ನಿಷ್ಠಾವಂತ ಕಾರ್ಯಕರ್ತರ ಪರವಾದ ಪಕ್ಷವೆಂದು ಮತ್ತೊಮ್ಮೆ ಸಾಭಿತುಪಡಿಸಿದ ಬಿಜೆಪಿ..

ನಿಷ್ಠಾವಂತ ಕಾರ್ಯಕರ್ತರ ಪರವಾದ ಪಕ್ಷವೆಂದು ಮತ್ತೊಮ್ಮೆ ಸಾಭಿತುಪಡಿಸಿದ ಬಿಜೆಪಿ..

ಎಫ್ ಎಸ್ ಸಿದ್ದನಗೌಡರಿಗೆ ಸೌತ್ ವೇಸ್ಟೆರ್ನ್ ರೇಲ್ವೆ ವಿಭಾಗ ಸಮಿತಿಯ ಸದಸ್ಯತ್ವದ ಗೌರವ..

ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಕಾರ್ಯಕ್ಕೆ ಕಾರ್ಯಕರ್ತರ ಮೆಚ್ಚುಗೆ ..

ಬೆಳಗಾವಿ : ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತ ಪಕ್ಷದ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಸಾಮಾಜಿಕ ಸೇವೆಯನ್ನು ಗುರುತಿಸಿ ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ ಸೌತ್ ವೆಸ್ಟರ್ನ್ ರೈಲ್ವೆ ವಿಭಾಗದ ಡಿಆರಯು ಸಿಸಿ ಸಮಿತಿಯ ಸದಸ್ಯರನ್ನಾಗಿ ಕೇಂದ್ರ ಸರ್ಕಾರದಿಂದ ರೈಲ್ವೆ ವಿಭಾಗಕ್ಕೆ ನಾಮನಿರ್ದೇಶನ ಮಾಡಿದ್ದಾರೆ.

ಈ ವಿಭಾಗದಲ್ಲಿ ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯದ ರೈಲ್ವೆ ಸಂಪರ್ಕ ಒಳಗೊಂಡ ವಿಭಾಗ ಇದಾಗಿದ್ದು ಈ ರಾಜ್ಯದ ಸಂಸದರು ಶಾಸಕರು ಹಾಗೂ ಸಾಮಾಜಿಕ ಕಾರ್ಯಕರ್ತರು ನಾಮನಿರ್ದೇಶನಗೊಳ್ಳುತ್ತಾರೆ.

ರಾಜ್ಯದಿಂದ ಎಫ್.ಎಸ್.ಸಿದ್ದನಗೌಡರ ಜೋತೆಯಲ್ಲಿ ಆಂದ್ರಪ್ರದೇಶದ ಹೈದ್ರಾಬಾದ್ ಶಾಸಕ ಡಾ.ಪಾರ್ಥಸಾರಥಿ ವಾಲ್ಮೀ ಮತ್ತು ಆಂದ್ರಪ್ರದೇಶದ ವಿಧಾನ ಪರಿಷತ್ ಶಾಸಕ ಕೃಷ್ಣರಾಘವ ಜಯೇಂದ್ರ ಭರತ ಆಗಷ್ಟ್ 2026 ರವರೆಗೆ ನಾಮನಿರ್ದೇಶನಗೊಂಡಿದ್ದಾರೆ. ಇವರ ಆಯ್ಕೆಯಿಂದ ಪಕ್ಷದಲ್ಲಿ ದುಡಿಯುವ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸ್ಥಾನ ಮಾನಕೊಟ್ಟ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರನ್ನ ಕಾರ್ಯಕರ್ತರು ಅಭಿನಂದಿಸಿದ್ದಾರೆ.

ವರದಿ ಪ್ರಕಾಶ ಬಸಪ್ಪ ಕುರಗುಂದ.