ಡಾ ಬಿ ಆರ್ ಅಂಬೇಡ್ಕರ ಅವರ ಜನ್ಮ ದಿನಾಚರಣೆಯ ಪೂರ್ವಭಾವಿ ಸಭೆ..
134 ನೇಯ ಜಯಂತಿಯ ಅರ್ಥಪೂರ್ಣ ಆಚರಣೆಗೆ ಸಭೆಯಲ್ಲಿ ತೀರ್ಮಾನ..
ಬೆಳಗಾವಿ : ಬರುವ ಏಪ್ರಿಲ್ ಹದಿನಾಲ್ಕರಂದು ಬೆಳಗಾವಿಯಲ್ಲಿ ಜರುಗುವ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ ಅವರ 134ನೆ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಣೆ ಮಾಡುವ ತೀರ್ಮಾನಕ್ಕೆ ಬರಲಾಗಿದೆ.
ಸೋಮವಾರ ದಿನಾಂಕ 17/03/2025 ರಂದು ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಭಾಗಿತ್ವದಲ್ಲಿ ಜಯಂತಿಯ ಅಂಗವಾಗಿ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ರೂಪಕ ವಾಹನಗಳ ಸಮಯ ಹಾಗೂ ಮೆರವಣಿಗೆ ಪಥದ ಬದಲಾವಣೆ ಬಗ್ಗೆ ಸಮುದಾಯದ ಕೆಲ ನಾಯಕರು ಸಲಹೆ ನೀಡಿದ್ದು, ಮಲ್ಲೇಶ ಚೌಗಲೆ ಕೂಡಾ ಕೆಲ ಸಲಹೆ ಸೂಚನೆ ನೀಡಿದ್ದು, ಉತ್ತರಿಸಿದ ಜಿಲ್ಲಾಧಿಕಾರಿಗಳು ಬಿಸಿಲು ಇರುವ ಕಾರಣ ಜನರ ಅನುಕೂಲತೆಗೆ ತಕ್ಕಂತೆ ಬೆಳಿಗ್ಗೆ ಜ್ಯೋತಿಯ ಸ್ವಾಗತ ಹಾಗೂ ಸಂಜೆ 4ರಿಂದ ರಾತ್ರಿ 11ಗಂಟೆವರೆಗೆ ರೂಪಕ ವಾಹನಗಳ ಮೆರವಣಿಗೆ ನಡೆಯಬೇಕು ಎಂದು ಸಭೆಯಲ್ಲಿ ಸರ್ವಮತದ ಸಮ್ಮತಿ ದೊರೆತಿದ್ದು, ಜಿಲ್ಲಾಧಿಕಾರಿಗಳು
ಪೊಲೀಸ್ ಇಲಾಖೆಗೂ ಸಾರ್ವಜನಿಕರಿಗೂ ಅನುಕೂಲ ಆಗುವ ರೀತಿಯಲ್ಲಿ ಮೆರವಣಿಗೆ ಮಾಡಬೇಕು ಎಂಬ ಸಲಹೆ ನೀಡಿದರು.
ಸೌಂಡ ಬಾಕ್ಸ ಹಚ್ಚುವ ವಿಚಾರದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಸಮುದಾಯದ ಮುಖಂಡರ ಮಾಡುವ ಸ್ವಲ್ಪ ಬಿಸಿ ಚರ್ಚೆ ಆದಾಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿಗಳು ನಾವು ಯಾವ ದಿನಾಚರಣೆ ಆಚರಿಸುತ್ತಿದ್ದೇವೆ ಎಂಬುದು ನೆನಪಿರಲಿ, ನಾವು ಏನು ಮಾಡುತ್ತಿದ್ದೆವೇ ಎಂಬುದು ನಮಗೆ ತಿಳಿದಿರಲಿ, ಇದು ಬಾಬಾಸಾಹೇಬರ ಜನ್ಮದಿನ, ನಾವು ಬರೀ ಡಿಜೆ ಸಲುವಾಗಿ ಅರ್ಧಗಂಟೆ ಚರ್ಚೆ ಮಾಡಿದರೆ ಹೇಗೆ ಎಂದರು..

ಬಾಬಾಸಾಹೇಬರ ವಿಚಾರಗಳು ಹಾಗೂ ಸಂವಿಧಾನದ ಬಗ್ಗೆ ಅವರು ನೀಡಿದಂತ ಹೇಳಿಕೆಗಳನ್ನು ಈ ಜಯಂತಿಯ ದಿನ ಎಲ್ಲಾ ಕಡೆಗೆ ಕಾಣುವಂತೆ ಹಾಕಬೇಕು ಎಂಬ ಮನವಿಯನ್ನು ಮಹಿಳಾ ಮುಖಂಡರೊಬ್ಬರು ನೀಡಿದರು.
ಈ ಸಭೆಯಲ್ಲಿ ನಗರದ ಅಶೋಕ ಸ್ಥಂಭದಲ್ಲಿ ಕೂಡಾ ಒಂದು ತಿಂಗಳ ಕಾಲ ದ್ವೀಪದ ವ್ಯವಸ್ಥೆ,
ಸಾರಿಗೆ ಇಲಾಖೆ ನೀರಾವರಿ ಲೋಕೋಪಯೋಗಿಯಿಂದ ವಾಹನಗಳಿಗೆ ಇಂಧನ ಪೂರೈಕೆ,
ಒಂದು ದಿನದ ಮಧ್ಯಪಾನದ ನಿಷೇಧದ ತೀರ್ಮಾನ ಹಾಗೂ ಪುಸ್ತಕ ಪ್ರದರ್ಶನ ವ್ಯವಸ್ಥೆಯ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಕೊನೆಯಲ್ಲಿ ಸಮುದಾಯದ ಮುಖಂಡರಾದ ಮಲ್ಲೇಶ್ ಚೌಗಲೆ ಅವರು ಮಾತನಾಡಿ, ಭಾರತ ಭಾಗ್ಯ ವಿದಾತಾ ಎಂಬ ನಾಟಕವನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬೆಳಗಾವಿಯ ಸರ್ದಾರ ಮೈದಾನದಲ್ಲಿ ಪ್ರದರ್ಶನ ಮಾಡಬೇಕು, ಆ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಬಾಬಾಸಾಹೇಬರ ಕೊಡುಗೆ, ಸಮಾನತೆ ಹಾಗೂ ಸಂವಿಧಾನದ ಮಹತ್ವ ತಿಳಿಸಿದಂತಾಗುತ್ತದೆ ಆದಕಾರಣ ದಯಮಾಡಿ ಆ ನಾಟಕದ ಪ್ರದರ್ಶನವನ್ನು ಮಾಡಿಸಿದರೆ ತುಂಬಾ ಒಳ್ಳೆಯದಾಗುತ್ತದೆ ಎಂದರು,
ಅದೇರೀತಿ ಆರರಿಂದ ಎಂಟು ಆಂಬುಲೆನ್ಸ್ ಅದರ ಜೊತೆಗೆ ವೈದ್ಯಕೀಯ ಸಿಬ್ಬಂದಿಗಳ ವ್ಯವಸ್ಥೆ ಆಗಬೇಕು.
ಮೆರವಣಿಗೆ ಉದ್ದಕ್ಕೂ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು,
ಸಂಘ ಸಂಸ್ಥೆಗಳಿಗೆ ವ್ಯವಸ್ಥಿತ ಪೆಂಡಾಲ್ ಹಾಕಲು ಎಲ್ಲಾ ರೀತಿಯ ವ್ಯವಸ್ಥೆ ಅನುಕೂಲ ಮಾಡಿಕೊಡಬೇಕು ಎಂಬ ಸಲಹೆ ಸೂಚನೆ ನೀಡಿದರು.

ಇನ್ನು ಏಪ್ರಿಲ್ 14 ರಂದು ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಕರೆಸಿ, ಅವರ ಸಮ್ಮುಖದಲ್ಲಿ ಬಾಬಾಸಾಹೇಬರ ಜಯಂತಿ ಆಚರಣೆ ಮಾಡಬೇಕು ಇದರಿಂದ ಮುಂದಿನ ಪ್ರಜೆಗಳಾಗುವ ಈಗಿನ ಮಕ್ಕಳ ಮನಸಲ್ಲಿ ಬಾಬಾಸಾಹೇಬರ ಸಾಧನೆ, ಕೊಡುಗೆಗಳು ತಿಳಿಯುತ್ತವೆ ಜೊತೆಗೆ ಮಕ್ಕಳಿಗೆ ಸ್ಪೂರ್ತಿ ಆಗುತ್ತವೆ ಎಂಬ ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಈ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪಾಲಿಕೆಯ ಆಯುಕ್ತರು, ಉಪನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪ ಅಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಮಿತಿಗಳ ಪದಾಧಿಕಾರಿಗಳು, ದಲಿತಪರ ಸಂಘಟನೆಯ ಪದಾಧಿಕಾರಿಗಳು, ಸಮುದಾಯದ ಪ್ರಮುಖರು, ಯುವಕರು ಉಪಸ್ಥಿತರಿದ್ದ ಈ ಸಭೆಯನ್ನು ಸಮಾಜಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಅತ್ಯುತ್ತಮವಾಗಿ ನಡೆಸಿಕೊಟ್ಟರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ.