ಸುಳೇಬಾವಿಯ ಶ್ರೀ ಮಹಾಲಕ್ಷ್ಮಿದೇವಿ ದರ್ಶನ ಪಡೆದ ಸಂಸದ ಜಗದೀಶ್ ಶೆಟ್ಟರ್..

ಸುಳೇಬಾವಿಯ ಶ್ರೀ ಮಹಾಲಕ್ಷ್ಮಿದೇವಿ ದರ್ಶನ ಪಡೆದ ಸಂಸದ ಜಗದೀಶ್ ಶೆಟ್ಟರ್..

ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಬಾವಿ, ಮೊದಗಾ ಜಾತ್ರೆಯಲ್ಲಿ ಭಾಗಿಯಾದ ಕೇಸರಿ ಪಡೆ..

ಬೆಳಗಾವಿ : ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸಂಸದರಾದ ಜಗದೀಶ ಶೆಟ್ಟರ ಅವರು ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೋದಗಾ ಹಾಗೂ ಸುಳೇಬಾವಿ ಗ್ರಾಮಗಳ ಮಹಾಲಕ್ಷ್ಮಿ ದೇವಸ್ಥಾನಗಳಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದಾರೆ.

ದೇವಸ್ಥಾನದ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ದೇವಣ್ಣ ಬಂಗೇನ್ನವರ ಹಾಗೂ ಕಮಿಟಿಯ ಸದಸ್ಯರು ದೇವಸ್ಥಾನಕ್ಕೆ ಆಗಮಿಸಿದ ಗಣ್ಯರಿಗೆ ಸತ್ಕರಿಸಿಲಾಗಿದ್ದು, ಗ್ರಾಮದ ಸರ್ವ ಜನತೆಯ ಮೇಲೆ ಆದಿಶಕ್ತಿ ಮಹಾಲಕ್ಷ್ಮಿ ದೇವಿಯ ಕೃಪೆಯಿರಲಿ ಎಂಬ ಕೋರಿಕೆಯಿತ್ತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸುಭಾಷ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷರಾದ ಯುವರಾಜ ಜಾಧವ್, ಬಿಜೆಪಿಯ ಪ್ರಮುಖರಾದ ಧನಂಜಯ ಜಾಧವ್, ಚೇತನ ಅಂಗಡಿ, ಸ್ಥಳೀಯ ಮುಖಂಡರು ಹಾಗೂ ಆಯಾ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ.