ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ವರ್ಣಮಯ ದೀಪಾಲಂಕಾರ..

ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ವರ್ಣಮಯ ದೀಪಾಲಂಕಾರ..

ದೀಪಾವಳಿ ಹಾಗೂ ಮೈಸೂರು ದಸರಾ ಹಬ್ಬಗಳ ಸಮ್ಮಿಲನದ ಸಂಭ್ರಮ..

ರಾತ್ರಿಯಿಡೀ ಸಾರ್ವಜನಿಕರ ಸೆಳೆಯುತ್ತಿರುವ ಬೆಳಗಾವಿಯ ಲೈಟಿಂಗ್ ಬ್ಯೂಟಿ..

ಮುಖ್ಯಮಂತ್ರಿಯಾದಿಯಾಗಿ ಸರ್ವರಿಂದ ಮೆಚ್ಚುಗೆ ಪಡೆದ ಹೆಸ್ಕಾಂ ಸಂಸ್ಥೆ..

ಬೆಳಗಾವಿ : ಕುಂದಾನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಮೈಸೂರು ದಸರಾ ಹಾಗೂ ದೀಪಾವಳಿ ಹಬ್ಬಗಳು ಸಂಬ್ರಮ ಒಟ್ಟಿಗೆ ನಡೆಯುವಂತಹ ವರ್ಣಮಯ ದೀಪಾಲಂಕಾರ ಧರೆಗಿಳಿದಿದ್ದು, ನಗರದ ಸೌಂದರ್ಯ ಇಮ್ಮಡಿಗೊಳಿಸಿದ್ದು ನೋಡುಗರ ಕಣ್ಮನ ಸೆಳೆಯುವಂತ ಲೋಕವನ್ನೇ ಸೃಷ್ಟಿಸಿದಂತಾಗಿದೆ..

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ ಈಗ ನೂರು ವರ್ಷವಾದ ಸಂಭ್ರಮದ ಹಿನ್ನೆಲೆಯಲ್ಲಿ, ಈ ಕಾರ್ಯಕ್ರಮವನ್ನು ಅವಿಸ್ಮರಣೀಯ ವಾಗಿಸಬೇಕೆಂಬ ಉದ್ದೇಶದಿಂದ ಹತ್ತು ಹಲವು ವಿಶೇಷತೆಗಳನ್ನು ನಗರದಲ್ಲಿ ನೆರವೇರಿಸುತ್ತಿದ್ದು, ಅದರಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ, ದೇಶದ ಮಹನೀಯರ ವಿದ್ಯುತ್ ದೀಪಗಳ ಪ್ರತಿಕೃತಿಗಳು, ದೇವಾನುದೇವತೆಗಳ, ಐತಿಹಾಸಿಕ ಸ್ಥಳಗಳ, ಘಟನೆಗಳ ವಿಧ್ಯುತ್ ಚಿತ್ರಗಳು, ನೈಸರ್ಗಿಕ ಸೌಂದರ್ಯದ ಅಲಂಕಾರಿಕ ದ್ವಿಪಗಳಿಂದ ಕುಂದಾನಗರಿ ಇಂದು ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ..

ನಗರಕ್ಕೆ ಪ್ರವೇಶ ಆಗುವ ಗಾಂಧಿನಗರದಿಂದ ಪ್ರಾರಂಭವಾಗಿ, ಕೋಟೆ ಕೆರೆ, ಆರ್ಟಿಒ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮವೃತ್ತ, ಅಂಬೇಡ್ಕರ ಉದ್ಯಾನ ರಸ್ತೆ, ಕೃಷ್ಣ ದೇವರಾಯ ವೃತ್ತ, ಕೆಎಲ್ಇ ಮಾರ್ಗ, ಚೆನ್ನಮ್ಮ ವೃತ್ತದಿಂದ ಕ್ಲಬ್ ರಸ್ತೆಯಿಂದ ಸಿಪಿಎಡ್ ಮೈದಾನ, ಚನ್ನಮ್ಮ ವೃತ್ತದಿಂದ ಕಾಲೇಜ್ ರಸ್ತೆ, ಬೋಗರವೆಸ್, ಕಾಂಗ್ರೆಸ್ ರಸ್ತೆ, ವೀರ ಸೌಧ, ಥರ್ಡ್ ಗೇಟ್, ಉದ್ದಮಬಾಗದಿಂದ ವಿಟಿಯು ವರೆಗೆ ಹೀಗೆ ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಆಗಿದ್ದು, ನಗರವಷ್ಟೇ ಅಲ್ಲದೇ ಸುತ್ತಮುತ್ತಲಿನ ಹಳ್ಳಿ ಹಾಗೂ ಪಟ್ಟಣದ ಜನಮನವನ್ನು ಸೆಳೆಯುತ್ತಿದೆ..

ರಾಣಿ ಚನ್ನಮ್ಮ ವೃತ್ತದಲ್ಲಿ ದೀಪಾಲಂಕಾರ ಅಧ್ಬುತವಾಗಿದ್ದು, ಸಾರ್ವಜನಿಕರು ಸೆಲ್ಪಿಗಾಗಿ, ವಿಡಿಯೋ ಕಾಲ್, ದ್ವೀಪದ ಐತಿಹಾಸಿಕ ಚಿತ್ರಗಳನ್ನು ತಮ್ಮ ಮೊಬೈಲ್ ಗಳಲ್ಲಿ ವಿಡಿಯೋ ಮಾಡಿಕೊಳ್ಳುವ ಸನ್ನಿವೇಶ ಸಾಮಾನ್ಯವಾಗಿದ್ದು, ಜನರು ಕುಟುಂಬ ಸಮೇತರಾಗಿ ಬಂದು ಈ ಆಕರ್ಷಣೀಯ ದೀಪಾಲಂಕಾರದ ಸೌಂದರ್ಯವನ್ನು ಸವಿಯುತ್ತಿದ್ದಾರೆ.

ಇನ್ನು ಈ ದೀಪಾಲಂಕಾರದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ಹೆಸ್ಕಾಂ ಸಂಸ್ಥೆಯ ಕಾರ್ಯವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಶ್ಲಾಘನೆ ಮಾಡುತ್ತಿದ್ದು, ಹೆಸ್ಕಾಂ ಸಂಸ್ಥೆ ನಿಜಕ್ಕೂ ಅದ್ಬುತ ಲೋಕವನ್ನೇ ತೆರೆದಿಡುವ ಕಾರ್ಯ ಮಾಡಿದೆ, ನಗರದಲ್ಲಿ ಮುಖ್ಯರಸ್ತೆ ಹಾಗೂ ಒಳರಸ್ತೆ ಸೇರಿ ಒಟ್ಟು 104 ಕಿ, ಮೀ, ದೀಪಾಲಂಕಾರ ಮಾಡಿದ್ದು, ಪ್ರಮುಖ 90 ವೃತ್ತಗಳಲ್ಲಿ ದೀಪಾಲಂಕಾರ, 70ಕಡೆ ವಿಧ್ಯುತ್ ಪ್ರತಿಕೃತಿಗಳು ಹಾಗೂ ಅಧಿವೇಶನ ನಡೆದ ವೀರ ಸೌಧದಲ್ಲಿ ಐತಿಹಾಸಿಕ ವರ್ಣಮಯ ದೀಪಾಲಂಕಾರವನ್ನು ನಿರ್ಮಿಸಲಾಗಿದೆ..

ನಗರದ ಈ ಎಲ್ಲಾ ದೀಪಾಲಂಕಾರಕ್ಕೆ 9 ವೋಲ್ಟೇಜ್ನ ಒಟ್ಟು 2ಲಕ್ಷ ಎಲ್ಇಡಿ ಬಲ್ಬುಗಳನ್ನು ಬಳಸಲಾಗಿದ್ದು, ರಸ್ತೆ ವಿಭಾಜಕಗಳಲ್ಲಿಯೂ ಕೃತಕ ಸೌಂದರ್ಯ ವಿನ್ಯಾಸದ ದ್ವೀಪಗಳ ನಿರ್ಮಾಣ ವಾಗಿದ್ದು, ಚರಕ ಬೇಯುತ್ತಿರುವ ಗಾಂಧಿ, ನಿಂತಿರುವ, ದಂಡಿಯಾತ್ರೆಯ ಗಾಂಧಿ, ಗಾಂಧಿಭಾರತ ಹೀಗೆ ಹತ್ತು ಹಲವು ಗಾಂಧಿಜಿಯವರ ವಿದ್ಯುತ್ ಪ್ರತಿಕೃತಿಗಳು ನೋಡುಗರನ್ನು ಸೆಳೆಯುತ್ತಿದ್ದು, “ಗಾಂಧಿಭಾರತ” ದೊಂದಿಗೆ ಗಾಂಧಿ ಬೆಳಗಾವಿ ಆಗಿ ಮಾರ್ಪಟ್ಟಿದ್ದು ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಮತ್ತಷ್ಟು ಮೆರಗು ನೀಡಿದೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..