ನಮ್ಮ ಗೆಲುವಿಗೆ ಬೆಂಬಲ ನೀಡಿದ ರಾಜ್ಯದ ಯುವ ಮತದಾರರಿಗೆ ಧನ್ಯವಾದಗಳು..

ನಮ್ಮ ಗೆಲುವಿಗೆ ಬೆಂಬಲ ನೀಡಿದ ರಾಜ್ಯದ ಯುವ ಮತದಾರರಿಗೆ ಧನ್ಯವಾದಗಳು..

ತಂದೆಯವರ ಮಾರ್ಗದರ್ಶನ ಹಾಗೂ ಸಲಹೆ ಸೂಚನೆಯಂತೆ ಪಕ್ಷದ ಸೇವೆ ಮಾಡುತ್ತೇವೆ..

ಬೆಳಗಾವಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಯುವ ಪ್ರಧಾನ ಕಾರ್ಯದರ್ಶಿಯಾಗಿ ಬಹುಮತದಿಂದ ಆಶೀರ್ವದಿಸಿ, ಗೆಲ್ಲಿಸಿದ ರಾಜ್ಯದ ಯುವ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳು, ಅದೇ ರೀತಿ ತಂದೆಯವರಾದ ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಈ ಗೆಲುವಾಗಿದ್ದು, ಮುಂದೆ ತಂದೆಯವರು ತೋರಿಸಿದ ಮಾರ್ಗದಲ್ಲಿ ಪಕ್ಷದ ಸಂಘಟನೆ, ಸೇವೆ ಮಾಡುತ್ತೇನೆ ಎಂದು ಕೆಪಿಸಿಸಿಯ ಯುವ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ರಾಹುಲ ಜಾರಕಿಹೊಳಿ ಅವರು ಹೇಳಿದ್ದಾರೆ.

ಸೋಮವಾರ ದಿನಾಂಕ 10/02/2024ರಂದು ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಜಾರಕಿಹೊಳಿ ಅವರು, ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ಕರ್ನಾಟಕ ರಾಜ್ಯದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯ ಚುನಾವಣೆ ಜರುಗಿತ್ತು, ಚುನಾವಣೆಯ ಒಂದು ತಿಂಗಳ ಕಾಲಾವಧಿಯಲ್ಲಿ ಅನೇಕ ಯುವಕರು ಬ್ಲಾಕ್ ಮಟ್ಟದಲ್ಲಿ, ಅಸೆಂಬ್ಲಿ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯವ್ಯಾಪಿ ಓಡಾಡಿ ಈ ಯುವ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆಯನ್ನು ಮಾಡಿದರು.

ಅದರಲ್ಲಿ ನಮ್ಮ ಪರವಾಗಿ ಹಲವಾರು ಯುವಕರು ನಾವು ನಿಂತಿರುವ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬೆಂಬಲ ನೀಡುವ ಮೂಲಕ ಆಶೀರ್ವಾದ ಮಾಡಿದ್ದರು, ಮೊನ್ನೆ ತಾನೆ ಆ ಪಲಿತಾಂಶ ಬಂದಿದ್ದು, ಅದರಲ್ಲಿ ನಮಗೆ ಸುಮಾರು 1ಲಕ್ಷ 80ಸಾವಿರ ಮತಗಳನ್ನು ನೀಡುವ ಮೂಲಕ ರಾಜ್ಯಾದ್ಯಂತ ಎಲ್ಲಾ ಯುವ ಮತದಾರ ಕಾರ್ಯಕರ್ತರು ಆಶೀರ್ವಾದವನ್ನು ಮಾಡಿದ್ದಾರೆ, ಆ ಎಲ್ಲಾ ಮತದಾರ ಬಾಂಧವರಿಗೆ ಈ ಮಾಧ್ಯಮಗಳ ಮೂಲಕ ಹೃದಯಪೂರ್ವಕ ಧನ್ಯವಾದ ತಿಳಿಸುವೆ ಎಂದಿದ್ದಾರೆ.

ಅದೇ ರೀತಿ ಈ ಚುನಾವಣೆಗೆ ಯಾವತ್ತಿಗೂ ನಮಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ತಂದೆಯವರಾದ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನ ನಾವು ಮರೆಯುವಂತಿಲ್ಲ, ಯಾವ ರೀತಿ ನಾವು ಕೆಲಸ ಮಾಡಬೇಕು, ಯುವಕರ ಆಕರ್ಷಣೆ ಮಾಡಬೇಕು, ಸಾಮಾಜಿಕ, ರಾಜಕೀಯ ಜೀವನದಲ್ಲಿ ಹೇಗೆ ಇರಬೇಕು ಎಂದು ಸಲಹೆ ಸೂಚನೆ ನೀಡುತ್ತಾ ಬಂದಿರುತ್ತಾರೆ, ಮುಂದೆಯೂ ನಾವು ಅವರು ತೋರಿಸಿಕೊಟ್ಟ ದಾರಿಯಲ್ಲಿ ಅವರ ಮಾರ್ಗದರ್ಶನದಂತೆ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ, ಪಕ್ಷ ನೀಡಿದ ಯಾವುದೇ ಜವಾಬ್ದಾರಿ ಆಗಿರಬಹುದು, ಯುವಕರನ್ನು ಪಕ್ಷಕ್ಕೆ ಸೇರಿಸುವಂತ, ಪಕ್ಷವನ್ನು ಸಂಘಟಿಸುವಂತ, ಯುವಕರಿಗೆ ಸಿಗಬೇಕಾದ ಅವಕಾಶಗಳನ್ನು ಅವರಿಗೆ ಒದಗಿಸುತ್ತಾ ನಮಗೆ ಒದಗಿ ಬಂದ ಈ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸುತ್ತೇವೆ ಎಂದಿದ್ದಾರೆ.

ಅದೇ ರೀತಿ ಬೆಳಗಾವಿ ಗ್ರಾಮೀಣ ಜಿಲ್ಲೆಗೆ ಯುವ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆ ಆಗಿರುವ ಕಾರ್ತಿಕ್ ಪಾಟೀಲ್ ಅವರಿಗೆ, ಚಿಕ್ಕೋಡಿಯ ನೂತನ ಯುವ ಅಧ್ಯಕ್ಷರಾದ ಸಿದ್ದೀಕ್ ಅಂಕಲಗಿ ಅವರಿಗೆ, ಇನ್ನುಳಿದ ಜಿಲ್ಲೆಯಿಂದ ಆಯ್ಕೆಯಾದ ಎಲ್ಲಾ ಯುವ ಘಟಕದ ಪದಾಧಿಕಾರಿಗಳು ಅಭಿನಂದನೆ ತಿಳಿಸುತ್ತೇನೆ, ಜೊತೆಗೆ ಯುವ ಕಾಂಗ್ರೆಸ್ಸಿನಿಂದ ಸಿಕ್ಕಿರುವ ಈ ಅವಕಾಶವನ್ನು ಎಲ್ಲರೂ ಒಂದಾಗಿ ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುತ್ತೇವೆ ಎಂದಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ.