ಬಾಲ್ ಅಲ್ಲಾ, ಕಲ್ ಬಂಡೆ ಬಂದರೂ, ಬೌಂಡರಿ ಆಚೆ ಅಟ್ಟಲು ರೆಡಿಯಾದರಾ ಸಾಹುಕಾರ್??

ಬಾಲ್ ಅಲ್ಲಾ, ಕಲ್ ಬಂಡೆ ಬಂದರೂ, ಬೌಂಡರಿ ಆಚೆ ಅಟ್ಟಲು ರೆಡಿಯಾದರಾ ಸಾಹುಕಾರ್??

ಸ್ಪಿನ್, ಬೌನ್ಸ್, ಗೂಗ್ಲಿ, ರಿವರ್ಸ್ ಸ್ವಿಂಗಗಳಿಗೆ ಬ್ಯಾಟ್ ಅನ್ನೋ ಅಸ್ತ್ರ ಹಿಡಿದರಾ??

ಬ್ಯಾಟ್ ಹಿಡಿದು, “ರೆಡಿ ಟು ರಿಯಾಕ್ಟ್ ಆಂಡ್ ರೂಲ್” ಎಂಬ ಸಂದೇಶ ಸಾರಿದರಾ?

ಬೆಳಗಾವಿ : ಕಳೆದೆರಡು ದಿನಗಳ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹಾಯಾಗಿ ಕ್ರಿಕೆಟ್ ಆಡುತ್ತಿರುವ ಸನ್ನಿವೇಶವನ್ನು ಕಂಡು ಖುಷಿ ಪಟ್ಟ ಅವರ ಅಭಿಮಾನಿಗಳು, ತಮ್ಮದೇ ಆದ ಧಾಟಿಯಲ್ಲಿ ತಮ್ಮ ಸಾಹುಕಾರರ ಬಗ್ಗೆ ವರ್ಣನೆ ಮಾಡಿದ್ದರು..

ಆದರೆ ಮತ್ತೆ ಕೆಲ ಅಭಿಮಾನಿಗಳು ಹಾಗೂ ಬೆಂಬಲಿಗರು ಸತೀಶ್ ಸಾಹುಕಾರ ಬ್ಯಾಟ್ ಹಿಡಿದು ಕಣಕ್ಕಿಳಿದಿದ್ದರೆ ಬಗ್ಗೆ ತಮ್ಮದೇ ಆದ ವಿಶೇಷ ಕಲ್ಪನೆಗಳನ್ನು ಮಾಡಿಕೊಂಡು ತಮ್ಮದೇ ದಾಟಿಯಲ್ಲಿ ಮಾತನಾಡಿಕೊಂಡಿದ್ದಾರೆ, ನಮ್ಮ ಸತೀಶ್ ಸಾಹುಕಾರರು ಇಲ್ಲಿಯವರೆಗೆ ಶಾಂತ ರೀತಿಯಿಂದ ವರ್ತನೆ ಮಾಡುತ್ತಿದ್ದರು ಆದರೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲ “ಸುಳ್ಳಿನ ಬಿಲ್ಡಪ್ ಗಿರಾಕಿಗಳು” ಹೆಚ್ಚು ನೋ ಬಾಲಗಳನ್ನು ಎಸೆಯುತ್ತಿವೆ, ಅಂತಹ ನೋ ಬಾಲಗಳನ್ನು ಬೌಂಡರಿ ಆಚೆ ಕಳಿಸಲು ಈಗ ಬ್ಯಾಟ್ ಹಿಡಿದು, “ರೆಡಿ ಟು ರಿಯಾಕ್ಟ್ ಆಂಡ್ ರೂಲ್” ಎಂದು ಕಣಕ್ಕಿಳಿದಿದ್ದಾರೆ ಎಂಬ ಅಭಿಪ್ರಾಯಗಳನ್ನು ಹೆಮ್ಮೆಯಿಂದ ಹಂಚಿಕೊಳ್ಳುತ್ತಿದ್ದಾರೆ..

ಕಾಂಗ್ರೆಸ್ ಪಕ್ಷದಲ್ಲಿ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸಿ, ಏಕಸ್ವಾಮ್ಯತೆಯನ್ನು ಹೋಗಲಾಡಿಸಿ, ಪಕ್ಷವನ್ನು ಸರಿಯಾದ ದಾರಿಯಲ್ಲಿ ನಡೆಸುವುದುಕ್ಕೊಸ್ಕರ ಸಚಿವ ಸತೀಶ ಜಾರಕಿಹೊಳಿ ಅವರು, ಇಂದು ಅಸ್ತ್ರ (ಬ್ಯಾಟ್) ಹಿಡಿದು ಕಣಕ್ಕಿಳಿದಿದ್ದಾರೆ, “ಎದುರಿಗೆ ಎಂತಹ ಬಾಲೆ ಬರಲಿ ಅಥವಾ ಕಲ್ಲು ಬಂಡೆಯೇ ಬರಲಿ,” ಎಲ್ಲವನ್ನೂ ಹೊಡೆದು ಬೌಂಡರಿ ಆಚೆಗೆ ಅಟ್ಟಲು ರೆಡಿಯಾಗಿ ನಿಂತಿರುವ ಸೂಚನೆಯನ್ನು ನಮ್ಮ ಸಾಹುಕಾರರು ನೀಡಿರಬಹುದು ಎಂದು ಬೆಂಬಲಿಗರು ಮಾತನಾಡಿಕೊಳ್ಳುತ್ತಿದ್ದಾರೆ..

ಬೆಳಗಾವಿಯಿಂದ ದೆಹಲಿಯವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಸಾಹುಕಾರರ ಒಳ್ಳೆತನವನ್ನು ಉಪಯೋಗಿಸಿಕೊಂಡು ಇಷ್ಟು ದಿನ ಆಟ ಆಡಿದರು, ಆದರೆ ಈಗ ಸಾಹುಕಾರರ ಮುಂದೆ ಯಾವ ಸ್ಪಿನ್, ಗೂಗ್ಲಿ, ಬೌನ್ಸ್, ರಿವರ್ಸ್ ಸ್ವಿಂಗಗಳ ಆಟವೂ ನಡೆಯುವುದಿಲ್ಲ, ಈಗ ಎಲ್ಲವನ್ನೂ ಮಣಿಸಲು ಸಿದ್ಧರಾಗಿದ್ದಾರೆ, ಎಲ್ಲರಿಗೂ, ಎಲ್ಲದಕ್ಕೂ ಪ್ರತಿಕ್ರಿಯಿಸಲು ನಾನು ಸಿದ್ದನಿದ್ದೇನೆ ಎಂದು, ತಮ್ಮ ಶೈಲಿಯಲ್ಲಿ ಬ್ಯಾಟ್ ಬೀಸುವ ಮೂಲಕ ಸೂಚನೆ ನೀಡಿದ್ದಾರೆಂಬ ಅಭಿಪ್ರಾಯಗಳನ್ನು ಸಾಹುಕಾರರ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ.

ವರದಿ ಪ್ರಕಾಶ ಬಸಪ್ಪ ಕುರಗುಂದ..