ಬೆಳಗಾವಿಯಲ್ಲಿ “ಪೊಲೀಸ್ ವಾರ್ಷಿಕ ಕ್ರೀಡಾಕೂಟ 2024..”
ಒತ್ತಡದ ಕೆಲಸಗಳ ನಡುವೆ ಕ್ರೀಡೆಗಳು ಪೋಲೀಸರ ಆರೋಗ್ಯ ಕಾಪಾಡುತ್ತವೆ.
ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಕಾರಣ ಪೊಲೀಸ್ ಇಲಾಖೆ..
ಬೆಳಗಾವಿ : ನಮ್ಮ ದೇಶದ ಗಡಿಯಲ್ಲಿ ದೇಶ ರಕ್ಷಣೆಗಾಗಿ ಸೈನಿಕರು ಇಪ್ಪತ್ನಾಲ್ಕು ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿದ್ದರೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಮಾಡುತ್ತಾರೆ, ಹಲವಾರು ಒತ್ತಡಗಳ ಸನ್ನಿವೇಶಗಳಲ್ಲಿ ಕೆಲಸ ಮಾಡುವ ಪೊಲೀಸರ ಆರೋಗ್ಯವನ್ನು ಕಾಪಾಡಲು ಕ್ರೀಡಾಕೂಟಗಳು ಸಹಾಯಕವಾಗಿವೆ ಎಂದು ಬೆಳಗಾವಿಯ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಹೇಳಿದ್ದಾರೆ..

ಇಂದು ಶುಕ್ರವಾರ ದಿನಾಂಕ 09/01/2025ರಂದು ನಗರ ಪೊಲೀಸ್ ಕಮಿಷರೇಟನ ಕಡೆಯಿಂದ ಆಯೋಜಿಸಿದ ಎರಡು ದಿನಗಳ “ಪೊಲೀಸ್ ವಾರ್ಷಿಕ ಕ್ರೀಡಾಕೂಟ 2025” ಕ್ಕೆ ಚಾಲನೆ ನೀಡಿ, ಮಾತನಾಡಿದ ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ತುಂಬಾ ಪ್ರಮುಖವಾಗಿದ್ದು, ಪೊಲೀಸರು ಹಲವಾರು ಒತ್ತಡದ ಸನ್ನಿವೇಶಗಳಲ್ಲಿ, ಹಬ್ಬ ಹರಿದಿನ, ವೈಯಕ್ತಿಕ ಜೀವನ, ಕಾರ್ಯಕ್ರಮಗಳನ್ನು ಬದಿಗೊತ್ತಿ, ಒತ್ತಡದಲ್ಲಿ ಕೆಲಸ ಮಾಡುತ್ತಾರೆ, ಅವರ ವೈಯಕ್ತಿಕ ಆರೋಗ್ಯದ ಕಡೆ ಗಮನ ಹರಿಸಲು ಇಂತಹ ಕ್ರೀಡೆಗಳು ಸಹಾಯಕ ಆಗುತ್ತವೆ, ನಮ್ಮ ಪೊಲೀಸ್ ಅಧಿಕಾರಿಗಳು ಒಳ್ಳೆಯ ಕ್ರೀಡಾಪಟುಗಳಾಗಿದ್ದು ನಮಗೆಲ್ಲ ಸ್ಪೂರ್ತಿ ಆಗಿದ್ದರೆ ಎಂದರು..

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಆರಂಭಗೊಂಡ ಎರಡು ದಿನಗಳ ಈ ಕ್ರೀಡಾಕೂಟದ ಉದ್ಘಾಟನಾ ವೇದಿಕೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ, ಡಿಸಿಪಿ ರೋಹನ್ ಜಗದೀಶ್ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..