ಕನ್ನಡ ಭಾಷಾಪ್ರೇಮ ಮೆರೆದ ಪಿಡಿಒಗೆ ಸತ್ಕರಿಸಿದ ಕರವೇ ಜಿಲ್ಲಾ ಘಟಕ..

ಕನ್ನಡ ಭಾಷಾಪ್ರೇಮ ಮೆರೆದ ಪಿಡಿಒಗೆ ಸತ್ಕರಿಸಿದ ಕರವೇ ಜಿಲ್ಲಾ ಘಟಕ..

ಕನ್ನಡ ಕಾಯುವ ಸರ್ಕಾರಿ ಸಿಬ್ಬಂದಿಗಳ ಜೊತೆ ಕರವೇ ಯಾವತ್ತೂ ಇರುತ್ತದೆ..

ದೀಪಕ ಗುಡಗನಟ್ಟಿ, ಜಿಲ್ಲಾಧ್ಯಕರು ಕರವೇ ಬೆಳಗಾವಿ..

ಬೆಳಗಾವಿ : ಕನ್ನಡದ ಹಿತ ಕಾಪಾಡಿ, ಕನ್ನಡದ ಅಭಿಮಾನ ಪ್ರದರ್ಶಿಸಿದ
ಬೆಳಗಾವಿ ತಾಲ್ಲೂಕಿನ ಕಿಣಿಯೇ ಗ್ರಾಮ ಪಂಚಾಯತಿಯ ಪಿಡಿಓ ನಾಗೇಂದ್ರ ಪತ್ತಾರ ಅವರನ್ನು ಕನ್ನಡ ಮಾತೃಭಾಷಾ ಪ್ರೇಮ ಮೆರೆದ ಕಾರಣಕ್ಕೆ ಇಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಹಾ ಘಟಕದಿಂದ ಸತ್ಕರಿಸಿ ಸನ್ಮಾನಿಸಲಾಗಿದೆ..

ಬೆಳಗಾವಿ ತಾಲೂಕಿನ ಕಿಣಿಯೇ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಇಂದು ಮದ್ಯಾಹ್ನ ಒಬ್ಬ ಯುವಕ ಆಗಮಿಸಿ, ಪಿಡಿಒ ಅವರಿಗೆ ಮಾರಾಠಿ ಮಾತನಾಡುವಂತೆ, ಆಗ್ರಹಿಸಿ ಅವಾಚ್ಯ ಶಬ್ದ ಬಳಕೆ ಕೂಡಾ ಮಾಡಿದ್ದು, ಅದಕ್ಕೆ ಪ್ರತ್ಯುತ್ತರವಾಗಿ “ಇದು ಕರ್ನಾಟಕ ನಾನು, ನಾನು ಕನ್ನಡದಲ್ಲೇ ಮಾತಾಡುವೆ” ಎಂದು ತಮ್ಮ ವೃತ್ತಿಪರತೆ ಜೊತೆ ಭಾಷಾಭಿಮಾನದ ಮಾತುಗಳನ್ನು ಆಡಿದ್ದರು.

ವಿಷಯ ತಿಳಿದ ತಕ್ಷಣ ಬೆಳಗಾವಿಯ ಕರವೇ ಜಿಲ್ಲಾ ಘಟಕ ಅಧ್ಯಕ್ಷರಾದ ದೀಪಕ್ ಗುಡಗನಟ್ಟಿ ಅವರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರೆಲ್ಲರೂ ಒಂದಾಗಿ ಪಂಚಾಯತಿ ಕಚೇರಿಗೆ ಹೋಗಿ ಪಿಡಿಒ ಅವರನ್ನು ಸತ್ಕರಿಸಿ, ಗೌರವಿಸಿ ತಮ್ಮ ಜೊತೆ ಕರವೇ ಯಾವತ್ತೂ ಇರುತ್ತದೆ ಎಂದು ಹೇಳಿ, ಪಂಚಾಯತ ಅಭಿವೃದ್ದಿ ಅಧಿಕಾರಿಗೆ ನೈತಿಕ ಬೆಂಬಲ ಸೂಚಿಸಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ.