ತತ್ವಶಾಸ್ತ್ರ ಮತ್ತು ಧಾರ್ಮಿಕ ವಿಷಯಾಧಾರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ
ಬೆಳಗಾವಿಯ ಗುರುದೇವ ರಾನಡೆ ತತ್ವಶಾಸ್ತ್ರ ಮತ್ತು ಧಾರ್ಮಿಕ ಅಕಾಡೆಮಿಯ ಆಯೋಜನೆ..
ಎಂ ಬಿ ಜಿರಲಿ, ಕಾರ್ಯದರ್ಶಿಗಳು ACPR ಬೆಳಗಾವಿ..
ಬೆಳಗಾವಿ : ನಗರದ ಹಿಂದವಾಡಿಯ ಕೆಎಲ್ಎಸ್ ವೇಣುಗೋಪಾಲ ಸಂಭಂಗಣದಲ್ಲಿ ಫೇಬ್ರುವಾರಿ 6 ಮತ್ತು 7 ನೇ ತಾರೀಕಿನದು ಗುರುದೇವ ರಾನಡೆ ತತ್ವಶಾಸ್ತ್ರ ಮತ್ತು ಧಾರ್ಮಿಕ ಅಕಾಡೆಮಿ ಆಯೋಜನೆ ಮಾಡಿರುವ, ತತ್ವಶಾಸ್ತ್ರ ಮತ್ತು ಧಾರ್ಮಿಕ ವಿಷಯಾಧಾರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಜರುಗಲಿದ್ದು ಇದರಲ್ಲಿ ಎಲ್ಲರೂ ಭಾಗಿಯಾಗಿ ಆಧ್ಯಾತ್ಮಿಕದ ನವ ಅನುಭವವನ್ನು ಪಡೆಯಿರಿ ಎಂದು ಬೆಳಗಾವಿಯ ಗುರುದೇವ್ ರಾನಡೆ ತತ್ವಶಾಸ್ತ್ರ ಮತ್ತು ಧಾರ್ಮಿಕ ಅಕಾಡೆಮಿಯ ಕಾರ್ಯದರ್ಶಿಗಳಾದ ಎಂ ಬಿ ಜಿರಲಿ ಅವರು ತಿಳಿಸಿದ್ದಾರೆ..
ಶನಿವಾರ ನಗರದ ಖಾಸಗಿ ಹೋಟೆಲಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ರಾನಡೆ ಅಕಾಡೆಮಿಯ ಶತಮಾನೋತ್ಸವದ ಅಂಗವಾಗಿ ವಿಶೇಷ ವಿಚಾರ ಸಂಕಿರಣ ಇಟ್ಟುಕೊಂಡಿದ್ದು, ನಮ್ಮ ಸಂಸ್ಥೆ ಆರಂಭವಾಗಿ ನೂರು ವರ್ಷಗಳ ಆಗಿದ್ದು ಈಗ ಇತಿಹಾಸ, ಆಧ್ಯಾತ್ಮಿಕ ಹಾಗೂ ತಾತ್ವಿಕ ಕ್ಷೇತ್ರದ ಮಹನೀಯರು ಬಂದು ಇಲ್ಲಿ ನಮ್ಮ ಸಂಸ್ಥೆಯನ್ನು ಆರಂಭ ಮಾಡಿ, ಬೆಳವಣಿಗೆಗೆ ಕಾರಣರಾಗಿದ್ದು ವಿಶೇಷ.
ಈ ನಮ್ಮ ಸಂಸ್ಥೆ ನೂರಾರು ವರ್ಷಗಳಿಂದ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದು, ಮನುಕುಲದಲ್ಲಿ ಶಾಂತಿ ಮತ್ತು ಒಳ್ಳೆಯ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಹತ್ತು ಹಲವಾರು ತಾತ್ವಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಉಪನ್ಯಾಸಗಳನ್ನು ಈ ಸಂಸ್ಥೆಯಿಂದ ಏರ್ಪಡಿಸಲಾಗುತ್ತಿದೆ ಎಂದಿದ್ದಾರೆ.
ಸಮಾಜದ ಏಳಿಗೆಗಾಗಿ, ವಿಧ್ಯಾರ್ಥಿಗಳಿಗೆ ಜ್ಞಾನ ನೀಡಿ, ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ಮತ್ತು ಯುವಸನುಹಕ್ಕೆ ಉನ್ನತ ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿ ಹಾಗೂ ಅಧ್ಯಯನ ಸಾಮಗ್ರಿ ನೀಡುವ ಮಹತ್ ಕಾರ್ಯವನ್ನು ಸಂಸ್ಥೆ ಮಾಡುತ್ತಿದ್ದು, ಆ ಮೂಲಕ ಸಮಾಜದ ಯುವಸಮೂಹ ಸದೃಢವಾಗಿ ಬೆಳೆದು, ಉತ್ತಮ, ಧನಾತ್ಮಕ ಸಮಾಜದ ನಿರ್ಮಾಣ ದಾರಿಯಾಗಲಿ ಎಂಬ ಸದುದ್ದೇಶದಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಆದಕಾರಣ ಪೆಬ್ರುವರಿ 6 ಮತ್ತು 7ನೆಯ ತಾರಿಕಿನಂದು ಎರಡು ದಿನಗಳ ಕಾಲ, ದೇಶದ ವಿವಿಧ ತಾತ್ವಿಕ ಹಾಗೂ ಆಧ್ಯಾತ್ಮಿಕ ಪರಿಣಿತರಿಂದ (ವಿದ್ವಾಂಸ) ವಿಶೇಷ ಉಪನ್ಯಾಸಗಳು ನಡೆಯುತ್ತಿದ್ದು, ಸುಮಾರು ಎಂಟು ಘೋಷ್ಟಿಗಳು ಜರುಗಲಿದ್ದು, ಗುರುದೇವ್ ರಾನಡೆ ಅವರ ಜೀವನ, ಕಾರ್ಯಗತಿ ಹಾಗೂ ತತ್ವಾದರ್ಷಗಳ ಕುರಿತಾಗಿ, ಜೀವನ ಮೌಲ್ಯಗಳು, ಆಧ್ಯಾತ್ಮ, ಧರ್ಮ, ಕರ್ಮಮಾರ್ಗ, ಮನುಕುಲದ ಮೇಲೆ ತತ್ವಾದರ್ಶಗಳ ಪ್ರಭಾವ ಹೀಗೆ ಹಲವಾರು ವಿಷಯಗಳ ಕುರಿತಾಗಿ ವಿಚಾರ ಸಂಕಿರಣ ಹಾಗೂ ವಿಶೇಷ ಉಪನ್ಯಾಸಗಳು ಜರುಗುತ್ತವೆ ಎಂದಿದ್ದಾರೆ.
ಈ ವಿಶೇಷ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ದೇಶದ ಮಹೋನ್ನತ ಉಪನ್ಯಾಸಕರು ಆಗಮಿಸುತ್ತಿದ್ದು, ರಾಜ್ಯ ಹಾಗೂ ಹೊರರಾಜ್ಯಗಳ ಸಾವಿರಾರು ಯುವ ಸಮೂಹ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತಿದ್ದು ಬೆಳಗಾವಿ ಜನತೆಗೆ ತತ್ವ ಆಧ್ಯಾತ್ಮಿಕತೆ ಹಾಗೂ ಧರ್ಮಮಾರ್ಗದ ವಿಚಾರಗಳನ್ನು ಗ್ರಹಿಸಲು ಇದೊಂದು ಉತ್ತಮ ವೇದಿಕೆಯಾಗಿದ್ದು ಸರ್ವರೂ ಇದರಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ವರದಿ ಪ್ರಕಾಶ ಬಸಪ್ಪ ಕುರಗುಂದ.