ಅನುದಾನ ಬೆಟ್ಟದಷ್ಟಿದ್ದರೂ ಬೋರ್ಡ್ ಮಾತ್ರ ದಿಕ್ಕಾಪಾಲು.

ಅನುದಾನ ಬೆಟ್ಟದಷ್ಟಿದ್ದರೂ ಬೋರ್ಡ್ ಮಾತ್ರ ದಿಕ್ಕಾಪಾಲು.

ನವೀಕರಣವಾದ ಮೂರೇ ತಿಂಗಳಲ್ಲಿ ಇಂದಿರಾ ಕ್ಯಾಂಟೀನಗೆ ದುಸ್ಥಿತಿ..

ಸರ್ಕಾರದ ಕನಸಿನ ಕೂಸಾದ ಇಂದಿರಾ ಕ್ಯಾಂಟೀನ್ ಬಗ್ಗೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೇಕೆ??

ಬೆಳಗಾವಿ : ಬಡವರ ಹಸಿವು ನೀಗಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಹಲವು ವರ್ಷಗಳ ಹಿಂದೆಯೇ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನಗಳನ್ನು ಆಯಕಟ್ಟಿನ ಪ್ರದೇಶಗಳಲ್ಲಿ ತೆರೆದಿದ್ದು, 2023ರಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂದಿರಾ ಕ್ಯಾಂಟೀನಗಳ ಸಂಖ್ಯೆಗಳನ್ನು ಹೆಚ್ಚಿಸಿ, ಹಿಂದೆ ಇರುವ ಕ್ಯಾಂಟೀನಗಳಿಗೆ ಮರುಜೀವ ನೀಡುವ ಕಾರ್ಯ ಮಾಡಿತ್ತು.

ಕಾಂಗ್ರೆಸ್ ಸರ್ಕಾರದ ಕನಸಿನ ಕೂಸಾದ ಇಂದಿರಾ ಕ್ಯಾಂಟೀನಗಳು ವ್ಯವಸ್ಥಿತವಾಗಿ ನಡೆದು, ಬಡವರ ಹಸಿವು ನೀಗಿಸುವ ಕಾರ್ಯ ಮಾಡಲಿ ಎಂದು, ರಾಜ್ಯಸರ್ಕಾರ ಅವುಗಳ ನಿರ್ವಹಣೆಗೆ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡುತ್ತಿದೆ, ಆದರೆ ಅವುಗಳ ನಿರ್ವಹಣೆ ಹೊಣೆ ಹೊತ್ತ ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂದು ಇಂದಿರಾ ಕ್ಯಾಂಟೀನ್ ಹಾಗೂ ಸರ್ಕಾರದ ಬಗ್ಗೆ ಜನರು ಆಡಿಕೊಂಡು ಮಾತಾಡುವಂತಾಗಿದೆ.

ಬೆಳಗಾವಿಯ ನೆಹರು ನಗರದ ಇಂದಿರಾ ಕ್ಯಾಂಟೀನ್ ನಗರದ ಪ್ರಮುಖ ಕೇಂದ್ರವಾಗಿದ್ದು ಇಲ್ಲಿಂದಲೇ ನಗರದ ಉಳಿದ ಇಂದಿರಾ ಕ್ಯಾಂಟೀನಗಳಿಗೆ ಆಹಾರ ಪೂರೈಕೆ ಆಗುತ್ತದೆ, ನೆಹರು ನಗರದ ಸಾರ್ವಜನಿಕರು ಸಂಚರಿಸುವ ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವ ಈ ಕ್ಯಾಂಟೀನ್ನಿನ ನಾಮಫಲಕ ಅರ್ಧ ಹರಿದು ಬಿದ್ದಿದ್ದು, ಕೆಳಗಡೆ ಇರುವ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮುಖದ ಮೇಲೆ ಬಿದ್ದು, ನೋಡಲು ಕೆಟ್ಟದಾಗಿ ಕಾಣುತ್ತಿದೆ.

ದಿನಾಲೂ ಈ ರಸ್ತೆಯಲ್ಲಿ ಸಾವಿರಾರು ಜನರು ಸಂಚಾರ ಮಾಡುತ್ತಿರುವುದರಿಂದ ಈ ಅವ್ಯವಸ್ಥೆಯ ನೋಡಿ ಸರ್ಕಾರದ ಈ ಯೋಜನೆಯ ಬಗ್ಗೆ ಅಪಹಾಸ್ಯ ಮಾಡುವ ಸ್ಥಿತಿ ಉಂಟಾಗಿದೆ, ಕೇವಲ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಚಳಿಗಾಲ ಅಧಿವೇಶನ ಸಮಯದಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ, ನವೀಕರಣಗೊಳಿಸಿದ ನಗರದ ಪ್ರಮುಖ ಇಂದಿರಾ ಕ್ಯಾಂಟೀನಿನ ಪರಿಸ್ಥಿತಿ ಹೀಗಾದರೆ ಹೇಗೆ? ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ, ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಾಲಿಕೆಯ ಅಧಿಕಾರಿಗಳು ಇಲ್ಲಿ ಬೇಟಿ ನಿಡುತ್ತಿಲ್ಲವೆ? ಬೇಟಿ ನೀಡಿದರೆ ಈ ಮುಖ್ಯವಾದ ನಾಮಫಲಕದ ವಿಷಯದಲ್ಲಿ ಅವರು ಬೇಜವಾಬ್ದಾರಿ ಏಕೆ ತೋರುತ್ತಿದ್ದಾರೆ? ಸರ್ಕಾರದ ಮುಖ್ಯ ಯೋಜನೆಯ ಬಗ್ಗೆ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ನಿಷ್ಕಾಳಜಿಯೇ? ಏನೆಂಬುದು ತಿಳಿಯದಾಗಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..