ಸಂವಿಧಾನ ಚರ್ಚೆ ಮತ್ತು ಸಂವಾದ ಕಾರ್ಯಕ್ರಮ..

ಸಂವಿಧಾನ ಚರ್ಚೆ ಮತ್ತು ಸಂವಾದ ಕಾರ್ಯಕ್ರಮ..

ನಮಗೆಲ್ಲ ಸಮಾನತೆಯ ಬದುಕನ್ನು ಕರುಣಿಸಿದ್ದು ಬಾಬಾಸಾಹೇಬ ಅಂಬೇಡ್ಕರ ಅವರು..

ಬೆಳಗಾವಿ : ಅಹಿಂದ ನ್ಯಾಯವಾದಿಗಳ ಸಂಘ ಬೆಳಗಾವಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ 76ನೇ ಗಣರಾಜ್ಯೋತ್ಸವ ದಿನದ ನಿಮಿತ್ಯ ಸಂವಿಧಾನ ಚರ್ಚೆ ಮತ್ತು ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿಗಳಾದ ಎನ್. ಆರ್. ಲಾತೂರ್ ಸಂವಿಧಾನದ ನೆರಳಲ್ಲಿ ಬದುಕುತ್ತಿರುವ ನಾವು ಸೌಲಭ್ಯಗಳನ್ನು ಪಡೆಯುವುದರೊಂದಿಗೆ ನಮ್ಮ ಕರ್ತವ್ಯಗಳನ್ನು ಸಹ ಅರಿತುಕೊಳ್ಳಬೇಕಾದ ತುರ್ತು ಇದೆ ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯೆ ಕಲಿತು ಸಮಾಜದ ಆಸ್ತಿಗಳಾಗಿ ಬೆಳೆದಾಗ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ಸಾಕಾರಗೊಳ್ಳುತ್ತದೆ ಎಂದರು.

ಇನ್ನೋರ್ವ ನ್ಯಾಯವಾದಿಗಳಾದ ಪ್ರವೀಣ್ ತಳವಾರ್ ಮಾತನಾಡಿ ಜ್ಯೋತಿಬಾಪುಲೆ ಅವರಿಂದ ಆರಂಭವಾಗಿ ಬಾಬಾ ಸಾಹೇಬರು ಸಂವಿಧಾನ ಬರೆಯುವವರೆಗೆ 101 ವರ್ಷಗಳ ನಿರಂತರ ಹೋರಾಟ ತ್ಯಾಗದ ಪ್ರತಿಕವಾಗಿ ನಮಗೆ ಸಂವಿಧಾನ ದೊರೆಯಿತು, ಸಮಾನವಾಗಿ ಬದುಕುವ ಅವಕಾಶವನ್ನು ಡಾ. ಬಾಬಾ ಸಾಹೇಬರು ನಮಗೆ ಒದಗಿಸಿಕೊಟ್ಟರು ಎಂದರು.

ಈ ಸಂದರ್ಭದಲ್ಲಿ ಮಾನವ ಬಂದುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಭರಮಣ್ಣ ತೋಳಿಯವರು ಸಂವಿಧಾನ ಪ್ರಸ್ತಾವನೆ ಬೋಧಿಸಿದರು, ವಿದ್ಯಾರ್ಥಿ ಪ್ರತಿನಿಧಿ ರೂಪಾ ಕಾರ್ಯಕ್ರಮ ನಿರೂಪಿಸಿದರು ಹಾಗೂ ವಿದ್ಯಾರ್ಥಿನಿ ಸಾವಿತ್ರಿ ಉಳ್ಳಾಗಡ್ಡಿ ಸ್ವಾಗತಿಸಿದರು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಬಸವರಾಜ್ ಕುರಿಹುಲಿ, ನ್ಯಾಯವಾದಿಗಳಾದ ನಿಂಗಪ್ಪ ಮಸ್ತಿ, ವಿನೋದ ಪಾಟೀಲ್, ಗಂಗಾಧರ್ ಶಗುನಶೆ, ಚೇತನ ಹೆಡೆಗೆ , ಸಂದೀಪ ಹರಿಜನ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..