ಕೆಡಿಪಿ ಸಭೆಯಲ್ಲಿ ಪ್ರಶಂಸೆ ಪಡೆದ ಸಮಾಜ ಕಲ್ಯಾಣ ಇಲಾಖೆ..
ಇಲಾಖೆಯ ಕಾರ್ಯವೈಖರಿಯ ವಿವರ ನೀಡಿದ ಜಂಟಿ ನಿರ್ದೇಶಕರು.
ವಸತಿ ನಿಲಯಗಳ ಹೆಚ್ಚಿನ ಸುಧಾರಣೆಗೆ ಜನಪ್ರತಿನಿಧಿಗಳ ಸೂಚನೆ..
ಬೆಳಗಾವಿ : ಕಳೆದೆರಡು ದಿನಗಳ ಹಿಂದೆ ನಾನು ನಗರದ ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ಸಂಗಮೇಶ್ವರ ನಗರದ ವಸತಿ ನಿಲಯಕ್ಕೆ ಬೇಟಿ ನೀಡಿದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ಉತ್ತಮವಾದ ಅಧ್ಯಯನದ ವಾತಾವರಣ ಹಾಗೂ ಊಟದ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆಯುತ್ತಿದ್ದು ಇಲಾಖೆಯ ಕಾರ್ಯ ಪ್ರಶಂಸನೀಯ ಎಂದು ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಅವರು ಹೇಳಿದ್ದಾರೆ..
ಶುಕ್ರವಾರ ನಗರದ ಸುವರ್ಣ ವಿಧಾನ ಸೌಧದ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಂತೆ ಸಂಗಮೇಶ ನಗರದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ಶಾಲೆಗೆ ಬೇಟಿ ನೀಡಿದ್ದೆ, ಆಗ ಅಲ್ಲಿಯ ವಿಧ್ಯಾರ್ಥಿಗಳಿಗೆ ನೀಡುವ ಸೌಲಭ್ಯ ಹಾಗೂ ಊಟದ ಗುಣಮಟ್ಟವನ್ನು ಕಂಡಾಗ ತುಂಬಾ ಖುಷಿಯಾಗಿದೆ, ನಾನೂ ವಿಧ್ಯಾರ್ಥಿಗಳ ಜೊತೆ ಅಲ್ಲಿಯೇ ಊಟ ಮಾಡಿದೆ, ಮಲಗುವ ಕೋಣೆ, ಅಧ್ಯಯನಕ್ಕೆ ಬೇಕಾದ ಅನುಕೂಲತೆ ಎಲ್ಲವೂ ಉತ್ತಮವಾಗಿದ್ದು, ಕೆಲ ಅಸ್ವಚ್ಚ ಸ್ಥಳಗಳನ್ನು ಸ್ವಚ್ಚವಾಗಿದಬೇಕು ಎಂದರು.

ವಿಧ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯ ಹಾಗೂ ಉತ್ತಮ ಆರೋಗ್ಯ ದೃಷ್ಟಿಯಿಂದ ಜಿಮ್ ವ್ಯವಸ್ಥೆ ಕೂಡಾ ಆಗಬೇಕಾಗಿದೆ, ಅದಕ್ಕೆ ಅವಶ್ಯಕವಿರುವ ಹಣವನ್ನು ನಮ್ಮ ಎಂಎಲ್ಸಿ ಅನುದಾನದಿಂದ ಒದಗಿಸುತ್ತೇವೆ, ತಡವಾಗದೇ ಆದಷ್ಟು ಬೇಗ ಆ ವ್ಯವಸ್ಥೆ ಆಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದರು.
ಸಮಸ್ಯೆವಿರುವ ವಸತಿ ನಿಲಯದ ಪ್ರಶಂಸೆಗೆ ಧನ್ಯವಾದಗಳು..
ಇನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಾರ್ಯ ವಿವರಗಳನ್ನು ಸಭೆಯಲ್ಲಿ ಮಂಡಿಸಿದ ಇಲಾಖೆಯ ಜಂಟಿ ನಿರ್ದೇಶಕರಾದ ರಾಮಗೌಡ ಕಣ್ಣೊಳ್ಳಿ ಅವರು, ಎಂಎಲ್ಸಿ ನಾಗರಾಜ ಯಾದವ್ ಅವರ ವಸತಿ ನಿಲಯದ ವ್ಯವಸ್ಥೆಯ ಮೆಚ್ಚುಗೆಗೆ ಪ್ರತಿಕ್ರಿಯೆ ನೀಡಿ, ಸಮಸ್ಯೆಗಳಿರುವ ವಸತಿ ನಿಲಯಕ್ಕೆ ತಾವು ಬೇಟಿ ನೀಡಿ, ಅದೊಂದು ಉತ್ತಮ ವ್ಯವಸ್ಥೆ ಇರುವ ವಸತಿ ನಿಲಯ ಎಂದು ಪ್ರಶಂಸೆ ನೀಡಿದ್ದಕ್ಕೆ ಧನ್ಯವಾದ ಎಂದು ಹೇಳಿದ ಅವರು, ಕಾಗವಾಡ ಶಾಸಕ ರಾಜು ಕಾಗೆ ಅವರು, ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಆರನೆಯ ತರಗತಿಗಳಿಗೆ ವಿದ್ಯಾರ್ಥಿಗಳನ್ನು ನೀವು ಹೇಗೆ ದಾಖಲು ಮಾಡಿಕೊಳ್ಳುವಿರಿ? ಮೆರಿಟ್ ಆಧಾರದಲ್ಲೋ ಅಥವಾ ಪ್ರಭಾವಿಗಳ ವಸೂಲಾತಿ ಮೇಲೆಯೋ ಎಂಬ ಪ್ರಶ್ನೆ ಮಾಡಿದ್ದು, ನನ್ನ ಕ್ಷೇತ್ರದ ಜನತೆ, ನನ್ನ ಕಡೆಯಿಂದ ಮುರಾರ್ಜಿ ಹಾಸ್ಟೆಲ್ ಅಡ್ಮಿಸೇನಗಾಗಿ ಸುಮಾರು ಎರಡೂ ಸಾವಿರ ಲೆಟರಗಳಿಗೆ ಸಹಿ ಮಾಡಿಸಿಕೊಂಡು ಹೋಗುತ್ತಾರೆ, ನನ್ನನ್ನ ಶಾಸಕ ಅಂತ ಅನ್ಕೊಂಡಿದಾರೋ ಅಥವಾ ಪ್ರಧಾನ ಮಂತ್ರಿಯೋ ಗೊತ್ತಿಲ್ಲ, ನಮ್ಮ ಕಚೇರಿಯ ಟೈಪಿಸ್ಟ್ ಗೆ ಲೆಟರ್ ಟೈಪ್ ಮಾಡಿ ಸಾಕಾಗಿದೆ, ತಾವು ಉತ್ತರ ನೀಡಿ ಎಂದರು.

ಆಗ ಉತ್ತರಿಸಿದ ಜಂಟಿ ನಿರ್ದೇಶಕರು, ಸರ್ ಈ ಹಿಂದೆ ಪರಿಸ್ಥಿತಿಯನ್ನು ನೋಡಿಕೊಂಡು ಕೆಲವು ಶಿಪಾರಸ್ಸು ಪತ್ರಗಳ ಆಧಾರದಲ್ಲಿ ಮುರಾರ್ಜಿ ಶಾಲೆಗಳಿಗೆ ದಾಖಲಾತಿ ನೀಡಿದ್ದು ಇದೆ, ಆದರೆ ಅದೇ ವಿಚಾರಕ್ಕೆ ತಾವು ಮೀಸಲಾತಿ ಉಲ್ಲಂಘಿಸಿ ಅಡ್ಮಿಸೆನ್ ನೀಡಿದ್ದೀರಿ ಎಂದು ನನ್ನ ಈ ಜಾಗದಲ್ಲಿದ್ದ ಹಿಂದಿನ ಅಧಿಕಾರಿಗಳ ಮೇಲೆ ಅಲಿಗೇಶನ್ ಕೂಡಾ ಮಾಡಿದ್ದರು, ಆದಕಾರಣ ಈ ವರ್ಷ ಯಾವುದೇ ಕಿರಿಕಿರಿ ಬೇಡ ಎಂದು ರಾಜ್ಯ ಮಟ್ಟದಲ್ಲಿ ಮೂರು ಸಲ ಹಾಗೂ ನಮ್ಮ ಹಂತದಲ್ಲಿ ಎರಡು ಸಲ ಮೆರಿಟ್ ಆಧಾರದ ಮೇಲೆ ಕೌನ್ಸೆಲಿಂಗ್ ಮಾಡಿ, ಅಡ್ಮಿಸೇನ್ ನೀಡಿದ್ದೇವೆ, ಆದಾಗ್ಯೂ ಕೆಲ ಎಸ್ಸಿ ಎಸ್ಟಿ ಮಕ್ಕಳು ಕೆಲ ಸಮಸ್ಯೆಗಳಿಂದ ಹಾಜರಾಗದ ಇದ್ದಲ್ಲಿ ವಿಶೇಷ ಮೀಸಲಾತಿ ಮಕ್ಕಳನ್ನು ದಾಖಲಿಸಿ ಕೊಂಡಿದ್ದೇವೆ ಎಂಬ ಮಾಹಿತಿ ನೀಡಿದರು, ಜಂಟಿ ನಿರ್ದೇಶಕರ ಉತ್ತರ ಸಭೆಗೆ ಸರಿ ಎನಿಸಿದಾಗ, ಸಚಿವ ಸತೀಶ ಜಾರಕಿಹೊಳಿ ಅವರು ವ್ಯವಸ್ಥಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸಿ ಎಂಬ ಸೂಚನೆ ನೀಡಿದರು.
ವರದಿ ಪ್ರಕಾಶ ಬಸಪ್ಪ ಕುರಗುಂದ.