ಬಿಜೆಪಿಯ ಮಹಾನಗರ ಜಿಲ್ಲಾ ಕಾರ್ಯಾಲಯಕ್ಕೆ ಮೇಯರ ಹಾಗೂ ಉಪ ಮೇಯರ ಬೇಟಿ..
ಮಹಾನಗರ ಜಿಲ್ಹಾ ಬಿಜೆಪಿ ಕಚೇರಿಯಿಂದ ಮಹನೀಯರಿಗೆ ಗೌರವದ ಸತ್ಕಾರ..
ಬೆಳಗಾವಿ : ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ಜಿಲ್ಲಾ ಕಾರ್ಯಾಲಯಕ್ಕೆ ಸೋಮವಾರ ದಿನಾಂಕ 17/03/2025ರಂದು ನೂತನ ಮಹಾನಗರ ಪಾಲಿಕೆಯ ಮಹಾಪೌರರಾದ ಮಂಗೇಶ ಪವಾರ ಹಾಗೂ ಉಪಮಹಾಪೌರರಾದ ವಾಣಿ ಜೋಷಿ ಅವರು ಭೇಟಿ ನೀಡಿದರು.
ಜಿಲ್ಲಾ ಕಚೇರಿಗೆ ಆಗಮಿಸಿದ ಮಹನೀಯರಿಗೆ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಭಾಜಪಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಗೀತಾ ಸುತಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ್ ಧೋನಿ, ಈರಯ್ಯಾ ಖೋತ ಹಾಗೂ ಪ್ರಮುಖ ಜಿಲ್ಲಾ ಪದಾಧಿಕಾರಿಗಳು, ನಗರಸೇವಕರು, ಕಾರ್ಯಕರ್ತರು ಸತ್ಕಾರ ಸಮಾರಂಭದಲ್ಲಿ ಭಾಗಿಯಾಗಿದ್ದರೆಂದು
ನಗರ ಬಿಜೆಪಿಯ ಮಾಧ್ಯಮ ಸಂಚಾಲಕ ಹಾಗೂ ನಗರ ಸೇವಕರಾದ ಹನಮಂತ ಕೊಂಗಾಲಿ ಅವರು ತಿಳಿಸಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ.