ಸಮಾಜ ಕಲ್ಯಾಣ ಇಲಾಖೆಯ ವಿಭಾಗ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು..
ಕ್ರೀಡೆಗಳು ನೌಕರರ ಕಾರ್ಯಕ್ಷಮತೆ ಹೆಚ್ಚಿಸುತ್ತವೆ..
ಗಂಗಾಧರ ದಿವಟರ, ಮುಖ್ಯ ಯೋಜನಾಧಿಕಾರಿ ಜಿಪಂ ಬೆಳಗಾವಿ..
ಬೆಳಗಾವಿ : ಸಮಾಜ ಕಲ್ಯಾಣ ಇಲಾಖೆಯಿಂದ ಬೆಳಗಾವಿ ವಿಭಾಗ ಮಟ್ಟದ ಸಮಾಜ ಕಲ್ಯಾಣ ಇಲಾಖೆಯ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯನ್ನು ಎರಡು ದಿನ ಆಯೋಜಿಸಲಾಗಿದ್ದು, ಉದ್ಘಾಟನಾ ಕಾರ್ಯಕ್ರಮವನ್ನು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆಸಲಾಯಿತು.
ಗಂಗಾಧರ ದಿವಟರ ಮುಖ್ಯ ಯೋಜನಾಧಿಕಾರಿಗಳು ಜಿಲ್ಲಾ ಪಂಚಾಯತ್ ಬೆಳಗಾವಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ವಾತಾವರಣದಲ್ಲಿ ಇಲಾಖೆಯ ನೌಕರರಿಗೆ ಈ ರೀತಿಯ ಕಾರ್ಯಕ್ರಮ ಬಹಳ ಅಗತ್ಯವಿದೆ. ಕೆಲಸದ ಒತ್ತಡದ ನಡುವೆ ಪ್ರತಿಯೊಬ್ಬರಲ್ಲಿ ಸುಪ್ತವಾಗಿರುವ ಬಾಲ್ಯತನದ ಅನಾವರಣ ಆಗುತ್ತದೆ ಹಾಗೂ ಕರ್ತವ್ಯದಲ್ಲಿ ದಕ್ಷತೆ ಸುಧಾರಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮನಗೌಡ ಕನ್ನೊಳ್ಳಿ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಇವರು ವಹಿಸಿದ್ದು, ಮಹೇಶ ಪೋತೆದಾರ, ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಗದಗ, ಪುಂಡಲೀಕ ಮಾನವರ, ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ವಿಜಯಪುರ, ಜಿಲ್ಲಾ ಪರಿಶೀಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಬಸವರಾಜ ಕುರಿಹುಲಿ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಏಳು ಜಿಲ್ಲೆಗಳ ಸಹಾಯಕ ನಿರ್ದೇಶಕರು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಸವರಾಜ ಗಾರ್ಗಿ, ಸೋನಾರ ಹಾಗೂ ರಾಜಶ್ರೀ ನಾಯಕ ರವರು ನಿರ್ಣಾಯಕರಾಗಿ ಉಪಸ್ಥಿತರಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ನಿಲಯಪಾಲಕರಾದ ವಿನೋದ ಕರೋಲಿ ನಡೆಸಿಕೊಟ್ಟರು.
ವರದಿ ಪ್ರಕಾಶ್ ಕುರಗುಂದ..