ಬಿಮ್ಸ್ ನಲ್ಲಿ ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ ಕಾರಣವಲ್ಲಾ..

ಬಿಮ್ಸ್ ನಲ್ಲಿ ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ ಕಾರಣವಲ್ಲಾ..

ಬಿಮ್ಸ್ ನಿರ್ದೇಶಕ ಅಶೋಕ ಕುಮಾರ ಶೆಟ್ಟಿ..

ಬೆಳಗಾವಿ : ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಸಾವಿಗೆ ಶರಣಾದ ಅಂಜಲಿ ಪಾಟೀಲ ಎಂಬ ಬಾಣಂತಿಗೆ “ಅಮ್ನಿಯೋಟಿಕ್ ಪ್ಲೋಯಿಡ್ ಎಂಬಾಲಿಸಂ” ಎಂಬುದು ಕಾರಣವಾಗಿರಬಹುದು ಎಂದು ಬಿಮ್ಸ್ ನಿರ್ದೇಶಕರಾದ ಡಾ ಅಶೋಕ ಕುಮಾರ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯ ಸಾವಿಗೆ ಕಾರಣ ಕೇಳಿದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬೀಮ್ಸ್ ನಿರ್ದೇಶಕರು, 40 ವಾರ ತುಂಬಿದ ಗರ್ಭಿಣಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯ ಹೆರಿಗೆ ತಜ್ಞರು ಪರಿಶೀಲಿಸಿದಾಗ ಬಾಣಂತಿಯ ಹೈ ರಿಸ್ಕ್ ಪ್ರೆಗ್ನೆನ್ಸಿ ಅಂತಾ ತಿಳಿದಿದ್ದು, ತಕ್ಷಣವೇ ಸಿಜೇರಿಯನ್ ಮಾಡಲು ಅಪರೇಷನ್ ಥೇಟರಿಗೆ ಕರೆದೊಯ್ಯಲಾಗಿದೆ, ಆಗ ಬಾಣಂತಿ ಅಂಜಲಿ ಪಾಟೀಲ ಅವರಿಗೆ ದೀಡಿರ ಅಂತ ಪಿಟ್ಸ್ ಬರುತ್ತದೆ, ರಕ್ತದೊತ್ತಡ ಕಡಿಮೆ ಆಗುತ್ತದೆ.

ಆಗ ಬಾಣಂತಿಗೆ “ಆಮ್ನಿಯೋಟಿಕ ಪ್ಲೋಯಿಡ್ ಎಂಬಾಲಿಸಂ” ಆಗಿರಬಹುದು ಎಂದು ವೈದ್ಯರು ಶಂಕಿಸಿದ್ದು, ಅದೇ ಕಾರಣಕ್ಕಾಗಿ ಇಂದು ಬೆಳಿಗ್ಗೆ ಅಂಜಲಿ ಪಾಟೀಲ ಸಾವಾಗಿದೆ, ಇದರಲ್ಲಿ ವೈದ್ಯರ ನಿರ್ಲಕ್ಷ ಕಂಡುಬಂದಿಲ್ಲ ಎಂದಿದ್ದಾರೆ.

ವರದಿ ಪ್ರಕಾಶ ಬಸಪ್ಪ ಕುರಗುಂದ..