ಸಮರ್ಪಕ ಕುಡಿಯುವ ನೀರು ಪೂರೈಕೆ ಹಾಗೂ ಕೂಲಿ ಕಾರ್ಮಿಕರ ವೇತನ ಬಿಡುಗಡೆಗೆ ಬೇಡಿಕೆ..
ಕರುನಾಡ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ಮನವಿ..
ಬೆಳಗಾವಿ : ಗೋಕಾಕ ತಾಲೂಕಿನ ಕೆಸಪ್ಪನಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಬೇಸಿಗೆ ಕಾಲ ಇನ್ನು ಎರಡ್ಮೂರು ತಿಂಗಳು ಮುಂದುವರೆಯುವದು ಅದರಿಂದ ಅಲ್ಲಿನ ಜನತೆಯ ಹಿತದೃಷ್ಟಿಯಿಂದ ಜಿಲ್ಲಾಡಳಿತ ಆದಷ್ಟು ಬೇಗ ಜಲಕುಂಭ ಅಥವಾ ಇತರೆ ನೀರಿನ ಮೂಲದ ವ್ಯವಸ್ಥೆ ಮಾಡಿ, ಜನತೆಗೆ ಕುಡಿಯುವ ನೀರು ದೊರಕುವಂತೆ ಮಾಡಬೇಕು ಎಂದು ಕರುನಾಡ ರಕ್ಷಣಾ ವೇದಿಕೆಯ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಅದೇ ರೀತಿ ಕಸೆಪ್ಪನಟ್ಟಿ ಗ್ರಾಮದ ಜನರು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 71 ಜನರು ಕೆಲಸ ಮಾಡಿದ್ದು, ಆರು ವಾರಗಳು ಕಳೆದರೂ ಇನ್ನೂವರೆಗೂ ಅವರ ವೇತನಗಳು ಬಿಡುಗಡೆ ಆಗಿಲ್ಲ, ಕೆಲಸಕ್ಕೆ ಏಳು ದಿನ ಹಾಜರಾದರು ಆರೆ ದಿನಗಳ ಹಾಜರಿ ಹಾಕುವರು, ಇದಕ್ಕೆ ಉತ್ತರಿಸಬೇಕಾದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೂಡಾ ಯಾವ ಸ್ಪಂದನೆ ನೀಡುತ್ತಿಲ್ಲ, ಕರೆಗಳನ್ನು ಕೂಡಾ ಸ್ವೀಕರಿಸುವುದಿಲ್ಲ.
ಆದಕಾರಣ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕೆಂದು ಹಾಗೂ ಕೂಲಿ ಕಾರ್ಮಿಕರ ವೇತನವನ್ನು ಆದಷ್ಟು ಬೇಗ ಪಾವತಿ ಮಾಡಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..