ಮಾರಿಹಾಳ ಗ್ರಾಮ ಪಂಚಾಯತಿ ಮೇಲಿನ ಆರೋಪ ಸುದ್ದಸುಳ್ಳು..
ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳಿಂದ ಮೆಚ್ಚುಗೆ ಪಡೆದ ಮಾರಿಹಾಳ ಗ್ರಾ ಪಂ.
ಸತ್ಯಾಸತ್ಯತೆ ತಿಳಿದು ಆರೋಪ ಮಾಡಬೇಕು..
ಪಂಚಾಯತಿಯ ಯಾವುದೇ ಕಾಮಗಾರಿಗಳಲ್ಲಿ ಹಣ ದುರ್ಬಳಕೆ ಆಗಿಲ್ಲ..
ಅಭಿವೃದ್ಧಿಯೇ ಮಾರಿಹಾಳ ಗ್ರಾಮ ಪಂಚಾಯತಿಯ ಮೂಲಮಂತ್ರ.
ಮಾರಿಹಾಳ ಗ್ರಾಪಂ ಜನಪ್ರತಿನಿಧಿಗಳ ಸ್ಪಷ್ಟನೆ..
ಬೆಳಗಾವಿ : ಮಾರಿಹಾಳ ಗ್ರಾಮ ಪಂಚಾಯತಿ ಮೇಲೆ ಮಾಡುತ್ತಿರುವ ಆರೋಪವೆಲ್ಲ ಶುದ್ಧ ಸುಳ್ಳು, ಯಾವುದೇ ಕಾಮಗಾರಿಗಳಲ್ಲಿ ಹಣದ ದುರುಪಯೋಗ ಆಗಿಲ್ಲ, ಮಕ್ಕಳ ಶಿಕ್ಷಣಕ್ಕಿರುವ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಕನಿಷ್ಟರು ನಮ್ಮಲ್ಲಿ ಯಾರೂ ಇಲ್ಲ, ಯಾರೇ ಆದರೂ ಸತ್ಯಾಸತ್ಯತೆ ತಿಳಿದು ಆರೋಪ ಮಾಡಬೇಕು ಎಂದು ಮಾರಿಹಾಳ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಅಶಿಫ್ ಮುಲ್ಲಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ತಮ್ಮ ಮಾರಿಹಾಳ ಗ್ರಾಮ ಪಂಚಾಯತಿ ಕುರಿತು ಖಾಸಗಿ ಯೂಟಬ್ ಚಾನೆಲ್ ಒಂದರಲ್ಲಿ ಪ್ರಸಾರವಾದ ಹಣ ದುರ್ಬಳಕೆಯ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲಿ ನಿಜವಾಗಿ ಏನು ಕೆಲಸ ಆಗಿದೆ, ದಾಖಲೆ ಪರಿಶೀಲಿಸಿದರೆ ತಮಗೆ ಅರ್ಥ ಆಗುತ್ತದೆ, ಶಾಲಾ ಅಭಿವೃದ್ಧಿಗಾಗಿ ನಾವು ಈಗ ನಾಲ್ಕು ವರ್ಷಗಳಿಂದ ಕಾರ್ಯ ಮಾಡಿದ್ದೇವೆ, ಶಾಲೆಯಲ್ಲಿ ಎರಡು ಕಪೌಂಡ್ ಮಾಡಿದೆ ಎಂಬುದು ಸುಳ್ಳು, ಮಾರಿಹಾಳದ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪೇವರ್ಸ್ ಅಳವಡಿಕೆಗೆ 5 ಲಕ್ಷ ಇಟ್ಟಿದ್ದು, 3ಲಕ್ಷ 61ಸಾವಿರ ಕಾಮಗಾರಿಯಾಗಿದ್ದು, ಅದರ ಗುಣಮಟ್ಟ ಪರೀಕ್ಷೆಯ ನಂತರ ಅದರ ಬಿಲ್ ಆಗಿದೆ, ಅದಾಗಿ ಎರಡು ವರ್ಷವಾಗಿದೆ, ಇಲ್ಲಿವರೆಗೂ ಯಾವುದೇ ದೂರು ಇಲ್ಲಾ, ಅದಕ್ಕೆ ಆ ಆರೋಪ ಸುಳ್ಳು ಎಂದಿದ್ದಾರೆ.

ಇನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹಾಗೂ ಉರ್ದು ಗಂಡು ಮಕ್ಕಳ ಶಾಲೆಯ ಗೋಡೆ ನಿರ್ಮಾಣಕ್ಕೆ 9ಲಕ್ಷ 99ಸಾವಿರ ಮಂಜೂರಾತಿ ಸಿಕ್ಕಿದ್ದು, ಅಲ್ಲಿ ಗೋಡೆ ನಿರ್ಮಾಣ ಇನ್ನು ಪೂರ್ಣ ಆಗದೇ ಇರುವದರಿಂದ ಅದಕ್ಕೆ 7ಲಕ್ಷ ಬಿಲ್ ಆಗಿದೆ, 2ಲಕ್ಷ ಪೆಂಡಿಂಗ ಇಟ್ಟಿದ್ದೇವೆ, ಕೆಲಸ ಮುಗಿದ ಮೇಲೆ ಕ್ಲಿಯರ್ ಮಾಡುತ್ತೇವೆ, ಕೆಲಸ ಪ್ರಗತಿಯಲ್ಲಿವೆ, ಇವರು ಆರೋಪ ಮಾಡಿದ ಹಾಗೆ ಇನ್ನೂ ಕೆಲಸ ಮುಗಿದಿಲ್ಲ.
ಇನ್ನು 16ಲಕ್ಷದ ಕಾಮಗಾರಿಯ ಒಂದು ಕಟ್ಟಡ ತೋರಿಸಿ ಆರೋಪ ಮಾಡುವರು, ಆ ಕಟ್ಟಡ ಕೆಲಸ ಏಕೆ ನಿಂತಿದೆ ಅಂತ ಅವರಿಗೂ ಚೆನ್ನಾಗಿ ಗೊತ್ತು, ಅಲ್ಲಿ ಪಕ್ಕದ ಜಾಗೆಯ ಮಾಲೀಕರು ಚೆನ್ನನ್ನವರ ಅಂತ ಅದು ತಮಗೆ ಬರುವ ಜಾಗವೆಂದು ತಕರಾರು ಮಾಡಿದ್ದರಿಂದ ಕೆಲಸ ವಿಳಂಬ ಆಗಿದೆ, ಆದರೆ ನಾವು ಅಲ್ಲಿ ಎಷ್ಟು ಕೆಲಸ ಆಗಿದೆಯೋ ಅಷ್ಟೇ ಬಿಲ್ ತಗೆದಿದ್ದೇವೆ, ಅಂದರೆ ಕಟ್ಟಡದ ಪ್ಲಿಂತ್ ಕಾಮಗಾರಿ ಆಗಿದ್ದು, 4ಲಕ್ಷ ಖರ್ಚಾಗಿದ್ದು, ಅಷ್ಟೇ ಬಿಲ್ ತಗೆದು, ಉಳಿದ ಹನ್ನೆರಡು ಲಕ್ಷ ಹಾಗೆ ಇಟ್ಟುಕೊಂಡಿದ್ದೇವೆ, ಕೆಲಸ ಆದ ಮೇಲೆ ಕ್ಲಿಯರ್ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಪಿಡಿಓ ಹರ್ಷವರ್ಧನ ಕೆಲಸಗಾರ ಅಲ್ಲಾ ಅಂತ ಆರೋಪ ಮಾಡುತ್ತಾರೆ ಅದು ಸುಳ್ಳು, ಪಿಡಿಓ ಹರ್ಷವರ್ಧನ ಗ್ರಾಮ ಪಂಚಾಯತಿಯಲ್ಲಿಂದು ದೊಡ್ಡ ಸಮಾಜಗಳ ಸ್ಮಶಾನ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ, ಕಸ ವಿಲೇವಾರಿ ಘಟಕವನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಇಂದು ಗ್ರಾಮಗಳಲ್ಲಿ ಸ್ವಚ್ಛತೆಯ ವಾತಾವರಣ ನಿರ್ಮಿಸಿದ ಕೀರ್ತಿ ಪಿಡಿಓಗೆ ಸಲ್ಲುತ್ತದೆ, ಮುಖ್ಯವಾಗಿ ಗ್ರಂಥಾಲಯ ಅಭಿವೃದ್ಧಿ ಆಗಿದ್ದು, ನವೀಕರಣ, ಕಂಪ್ಯೂಟರೀಕರಣ ಆಗಿ ಅವಶ್ಯಕ ಮೂಲಸೌಕರ್ಯ ನೀಡಿ, ಮಾದರಿಯಾದ ನಮ್ಮ ಗ್ರಂಥಾಲಯಕ್ಕೆ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಾಧವನ ಆಗಮಿಸಿ ವೀಕ್ಷಣೆ ಮಾಡಿ, ಜಿಲ್ಲೆಯಲ್ಲಿ ಉತ್ತಮ ಗ್ರಂಥಾಲಯ ಎಂದು ಮೆಚ್ಚುಗೆ ನೀಡಿದ್ದಾರೆ, ಅಲ್ಲಿ ವಿಧ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಅಧ್ಯಯನ ಹಾಗೂ ಸ್ಪರ್ಧಾತ್ಮಕ ಪುಸ್ತಕಗಳನ್ನು ಇರಿಸಿದ್ದು, ಇಂದು ಗ್ರಾಮದ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ಮಾಡಿ ಯಶಸ್ವಿ ಆಗಿದ್ದಾರೆ, ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಆರೋಪ ಮಾಡಬೇಡಿ ಎಂದಿದ್ದಾರೆ.

ಒಳ್ಳೆಯ ಕೆಲಸ ಮಾಡಿದ್ದನ್ನು ಗುರ್ತಿಸಿ, ಬಂದು ವಿಚಾರಿಸಿ, ಸತ್ಯಾಸತ್ಯತೆ ತಿಳಿದು ಸುದ್ದಿಗಳನ್ನು ಮಾಡಬೇಕು, ವೈಯಕ್ತಿಕ ಉದ್ದೇಶದಿಂದ ಯಾರೋ ಏನೋ ಹೇಳಿದರೆ ಅದೆಲ್ಲಾ ನಿಜ ಎಂದು ಬಿಂಬಿಸಬೇಡಿ, ಸತ್ಯ ಹಾಗೂ ಅಭಿವೃದ್ಧಿ ಕೆಲಸ ತೋರಿಸಿ, ಮೂವತ್ತು ವರ್ಷಗಳ ಹಿಂದಿನ ಸಾರ್ವಜನಿಕ ಶೌಚಾಲಯ ತೋರಿಸಿ, ಶಾಲೆಯ ಮೇಲೆ ಆರೋಪ ಮಾಡಿದರೆ ಏನು ಅರ್ಥ?

ಒಳ್ಳೆಯ ಕೆಲಸ ಮಾಡುವ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಸಹಕಾರ ನೀಡಿ, ಸಲಹೆ ಸೂಚನೆ ಏನಾದರೂ ಇದ್ದರೆ ನೀಡಿ, ನಾವು ಜನರ ಪರವಾಗಿ ಇದ್ದೇವೆ, ಗ್ರಾಮದ ಇನ್ನು ಹಲವಾರು ಅಭಿವೃದ್ಧಿ ಕಾಮಗಾರಿಗಳು ಬಾಕಿ ಇವೆ, ಅವೆಲ್ಲವನ್ನೂ ಮಾಡುತ್ತಾ ಇಡೀ ಜಿಲ್ಲೆಗೆ ಒಳ್ಳೆಯ ಪಂಚಾಯತಿ ಎಂದು ನಮ್ಮ ಮಾರಿಹಾಳ ಪಂಚಾಯತಿ ಮಾಡುವ ಉದ್ದೇಶವಿದೆ, ಅದಕ್ಕಾಗಿ ಎಲ್ಲರ ಸಹಕಾರ ಮುಖ್ಯ, ಒಂದು ವೇಳೆ ತಮೆಗೆ ಏನಾದರೂ ಸಂದೇಹ ಇರುವ ವಿಷಯಗಳಿದ್ದರೆ ಪಂಚಾಯತಿಗೆ ಬಂದು ವಿಚಾರಿಸಿ, ದಾಖಲೆ ಕೇಳಿ ಕೊಡುತ್ತೇವೆ ಎಂದಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..