ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಎಸ್ ಎಸ್ ಮಿತ್ತಲಕೋಡ ನೇಮಕ..

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಎಸ್ ಎಸ್ ಮಿತ್ತಲಕೋಡ ನೇಮಕ..

ಶುಭಕೋರಿದ ಬೆಳಗಾವಿ ನ್ಯಾಯವಾದಿಗಳ ಸಮೂಹ..

ಬಾಗಲಕೋಟೆ : ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮದ ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿ 2011 ರಲ್ಲಿ ಬಾದಾಮಿ ತಾಲ್ಲೂಕ ವಕೀಲರ ಸಂಘದಿಂದ ಅತಿ ಚಿಕ್ಕ ವಯಸ್ಸಿನಲ್ಲಿಯೇ (29) ಮೊದಲ ಬಾರಿಗೆ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾಗಿ ಆಯ್ಕೆ ಆಗಿ, ಅದೇ ಅವಧಿಯಲ್ಲಿ 2014 ರಲ್ಲಿ ಬೆಳಗಾವಿ ಹಿರಿಯ ವಕೀಲರಾದ ಎ. ಆರ್. ಪಾಟೀಲ್ ಇವರ ಅಧ್ಯಕ್ಷತೆಯ ಅವಧಿಯಲ್ಲಿ 2014 ರಿಂದ 2016 ರ ವರೆಗೆ ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಮತ್ತೆ 2018 ರ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಯಾದ ನಂತರ 120000 ವಕೀಲರ ಪ್ರತಿನಿಧಿಯಾಗಿ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ನೇಮಕಗೊಂಡಿರುತಾರೆ..

ಈ ಸಂದರ್ಭದಲ್ಲಿ ಬೆಳಗಾವಿ ಎಲ್ಲಾ ಹಿರಿಯ ಹಾಗೂ ಕಿರಿಯ ವಕೀಲರು ಸಂತಸದಿಂದ ಮಹನೀಯರಿಗೆ ಶುಭ ಹಾರೈಸಿದ್ದಾರೆ..