ಬೆಳಗಾವಿಯ ವಿಜಯಾ ಒರ್ಥೋ ಮತ್ತು ಟ್ರಾಮಾ ಸೆಂಟರ್‌ನಲ್ಲಿ ಹೈ-ಟೆಕ್ ಡಯಾಲಿಸಿಸ್ ಘಟಕ ಉದ್ಘಾಟನೆ..

ಬೆಳಗಾವಿಯ ವಿಜಯಾ ಒರ್ಥೋ ಮತ್ತು ಟ್ರಾಮಾ ಸೆಂಟರ್‌ನಲ್ಲಿ ಹೈ-ಟೆಕ್ ಡಯಾಲಿಸಿಸ್ ಘಟಕ ಉದ್ಘಾಟನೆ..

ಅತೀ ಕಡಿಮೆ ಅಂದರೆ 700 ರೂಪಾಯಿಗಳಲ್ಲಿ ಡಯಾಲಿಸಿಸ ಸೌಲಭ್ಯ..

ಬೆಳಗಾವಿ : ಮಾರ್ಚ್ 19, 2025 ಕಳೆದ 25 ವರ್ಷಗಳಿಂದ ಆರೋಗ್ಯ ಸೇವೆ ನೀಡುತ್ತಿರುವ ವಿಶ್ವಾಸಾರ್ಹ ಬಹು-ವಿಶೇಷ ಆಸ್ಪತ್ರೆಯಾದ ವಿಜಯಾ ಒರ್ಥೋ ಮತ್ತು ಟ್ರಾಮಾ ಸೆಂಟರ್ ಈಗ AYU ಫೌಂಡೇಶನ್, ರೋಟ್ರಾಕ್ಟ್ ಡಿಸ್ಟ್ರಿಕ್ 3170, ಮತ್ತು ವಿಜಯಕಾಂತ್ ಡೈರಿ & ಫುಡ್ ಪ್ರೊಡಕ್ಟ್ಸ್ ಲಿಮಿಟೆಡ್ (ಕಿಂಗ್ ಐಸ್ ಕ್ರೀಮ್ ತಯಾರಕರು) ಸಹಯೋಗದೊಂದಿಗೆ ಆಧುನಿಕ ಡಯಾಲಿಸಿಸ್ ಘಟಕ ಸ್ಥಾಪಿಸಿದೆ. ₹25 ಲಕ್ಷ ಮೌಲ್ಯದ ಈ ಯೋಜನೆಯು, ಪ್ರತಿಯೊಂದು ಡಯಾಲಿಸಿಸ್ ಸೇವೆಯನ್ನು ಕೇವಲ ₹700 ಕ್ಕೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು ಎಂಬ ಉದ್ದೇಶವನ್ನು ಹೊಂದಿದೆ.

ಹೊಸದಾಗಿ ಉದ್ಘಾಟನೆಯಾದ ವಿಜಯಾ ಒರ್ಥೋ ಮತ್ತು ಟ್ರಾಮಾ ಸೆಂಟರ್‌ನ ಡಯಾಲಿಸಿಸ್ ಘಟಕದಲ್ಲಿ ಅತ್ಯಾಧುನಿಕ ಡಯಾಲಿಸಿಸ್ ಯಂತ್ರಗಳು ಹಾಗೂ ಅನುಭವೀ ನೆಫ್ರೋಲಾಜಿಸ್ಟ್, ಯುರೋಲಾಜಿಸ್ಟ್ ಮತ್ತು ತರಬೇತಿ ಪಡೆದ ತಂತ್ರಜ್ಞರು ಲಭ್ಯವಿದ್ದು, 24×7 ಸೇವೆಗಳನ್ನು ಒದಗಿಸಲಾಗುತ್ತಿದೆ.

ವಿಜಯಾ ಒರ್ಥೋ ಮತ್ತು ಟ್ರಾಮಾ ಸೆಂಟರ್ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟುಕುವ ದರದಲ್ಲಿ ನೀಡಲು ಬದ್ಧವಾಗಿದೆ. ನ್ಯೂರೋಸರ್ಜರಿ, ಸ್ಪೈನ್ ಸರ್ಜರಿ, ಜಾಯಿಂಟ್ ರಿಪ್ಲೇಸ್‌ಮೆಂಟ್, ಅರ್ಥೋಸ್ಕೋಪಿ, ಮೆಡಿಸಿನ್ ಮತ್ತು ಜನರಲ್ ಸರ್ಜರಿ ಸೇರಿದಂತೆ ಎಲ್ಲಾ ಬಹು-ವಿಶೇಷ ಚಿಕಿತ್ಸಾ ಸೇವೆಗಳು ಒಟ್ಟಿಗೆ ಲಭ್ಯವಿರುವುದು ರೋಗಿಗಳಿಗೆ ಹೆಚ್ಚುವರಿ ಅನುಕೂಲವನ್ನು ಒದಗಿಸುತ್ತದೆ.

ಉದ್ಘಾಟನಾ ಸಮಾರಂಭ
ಡಯಾಲಿಸಿಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ದೀಪಾ ಸಿದ್ನಾಳ್ ಮತ್ತು ವಿಜಯಕಾಂತ್ ಸಿದ್ನಾಳ್ (ವಿಜಯಕಾಂತ್ ಡೈರೀಸ್‌ನ ವ್ಯವಸ್ಥಾಪಕ ನಿರ್ದೇಶಕರು) ಮಾನ್ಯ ಅತಿಥಿಗಳಾಗಿ ಪಾಲ್ಗೊಂಡರು. ವಿಜಯಾ ಒರ್ಥೋ ಮತ್ತು ಟ್ರಾಮಾ ಸೆಂಟರ್‌ನ ನಿರ್ದೇಶಕರಾದ ಡಾ. ರವಿ ಪಾಟೀಲ್, ಹೊಸ ಡಯಾಲಿಸಿಸ್ ಘಟಕದ ನಿರ್ವಹಣೆಯನ್ನು ವಹಿಸಿಕೊಂಡಿದ್ದು. ರೋಟ್ರಾಕ್ಟ್ ಡಿಸ್ಟ್ರಿಕ್ 3170ರ ಡಿಸ್ಟ್ರಿಕ್ ರೋಟ್ರಾಕ್ಟ್ ಪ್ರತಿನಿಧಿ (DRR) ನಿಖಿಲ್ ಚಿಂದಕ್, AYU ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ಮನೋಜ್ ಸುತಾರ, ಟ್ರಸ್ಟಿ ಕಾರ್ಯದರ್ಶಿ ನೀಲೇಶ್ ಪಾಟೀಲ್, ರಾಜಶ್ರೀ ಪಾಟೀಲ್ (ಟ್ರಸ್ಟಿ), ಡಾ. ನೇತ್ರಾ ಸುತಾರ (ಟ್ರಸ್ಟಿ) ಇವರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಡಿಸ್ಟ್ರಿಕ್ ಸೆಕ್ರೆಟರಿ ಅಡ್ಮಿನ್ ಕೆತನ ಶಿಂಧೆ, ಡಿಸ್ಟ್ರಿಕ್ ಸೆಕ್ರೆಟರಿ ರಿಪೋರ್ಟಿಂಗ್ ಮೋನಿಕಾ ಅಸುಂಡಿ, ಅಸಿಸ್ಟೆಂಟ್ DRR ನಿತಿನ್ ಮುಂಡಾಡಾ, ಮಹೇಶ್ ಶಿಂಧೆ, ಗೌರವ್ ಜೋಷಿ (ಬೆಳಗಾವಿ ಸೌತ್ ರೋಟ್ರಾಕ್ಟ್ ಕ್ಲಬ್‌ನ ಅಧ್ಯಕ್ಷ ಮತ್ತು ಕಾರ್ಯದರ್ಶಿ) ಇವರು ಕೂಡ ಹಾಜರಿದ್ದರು.

ಅತಿಥಿಗಳ ಉದ್ದೇಶ ಭಾಷಣ
ದೀಪಾ ಸಿದ್ನಾಳ್ ಅವರು ಸಾಮಾಜಿಕ ಸೇವೆಗಳಲ್ಲಿಯೂ ವಿಜಯಕಾಂತ್ ಡೈರೀಸ್ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಪ್ರಭಾವಶಾಲಿ ಮಾತುಗಳನ್ನು ಹಂಚಿಕೊಂಡರು. ಡಾ. ಮನೋಜ್ ಸುತಾರ ಮತ್ತು ನಿಖಿಲ್ ಚಿಂದಕ್ ಅವರು ಸಮುದಾಯಾಧಾರಿತ ಆರೋಗ್ಯ ಸೇವೆಗಳ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಡಾ. ರವಿ ಪಾಟೀಲ್ ಅವರು ಈ ಮಹತ್ವದ ಸೇವೆಯನ್ನು ಬೆಳಗಾವಿ ಜನತೆಗೆ ಒದಗಿಸಲು ಸಹಕರಿಸಿದ ಎಲ್ಲಾ ಪಾಲುದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಹೊಸ ಸೇವೆಯೊಂದಿಗೆ, ವಿಜಯಾ ಒರ್ಥೋ ಮತ್ತು ಟ್ರಾಮಾ ಸೆಂಟರ್ ತಂತ್ರಜ್ಞಾನಾಧಾರಿತ, ಕೈಗೆಟುಕುವ, ಮತ್ತು ರೋಗಿ ಕೇಂದ್ರಿತ ಆರೋಗ್ಯ ಸೇವೆಗಳನ್ನು ಒದಗಿಸುವ ತನ್ನ ಉದ್ದೇಶವನ್ನು ಮತ್ತಷ್ಟು ಬಲಪಡಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿಜಯಾ ಒರ್ಥೋ ಮತ್ತು ಟ್ರಾಮಾ ಸೆಂಟರ್
ವಿಜಯಾ ರೋಡ್, ಅಯೋಧ್ಯಾ ನಗರ, ಬೆಳಗಾವಿ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..