ಸರಳತೆಯ ಮದುವೆಗೆ ಸರಳತೆಗೆ ಮತ್ತೊಂದು ಹೆಸರಾದ ಸಾಹುಕಾರರ ಸಾಥ್ ..

ಸರಳತೆಯ ಮದುವೆಗೆ ಸರಳತೆಗೆ ಮತ್ತೊಂದು ಹೆಸರಾದ ಸಾಹುಕಾರರ ಸಾಥ್ ..

ಬೆಳಗಾವಿಗರ ಕಂಡು ಹೆಗಲ ಮೇಲೆ ಕೈ ಇಟ್ಟು ನಗುತ್ತಲೇ ಮಾತಾಡಿದ ಸಾಹುಕಾರರು.

ಮೈಸೂರು : ವರ್ಚಸ್ಸನ್ನು ನೋಡಿ ಹೋಗದೇ, ವ್ಯಕ್ತಿಯನ್ನು ನೋಡಿ ಕಾರ್ಯಕ್ರಮಗಳಿಗೆ ಹೋಗುವ ಸರಳ ಗುಣದ ಸಾಹುಕಾರರೆಂದೇ ಕರೆಸಿಕೊಳ್ಳುವ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಕನ್ನಡ ಚಿತ್ರರಂಗದ ಸರಳ ನಟ ಡಾಲಿ ಧನಂಜಯ ಅವರ ಆತ್ಮೀಯ ಕರೆಗೆ ಓಗೊಟ್ಟು, ಅವರ ಕಲ್ಯಾಣಕ್ಕೆ ಆಗಮಿಸಿ ಆಶೀರ್ವದಿಸಿದ್ದಾರೆ.

ಅರಮನೆ ನಗರಿ ಮೈಸೂರಿನಲ್ಲಿ ರವಿವಾರ ದಿ.16.02.2025 ರಂದು‌ ಸರಳತೆ ಮತ್ತು ಸಾಂಪ್ರದಾಯಿಕತೆ ಯಿಂದ ನೆರವೇರಿದ ಕನ್ನಡ ಚಲನಚಿತ್ರ ನಟ ಡಾಲಿ ಧನಂಜಯ ಹಾಗೂ ಡಾಕ್ಟರ್ ಧನ್ಯತಾ ಅವರ ಶುಭ ವಿವಾಹಕ್ಕೆ ಸರಳ ರೀತಿಯಲ್ಲಿಯೇ ಸಚಿವರು ಆಗಮಿಸಿ, ನವ ದಂಪತಿಗಳಿಗೆ ಶುಭ ಕೋರಿ, ಆಶೀರ್ವದಿಸಿದ್ದಾರೆ.

ಇದೇ ವೇಳೆ ಡಾಲಿ ಅವರಿಗೆ ಆತ್ಮೀಯರಾದ ಬೆಳಗಾವಿಯ ಮತ್ತೊಬ್ಬ ಸರಳ ಜೀವಿ, ಸಮಾಜ ಸೇವಕ, ಅಮ್ಮ ಪ್ರತಿಷ್ಠಾನನದ ಅಧ್ಯಕ್ಷ ಬಾಳಾಸಾಹೇಬ ಕ. ಉದಗಟ್ಟಿ ಅವರೂ ಕೂಡಾ ಮದುವೆ ಸಮಾರಂಭದಲ್ಲಿಯೇ ಉಪಸ್ಥಿತರಿದ್ದು, ತಮ್ಮೂರಿನ ಸಚಿವರು ಆಗಮಿಸಿದ ಸಂತಸದಲ್ಲಿ ಆತ್ಮೀಯವಾಗಿ ಅವರನ್ನು ಸ್ವಾಗತ ಮಾಡಿಕೊಂಡಿದ್ದು, ಬೆಳಗಾವಿಯ ಸಾಹುಕಾರರು ಕೂಡಾ ಎಂದಿನಂತೆ ತಮ್ಮ ನಗುಮುಖದಲ್ಲಿ ಆತ್ಮೀಯತೆಯಿಂದ, ಅದೂ ಮೈಸೂರಿನಲ್ಲಿ ನಮ್ಮ ಬೆಳಗಾವಿಯವರು ಎಂದು ಬರಮಾಡಿಕೊಂಡು ಹೆಗಲ ಮೇಲೆ ಕೈ ಹಾಕಿಕೊಂಡು ಹೋಗಿದ್ದು ಸಾಹುಕಾರರ ಹೃದಯವೈಶಾಲ್ಯತೆಗೆ ಸಾಕ್ಷಿಯಾಗಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..