ಬೆಳಗಾವಿಯ ಗತವೈಭವಕ್ಕೆ ಸಾಕ್ಷಿಯಾಗುತ್ತಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ..

ಬೆಳಗಾವಿಯ ಗತವೈಭವಕ್ಕೆ ಸಾಕ್ಷಿಯಾದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ..

ಗಡಿಜಿಲ್ಲೆಯಲ್ಲಿ ಕಂಗೊಳಿಸುತ್ತಿರುವ ಗಾಂಧಿಗಿರಿಯ ಗತ್ತು..

ಕಾಂಗ್ರೆಸ್ ಅಧಿವೇಶನಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡ ಕುಂದಾನಗರಿ..

ಬೆಳಗಾವಿ : ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದ 1939ರ ಬೆಳಗಾವಿಯ ಕಾಂಗ್ರೆಸ್ ಅಧಿವೇಶನವು ಗಾಂಧಿ ಅಧ್ಯಕ್ಷತೆ ವಹಿಸಿದ ಏಕೈಕ ಅಧಿವೇಶನವಾಗಿದ್ದು, ಅದು ಐತಿಹಾಸಿಕವಾಗಿದೆ, ಬೆಳಗಾವಿಯಲ್ಲಿ ಆ ಕಾಂಗ್ರೆಸ್ ಅಧಿವೇಶನ ನಡೆದು ಇಲ್ಲಿಗೆ ನೂರು ವರ್ಷವಾಗಿದ್ದು, ಅದರ ಶತಮಾನೋತ್ಸವ ಆಚರಣೆಗಾಗಿ ಇಂದು ಬೆಳಗಾವಿ ನಗರ ಹಬ್ಬದಂತೆ ಸಿಂಗಾರಗೊಂಡಿದೆ..

1924ರ ಡಿಸೆಂಬರ್ 26 ಹಾಗೂ 27ರಂದು ಎರಡು ದಿನಗಳ ಕಾಲ ಬೆಳಗಾವಿಯ ಟಿಳಕವಾಡಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿದ್ದು, ಅದರ ಘನ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿ ವಹಿಸಿದ್ದು, ಆ ಸಂದರ್ಭದಲ್ಲಿ ತೊಡಿಸಿದ ಬಾವಿಯು ಇಂದು ಕಾಂಗ್ರೆಸ್ ಬಾವಿಯೇ ಎಂದೂ ಖ್ಯಾತಿ ಹೊಂದಿದೆ..

2002ನೇ ಇಶ್ವಿಯಲ್ಲಿ ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಇದ್ದ ಕಾಂಗ್ರೆಸ್ ಸರ್ಕಾರದಲ್ಲಿ ಈ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳವನ್ನು ಪುನರುಜ್ಜೀವನ ಗೊಳಿಸಿದ್ದು, ಅಲ್ಲಿ ವೀರಸೌಧವನ್ನು ನಿರ್ಮಾಣ ಮಾಡಿತ್ತು, ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಬಿ ಇನಾಮದಾರ, ಸ್ವಾತಂತ್ರ್ಯ ಹೋರಾಟಗಾರ ಆರ್ ಎಚ್ ಕುಲಕರ್ಣಿ ಅವರ ಕಾಳಜಿಯಿಂದ ಸೌಧ ನಿರ್ಮಾಣವಾಗಿ, ಸೌಧದಲ್ಲಿ ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು, ಸ್ಥಳೀಯ ಸ್ವಾತಂತ್ರ ಹೋರಾಟಗಾರರಾದ ಗಂಗಾಧರರಾವ ದೇಶಪಾಂಡೆ, ವಿಠ್ಠಲರಾವ್ ಯಾಳಗಿ, ಇನ್ನುಳಿದವರ ಮನೆಗಳಿಂದ ಬಾಪೂಜಿ ಅವರ ಕಪ್ಪು ಬಿಳುಪಿನ ಚಿತ್ರಗಳನ್ನು ತಂದು ಪ್ರದರ್ಶನಕ್ಕೆ ಇಡಲಾಗಿತ್ತು..

ಇನ್ನು ಈ ಶತಮಾನೋತ್ಸವ ಆಚರಣೆಗಾಗಿ ವೀರಸೌಧದಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳು ಜರುಗುತ್ತಿದ್ದು, ಕಾಂಗ್ರೆಸ್ ಭಾವಿಯ ಅಭಿವೃದ್ಧಿ, ಈ ಸ್ಥಳವನ್ನು ಪ್ರವಾಸಿ ತಾಣ ಮಾಡುವ, ಗಾಂಧೀಜಿಯವರ ಆಧುನಿಕ ತಂತ್ರಜ್ಞಾನದ ಮಹತ್ವದ ಭಾವಚಿತ್ರಗಳ ನಿರಂತರ ಪ್ರದರ್ಶನ, ಸೌಧದ ಆವರಣದಲ್ಲಿ ಬಾಪೂಜಿಯವರ ನೂತನ ಕಂಚಿನ ಪುತ್ತಳಿಯ ಅನಾವರಣ, ಇಂತಹ ಅನೇಕ ವಿಶೇಷ ಕಾರ್ಯಗಳನ್ನು ಇದೇ 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ..

ಇನ್ನು ವೀರಸೌಧ ಆದಿಯಾಗಿ ಇಡೀ ಬೆಳಗಾವಿ ನಗರದ ವಿವಿಧ ಗೋಡೆಗಳಿಗೆ ವರ್ಣಾಲಂಕರ, ಸ್ವಾತಂತ್ರ ಹೋರಾಟಗಾರರ ಉಬ್ಬುತಗ್ಗು ಚಿತ್ರಗಳು, ಗೋಡೆ ಮೇಲಿನ ಐತಿಹಾಸಿಕ ಚಿತ್ರ, ಬರಹಗಳು, ನಗರದ ತುಂಬೆಲ್ಲ ವರ್ಣಮಯ ದೀಪಾಲಂಕಾರ, ಬ್ರಹತ್ ವೇದಿಕೆಗಳು, ಬಾಪೂಜಿಯವರ ಬ್ರಹತ್ ಕಮಾನುಗಳು, ಎಲ್ಲವೂ ಸೇರಿ ಇಡೀ ನಗರವನ್ನೇ ದೀಪಾವಳಿ ಹಬ್ಬದಂತೆ ಸಿಂಗರಿಸಿದಂತಾಗಿದೆ..

ಇನ್ನು 26, 27ರಂದು ನಡೆಯುವ ಈ ಕಾಂಗ್ರೆಸ್ ಅಧಿವೇಶನದ ಸಿದ್ಧತೆಯಲ್ಲಿ ನೂರಾರು ಕಾರ್ಮಿಕರು ಹಗಲು ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದು, ಮಹಾನಗರ ಪಾಲಿಕೆ ಸಿಬ್ಬಂದಿ ಸ್ವಚ್ಛತೆ ಕಾರ್ಯ, ನಿರ್ಮಿತಿ ಕೇಂದ್ರದವರು ವೀರ ಸೌಧದಲ್ಲಿ ಅಲಂಕಾರ ಶೌಚಗೃಹ ನಿರ್ಮಾಣದ ಕಾರ್ಯ, ಲ್ಯಾಂಡ್ ಆರ್ಮಿ ಬ್ರಹತ್ ವೇದಿಕೆ ನಿರ್ಮಾಣ, ಹಾಗೂ ಹೆಸ್ಕಾಂ ನಗರದ ತುಂಬೆಲ್ಲಾ ಬಣ್ಣ ಬಣ್ಣದ ಲೈಟಿಂಗ್ ವ್ಯವಸ್ಥೆಯ ಕಾರ್ಯ ಮಾಡಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..