ಪಾಲಿಕೆಯ ಆಯುಕ್ತರ ಜೊತೆಯಲ್ಲಿ ಮಾಜಿ ಮೇಯರುಗಳ ಹಾಗೂ ನಗರ ಸೇವಕರ ಸಭೆ..

ಪಾಲಿಕೆಯ ಆಯುಕ್ತರ ಜೊತೆಯಲ್ಲಿ ಮಾಜಿ ಮೇಯರುಗಳ ಹಾಗೂ ನಗರ ಸೇವಕರ ಸಭೆ..

ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ..

ಸಭೆಯಲ್ಲಿ ಚರ್ಚೆಯಾದ ವಿಷಯಗಳಿಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದೇವೆ.

ಶುಭಾ ಬಿ, ಆಯುಕ್ತರು ಮಹಾನಗರ ಪಾಲಿಕೆ ಬೆಳಗಾವಿ.

ಬೆಳಗಾವಿ : ಇಂದು ನಗರದ ಮಾಜಿ ಶಾಸಕರು, ಮೇಯರುಗಳು ಹಾಗೂ ನಗರ ಸೇವಕರ ಜೊತೆ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಅನೇಕ ಸಲಹೆ ಸೂಚನೆಗಳ ಜೊತೆಗೆ ದೂರುಗಳ ರೂಪದಲ್ಲಿಯೂ ಕೆಲ ವಿಷಯಗಳನ್ನು ಚರ್ಚೆ ಮಾಡಿದ್ದಾರೆ, ನಾವು ಕೂಡಾ ಅವರು ಚರ್ಚಿಸಿದ ವಿಷಯಗಳಿಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಅವರು ಸೂಚಿಸಿದ ಕೆಲ ಸಮಸ್ಯಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಪಾಲಿಕೆಯ ಆಯುಕ್ತರಾದ ಶುಭಾ ಬಿ ಅವರು ತಿಳಿಸಿದ್ದಾರೆ.

ಮಂಗಳವಾರ ದಿನಾಂಕ 04/02/2024 ರಂದು ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ನಗರದ ಮಾಜಿ ಜನಪ್ರತಿನಿಧಿಗಳು ನಗರದ ಸುವ್ಯವಸ್ಥೆ ಹಾಗೂ ಅಭಿವೃದ್ಧಿಯ ಸಲುವಾಗಿ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದು, ಮುಖ್ಯವಾಗಿ ಹಿಡಕಲ್ ಡ್ಯಾಮನಿಂದ ನಿಯಮಾನುಸಾರವಾಗಿ ಪಾಲಿಕೆಗೆ ಬರಬೇಕಾದ ನೀರು ಬರುತ್ತುದೆಯಾ? ಕೈಗಾರೀಕರಣಕ್ಕೆ ನೀರಿನ ಪೂರೈಕೆಯನ್ನು ತಮ್ಮ ಗಮನಕ್ಕೆ ತಂದಿದ್ದಾರೆಯೇ ಎಂಬ ವಿಚಾರ ಕೇಳಿದ್ದು, ಕೈಗಾರಿಕಾ ಬಳಕೆಗೆ ನೀರನ್ನು ಎಲ್ಲಿಂದ ನೀಡುತ್ತಿದ್ದಾರೆ, ಹಿಡಕಲ್ ಥರ್ಡ್ ಸ್ಟೇಜ್ ಕುಡಿಯುವ ನೀರಿಗಾಗಿಯೇ ಇತ್ತು, ಅಲ್ಲಿ ಏನಾದರೂ ಅಡ್ಡಿಯಾಗಿದೆಯೇ, ನಮಗೇನಾದರೂ ಕಡಿಮೆ ನೀರು ಬಿಡುಗಡೆ ಆಗುತ್ತಿದೆಯೇ ಎಂದು ಸಂಬಂದಿಸಿದ ನೀರಾವರಿ ಅಧಿಕಾರಿಗಳಿಂದ ನಾನು ಮಾಹಿತಿ ಪಡೆಯುವೆ ಎಂದಿದ್ದಾರೆ.

ಇನ್ನು ಇಆಸ್ತಿಯ ಕುರಿತಾಗಿ ಸಾರ್ವಜನಿಕರು ಎದುರಿಸುತ್ತಿರುವ ಕೆಲ ಸಮಸ್ಯೆಗಳ ಬಗ್ಗೆ ಚರ್ಚೆ ಆಗಿದ್ದು, ಅದಕ್ಕೆ ಸ್ಪಷ್ಟನೆ ನೀಡಿದ ಆಯುಕ್ತರು, ಇಆಸ್ತಿ ಸೇವೆಯನ್ನು ನಾವು ಏಳು ದಿವಸದಲ್ಲಿ ನೀಡಬೇಕು, ಸಾರ್ವಜನಿಕರಿಗೆ ಏನಾದರೂ ಸಮಸ್ಯೆ ಇದ್ದಲ್ಲಿ ನಮ್ಮ ಕಂದಾಯ ವಿಭಾಗದ ಸಹಾಯವಾಣಿ ಇದೆ ಅದಕ್ಕೆ ಕರೆ ಮಾಡಬಹುದು ಅಥವಾ ನೇರವಾಗಿ ನನಗೆ ಬಂದು ದೂರು ನೀಡಬಹುದು, ಏಳು ದಿವಸ ಇಖಾತೆ, ಹಾಗೂ 45 ದಿವಸ (ಮುಟೇಶನ್) ಖಾತೆ ಬದಲಾವಣೆಗೆ ಸಮಯ ನೀಡಿದ್ದೇವೆ, ಒಂದು ವೇಳೆ ನಿಗದಿತ ಕಾಲಾವಧಿಯಲ್ಲಿ ಇಆಸ್ತಿ ಆಗದಿದ್ದರೆ ತಾವು ದೂರು ನೀಡಬಹುದು ಎಂದಿದ್ದಾರೆ.

ಇನ್ನು ನಗರದ ಕುಡಿಯುವ ನೀರು ಎಂಟು ದಿನಕ್ಕೊಮ್ಮೆ ಬರುವದನ್ನು ಎಲ್ಲರೊಂದಿಗೆ ಚರ್ಚಿಸಿ ಆದಷ್ಟು ಬೇಗ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಆಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೇವೆ ಎಂದಿದ್ದಾರೆ.

ವರದಿ ಪ್ರಕಾಶ ಬಸಪ್ಪ ಕುರಗುಂದ..