ಬೆಳಗಾವಿಯಲ್ಲಿ ಜನೆವರಿ 3ರಿಂದ 14ರವರೆಗೆ ರೋಟರಿ “ಅನ್ನೋತ್ಸವ” 2025..
114 ವಿವಿಧ ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳು..
ಬೆಳಗಾವಿ: ರೋಟರಿ ಕ್ಲಬ್ ಆಫ್ ಬೆಳಗಾವಿಯ ಮೆಗಾ ಕಾರ್ಯಕ್ರಮವಾದ ‘ರೋಟರಿ ಅನ್ನೋತ್ಸವ 2025’ ಶುಕ್ರವಾರ ಸಂಜೆ ಬೆಳಗಾವಿಯ ಸಾವಗಾಂವ ರಸ್ತೆಯಲ್ಲಿರುವ ಅಂಗಡಿ ಕಾಲೇಜು ಮೈದಾನದಲ್ಲಿ ಪ್ರಾರಂಭವಾಗಿದೆ.

ಮಾಜಿ ಸಂಸದೆ ಮಂಗಳಾ ಅಂಗಡಿ ಉದ್ಘಾಟಿಸಿದ್ದು, ಅನ್ನೋತ್ಸವ ಕಾರ್ಯಕ್ರಮವು ಜನವರಿ 3 ರಿಂದ 14 ರವರೆಗೆ ಮುಂದುವರಿಯುತ್ತದೆ. ದೇಶದ ವಿವಿಧ ಭಾಗಗಳಿಂದ 186 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಇದರಲ್ಲಿ 114 ವಿವಿಧ ತಿನಿಸುಗಳನ್ನು ಒದಗಿಸುವ ಆಹಾರ ಮಳಿಗೆಗಳು ಮತ್ತು 72 ಗ್ರಾಹಕ ವಸ್ತುಗಳ ಮಳಿಗೆಗಳು ಸೇರಿವೆ.
ಮಾಜಿ ಸಂಸದೆ ಹಾಗೂ ಸುರೇಶ ಅಂಗಡಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಮಂಗಳಾ ಅಂಗಡಿ ಮಾತನಾಡಿ, ರೋಟರಿ ಸಂಸ್ಥೆಯ ಚಟುವಟಿಕೆಗಳು ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ ಎಂದರು. ರೋಟರಿ ಅನ್ನೋತ್ಸವವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತದೆ. ಇದರಿಂದ ಜನರಿಗೆ ವಿವಿಧ ರಾಜ್ಯಗಳ ಆಹಾರ ಪದಾರ್ಥಗಳು ಮತ್ತು ಪದ್ಧತಿಗಳ ಪರಿಚಯವಾಗುತ್ತದೆ ಮತ್ತು ಎಲ್ಲಾ ರೀತಿಯ ಆಹಾರ ಮತ್ತು ರುಚಿಗಳ ಪರಿಚಯ ಕೂಡಾ ಸಾಧ್ಯವಾಗುತ್ತದೆ ಎಂದಿದ್ದಾರೆ..

ಕಾಶ್ಮೀರ, ಜೈಪುರ, ಗೋವಾ, ಕೊಲ್ಲಾಪುರ, ಸತಾರಾ, ಪುಣೆ, ಮತ್ತು ನವದೆಹಲಿಯ ಆಹಾರ ಮಳಿಗೆಗಳು ಈ ಅನ್ನೋತ್ಸವದಲ್ಲಿ ಭಾಗಿಯಾಗಿದ್ದು ರಾಜ್ಯದ ಅನೇಕ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಮಳಿಗೆಗಳು ಲಭ್ಯವಿವೆ ಎಂದಿದ್ದಾರೆ.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಫೂರ್ತಿ ಅಂಗಡಿ, ರೋಟರಿ ಜಿಲ್ಲಾ ಗವರ್ನರ್ ಶರತ್ ಪೈ, ರೋಟರಿ ಕ್ಲಬ್ ಆಫ್ ಬೆಳಗಾವಿ ಅಧ್ಯಕ್ಷ ಸುಹಾಸ ಚಂದಕ್, ಅಕ್ಷಯ ಕುಲಕರ್ಣಿ, ಶೈಲೇಶ ಮಂಗಲೆ, ಕಾರ್ಯದರ್ಶಿ ಮನೀಶಾ ಹೆರೇಕರ, ರೋಟರಿ ಕ್ಲಬ್ ಸದಸ್ಯರು ಭಾಗವಹಿಸಿದ್ದರು.
ವರದಿ ಪ್ರಕಾಶ ಬಸಪ್ಪ ಕುರಗುಂದ..