ನಗರ ಸೇವಕನ ರಿಟ್ ಅರ್ಜಿಯನ್ನು ರದ್ದುಗೊಳಿಸಿದ ಹೈಕೋರ್ಟ್ ಸಂಚಾರಿ ಪೀಠ..
ನ್ಯಾಯಾಂಗ ಹೋರಾಟದಲ್ಲಿ ಮತ್ತೊಮ್ಮೆ ಮಿಂಚಿದ ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗೊಡ..
ಬೆಳಗಾವಿ : ನಗರದ ತಿನಿಸು ಕಟ್ಟೆ ಮಳಿಗೆಯಲ್ಲಿ ಮಹಾನಗರ ಪಾಲಿಕೆಯ ಬಿಜೆಪಿಯ ಇಬ್ಬರು ನಗರ ಸೇವಕರು ತಮ್ಮ ಅಧಿಕಾರದ ಪ್ರಭಾವವನ್ನು ಬಳಸಿಕೊಂಡು ತಮ್ಮ ಕುಟುಂಬದವರಿಗೆ ಎರಡು ಅಂಗಡಿಗಳನ್ನು ಪಡೆದುಕೊಂಡಿರುವ ಆರೋಪದ ಮೇಲೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ಆಯುಕ್ತರಾದ ಶೆಟ್ಟೆನ್ನವರ ಅವರು ಆ ಎರಡು ಬಿಜೆಪಿಯ ನಗರ ಸೇವಕರ ಸದಸ್ಯತ್ವವನ್ನು ರದ್ದುಗೊಳಿಸಿದ್ದರು.
ಸದಸ್ಯತ್ವ ರದ್ದುಗೊಳಿಸಿದ ಆದೇಶದ ವಿರುದ್ಧವಾಗಿ ಆದೇಶಕ್ಕೆ ಸ್ಟೇ ತರುವ ನಿಟ್ಟಿನಲ್ಲಿ ಸದಸ್ಯತ್ವ ಕಳೆದುಕೊಂಡ ನಗರ ಸೇವಕರಾದ ಜಯಂತ ಜಾಧವ ಅವರು ತಮ್ಮ ನ್ಯಾಯವಾದಿಗಳ ಮೂಲಕ ನ್ಯಾಯಾಲಯಕ್ಕೆ ರಿಟ್ ಅರ್ಜಿ ಫೈಲ್ ಮಾಡಿ, ಸ್ಟೇಗೆ ಕೂಡಾ ಪ್ರಯತ್ನ ಮಾಡಿದ್ದರು, ಆದರೆ ನಮ್ಮ ನ್ಯಾಯವಾದಿಗಳ ಕಡೆಯಿಂದ ಈಗಾಗಲೇ ಕೇವಿಟ್ ಹಾಕಲಾಗಿತ್ತು, ಆದರಿಂದ ಉಚ್ಚನ್ಯಾಯಾಲಯದ ಇಂದು ಅದರ ಹೆಯರಿಂಗ ಕೂಡಾ ನಡೆದಿರುತ್ತದೆ ಎಂದು ನಗರ ಸೇವಕರ ವಿರುದ್ಧ ಆರೋಪದ ದೂರು ನೀಡಿದ್ದ ಸುಜಿತ್ ಮುಳಗೊಡ ತಿಳಿಸಿದ್ದಾರೆ.
ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಎರಡೂ ಕಡೆಯ ನ್ಯಾಯವಾದಿಗಳ ವಾದ ವಿವಾದಗಳನ್ನು ಆಲಿಸಿ, ನಮ್ಮ ನ್ಯಾಯವಾದಿಗಳಾದ ನಿಖಿಲ್ ಬೋಲಬಂದಿ ಅವರು ಮಾಡಿದ ಸಮರ್ಥ ವಾದವನ್ನು ಆಲಿಸಿದ ನ್ಯಾಯಾಧೀಶರು, ಅವರ ವಾದವನ್ನು ಎತ್ತಿ ಹಿಡಿದು, ನಗರ ಸೇವಕರು ಮಂಡಿಸಿದ ರಿಟ್ ಅರ್ಜಿಯನ್ನು ರದ್ದುಗೊಳಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..