ಮಾನವೀಯತೆ ಮೆರೆದ ಸಮಾಜ ಸೇವಕ ವಿಜಯ ಮೋರೆ ಮತ್ತವರ ತಂಡ..
ಸಮಾಜ ಸೇವಕರ ಬೆಂಬಲದೊಂದಿಗೆ ಲಕ್ಷ್ಮಿ ತಳವಾರ ಜೈಲಿನಿಂದ ಬಿಡುಗಡೆ..
ಬೆಳಗಾವಿ : ಪಕ್ಕದ ಹಿಂಡಲಗಾ ಜೈಲಿನಲ್ಲಿ ಜಾಮೀನು ಪಡೆಯಲು ಹಣದ ಕೊರತೆಯಿಂದ ಜೈಲಿನಲ್ಲಿ ಪರದಾಡುತಿದ್ದ ಲಕ್ಷ್ಮಿ ತಳವಾರ ಎಂಬ ಮಹಿಳೆಯನ್ನು ಸ್ಥಳೀಯ ಸಮಾಜ ಸೇವಕರು ಮತ್ತು ಅಧಿಕಾರಿಗಳ ಸಹಕಾರದ ಪ್ರಯತ್ನದಿಂದ ಅಂತಿಮವಾಗಿ ಬಿಡುಗಡೆ ಮಾಡಲಾಗಿದೆ.
ನ್ಯಾಯವಾದಿ ವಿಧ್ಯಾ ಕೋಟಿ ಅವರು ಆರಂಭದಲ್ಲಿ ಅಗತ್ಯ ಮೊತ್ತದ ಅರ್ಧದಷ್ಟು ಹಣದ ವ್ಯವಸ್ಥೆ ಮಾಡುವ ಮೂಲಕ ಸಹಾಯ ಮಾಡಲು ಮುಂದಾಗಿದ್ದು, ಪರಿಸ್ಥಿತಿಯನ್ನು ಮನಗಂಡ ಜೈಲು ಅಧೀಕ್ಷಕರಾದ ಕೃಷ್ಣಮೂರ್ತಿ, ಎಎಸ್ಟಿ ಸೂಪರಿಂಟೆಂಡೆಂಟ್ ಮಲಿಕಾರ್ಜುನ್ ಕೊಣ್ಣೂರ ಹಾಗೂ ಇತರೆ ಸಿಬ್ಬಂದಿಗಳು ಬೆಳಗಾವಿಯ ಸಮಾಜ ಸೇವಕ ಹಾಗೂ ಮಾಜಿ ಮೇಯರ್ ವಿಜಯ್ ಮೋರೆ ಅವರ ಗಮನಕ್ಕೆ ಈ ವಿಷಯವನ್ನು ತಂದಿದ್ದರು..

ಸಮಸ್ಯೆಯನ್ನು ಬಗೆಹರಿಸಿದ್ದರ ಬಗ್ಗೆ ಮಾತನಾಡಿದ ವಿಜಯ್ ಮೋರೆ ಅವರು ಸ್ಥಳೀಯ ಸಮಾಜ ಸೇವಕರಾದ ಮದನಕುಮಾರ ಭೈರಪ್ಪನವರ ಮತ್ತು ಪ್ರಸನ್ನ ಘೋಟಗೆ ಅವರು ನೀಡಿದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು.
ವಿಜಯ್ ಮೋರೆ, ತಮ್ಮ ತಂಡದೊಂದಿಗೆ, ಮದನಕುಮಾರ ಭೈರಪ್ಪನವರ ಮತ್ತು ಪ್ರಸನ್ನ ಘೋಟಗೆ ಅವರನ್ನು ಭೇಟಿಯಾಗಿ ಸಮಸ್ಯೆ ತಿಳಿಸಿದಾಗ ಅವರ ನೆರವಿನೊಂದಿಗೆ ತ್ವರಿತವಾಗಿ ಅವಶ್ಯಕವಿರುವ ಸಂಪನ್ಮೂಲಗಳನ್ನು ಸಂಗ್ರಹಿಸಿದರು. ಇವರೆಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಲಕ್ಷ್ಮಿ ತಳವಾರ ಅವರಿಗೆ ಜಾಮೀನು ಲಭಿಸಿ, ಅವರು ಜೈಲಿನಿಂದ ಹೊರಬಂದು ಸ್ವಾತಂತ್ರ್ಯವಾಗಿ ಜೀವನ ನಡೆಸುವಂತಾಗಿದೆ..

ಈ ಸಂದರ್ಭದಲ್ಲಿ ನಂದು ಪಿವಿಜಿ, ಅಲನ್ ವಿಜಯ್ ಮೋರೆ, ಅದ್ವೈತ ಚವ್ಹಾಣ ಪಾಟೀಲ್ ಸೇರಿದಂತೆ ಪ್ರಮುಖ ಸಮುದಾಯದವರು ಉಪಸ್ಥಿತರಿದ್ದು, ಒಂದು ಮಹತ್ಕಾರ್ಯದಲ್ಲಿ ಭಾಗಿಯಾದ ಸಂತಸ ಎಲ್ಲರ ಮುಖದಲ್ಲಿತ್ತು..
ವರದಿ ಪ್ರಕಾಶ ಬಸಪ್ಪ ಕುರಗುಂದ..