ಲಕ್ಷ್ಮಿ ಹೆಬ್ಬಾಳಕರ ಜನ್ಮದಿನದ ಪ್ರಯುಕ್ತ ವಿಶೇಷ ಕಾರ್ಯ..
ಜಿಲ್ಲಾಸ್ಪತ್ರೆಯಲ್ಲಿ ಅಲ್ಪೋಪಹಾರ ಮತ್ತು ಸಿಹಿ ಹಂಚಿಕೆ ಕಾರ್ಯಕ್ರಮ..
ಅಜಿತ್ ಮಾದರ, ಸಾಮಾಜಿಕ ಕಾರ್ಯಕರ್ತರು.
ಬೆಳಗಾವಿ : ಇದೇ ಫೆಬ್ರುವರಿ 14ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ ಅವರ ಜನ್ಮ ದಿನವಾಗಿದ್ದು, ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ವಿವಿಧ ರೀತಿಯಲ್ಲಿ ಸಮಾಜಮುಖಿ ಕಾರ್ಯ ಮಾಡುವದರ ಮೂಲಕ ವಿಶೇಷವಾಗಿ ಜನ್ಮ ದಿನವನ್ನು ಆಚರಣೆ ಮಾಡುತ್ತಿದ್ದಾರೆ.
ಅದರಂತೆಯೇ ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಮಾಜಿ ಸೈನಿಕರಾದ ಅಜಿತ ಮಾದರ ಅವರು ಸಚಿವರ ಅಪ್ಪಟ ಅಭಿಮಾನಿಯಾಗಿದ್ದು, ಸಚಿವರ ಜನ್ಮ ದಿನದಂದು ಬೆಳಗಾವಿಯ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದ ಮುಂಭಾಗದಲ್ಲಿ ಸರ್ವರಿಗೂ ಉಪಹಾರ ಹಾಗೂ ಸಿಹಿಯ ವಿತರಣೆ ಕಾರ್ಯಕ್ರಮವನ್ನು ನಡೆಸುತ್ತಿರುವ ಮಾಹಿತಿ ನೀಡಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಮದ್ಯಾಹ್ನ 12 ಗಂಟೆಯಿಂದ, ಹೆರಿಗೆ ವಿಭಾಗದ ಎದುರಿನಲ್ಲಿ ಉಪಹಾರ ಮತ್ತು ಸಿಹಿ ವಿತರಣೆ ಕಾರ್ಯ ನಡೆಯುತ್ತಿದ್ದು, ಸರ್ವರೂ ಈ ಸಂತಸದ ಕಾರ್ಯದಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.
ವರದಿ ಪ್ರಕಾಶ ಬಸಪ್ಪ ಕುರಗುಂದ.