ಮಹಾನಗರ ಪಾಲಿಕೆ ಸಿಬ್ಬಂದಿಗಳನ್ನು ಮತ್ತೆ ಪಾಲಿಕೆಗೆ ನಿಯೋಜಿಸಿ..

ಮಹಾನಗರ ಪಾಲಿಕೆ ಸಿಬ್ಬಂದಿಗಳನ್ನು ಮತ್ತೆ ಪಾಲಿಕೆಗೆ ನಿಯೋಜಿಸಿ..

ಎಲ್ಆಂಡಟಿ ಕಂಪನಿಯಿಂದ ಸಮಸ್ಯೆಗೆ ಒಳಗಾದ ನೀರು ಸರಬರಾಜು ಸಿಬ್ಬಂದಿ..

ಸಮಸ್ಯೆ ನಿವಾರಣೆಗೆ ಆಯುಕ್ತರ ಮೊರೆ ಹೋದ ಪಾಲಿಕೆಯ ಗುತ್ತಿಗೆ ನೌಕರರು..

ಬೆಳಗಾವಿ : ನಗರದ ನೀರು ಸರಬರಾಜು ವಿಭಾಗದಲ್ಲಿ ಸುಮಾರು 25 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸಿಕೊಂಡು ಬಂದಿರುವ ಪಾಲಿಕೆಯ 38 ಹೊರಗುತ್ತಿಗೆ ಸಿಬ್ಬಂದಿಗಳನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಖಾಸಗಿ ಕಂಪನಿಯಾದ ಎಲ್ಆಂಡಟಿ ಅವರಿಗೆ ನಗರ ನೀರು ಸರಬರಾಜು ಕಾರ್ಯಕ್ಕೆ ಹಸ್ತಾಂತರಿಸಲಾಗಿತ್ತು.

ಕಳೆದ ನಾಲ್ಕು ವರ್ಷಗಳಿಂದ ವಾಲಮೆನ್ ಹಾಗೂ ಪಂಪ ಆಪರೇಟರ್ ಹುದ್ದೆಯ ಸುಮಾರು 38 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದರೂ, ಅವರ ಕೆಲ ಸಮಸ್ಯೆಗಳು ಇಲ್ಲಿವರೆಗೂ ಬಗೆಹರಿದಿಲ್ಲ, ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ತಮಗೆ ಸೇವಾ ಭದ್ರತೆ ಇಲ್ಲಾ, ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ, ಸಿಬ್ಬಂದಿಗಳ ನಡುವೆ ವೇತನದಲ್ಲಿ ತಾರತಮ್ಯ ನೀತಿ, ವೇತನ ಕೇಳಲು ಹೋದರೆ ಸರಿಯಾದ ಸ್ಪಂದನೆ ನೀಡದಿರುವದು ಹೀಗೆ ತಮಗಿರುವ ಹಲವಾರು ಸಮಸ್ಯೆಗಳ ನಿವಾರಣೆಗಾಗಿ ಪಾಲಿಕೆಯ ಆಯುಕ್ತರಿಗೆ ತಮ್ಮ ಮನವಿ ನೀಡಿದ್ದಾರೆ..

ಮೊದಲಿನಿಂದಲೂ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸಿಕೊಂಡ ಬಂದ (38 ಸಿಬ್ಬಂದಿ) ನಮಗೆ ಎಲ್ಆಂಡಟಿ ಅವರಿಂದ ತುಂಬಾ ಸಮಸ್ಯೆ ಆಗುತ್ತಿದ್ದು, ತಮ್ಮನ್ನು ಮತ್ತೆ ಪಾಲಿಕೆಗೆ ನಿಯೋಜನೆ ಮಾಡಿಕೊಳ್ಳಬೇಕು ಎಂದು ತಮ್ಮ ಮನವಿಯಲ್ಲಿ ಕೇಳಿಕೊಂಡಿದ್ದಾರೆ..

ಈ ಸಂದರ್ಭದಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳಾದ ಸುಬ್ರಹ್ಮಣ್ಯ ಕಾಂಬಳೆ, ಮಂಜು ದೋಡವಾಡ, ಸಿದ್ರಾಮ ತಳವಾರ, ಸಿದ್ರಾಯಿ ಉಚುಕರ, ಎ ಪಿ ಕಾಂಬ್ಳೆ ಮತ್ತಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಸಪ್ಪ ಕುರಗುಂದ..