಪಡೆಯಲು ಸಮುದಾಯ ಮುಂದಾಗಬೇಕು. ಈ ಸಮಸ್ಯೆ ಬಹಳ ದಿನ ಇರಲ್ಲ. ಮೀಸಲಾತಿ ಘೋಷಣೆಗೆ ಈಗಾಗಲೇ ನಮ್ಮ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಆದರೆ ಸರ್ಕಾರಕ್ಕೆ ತಮ್ಮದೇಯಾದ ಸಮಸ್ಯೆಗಳಿರುತ್ತವೆ. ಹೀಗಾಗಿ ಸ್ವಲ್ಪ ದಿನವಷ್ಟೇ ಕಾಯಬೇಕು ಎಂದರು.

ಎಸ್ಟಿ ಸಮಾಜಕ್ಕೂ ಮೀಸಲಾತಿ ಸುಲಭವಾಗಿ ಸಿಕ್ಕಿಲ್ಲ. ಸ್ವಾಮೀಜಿ ಮೂರ್ನಾಕ್ಕೂ ಬಾರಿ ಧರಣಿ ಕುಳಿತು ಮೀಸಲಾತಿ ಪಡೆದರು ಎಂದು ತಿಳಿಸಿದ ಅವರು, ಬಿಜೆಪಿ, ಕಾಂಗ್ರೆಸ್‌ನವರೂ ಯಾರು ಸತ್ಯಹರಿಶ್ಚಂದ್ರರಲ್ಲ. ಈಗ ವಿರೋಧ ಪಕ್ಷದಲ್ಲಿ ಇದ್ದಾರೇ ಅದಕ್ಕೆ ಕೂಗಾಡಿ ಭಾಷಣ ಮಾಡುತ್ತಿದ್ದಾರೆ. ಹಾಗಾದರೇ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು, ಏನು ಮಾಡಲಿಕ್ಕೆ ಆಗಲಿಲ್ಲ. ನಮ್ಮ ಜಗಳದಲ್ಲಿ ಸಮುದಾಯಕ್ಕೆ ಅನ್ಯಾಯ ಆಗಬಾರದು ಎಂದರು.

ವರದಿ ಪ್ರಕಾಶ ಬಸಪ್ಪ ಕುರಗುಂದ..