ಪೋಷಕ ಮಾಶಾಸನ ಅಭಿಯಾನದಡಿಯಲ್ಲಿ ಮೂರು ಸಾವಿರ ಗರ್ಭಿಣಿಯರಿಗೆ ಸೀಮಂತ.
ಯುಗಾದಿ ಹಬ್ಬದ ಸಮಯದಲ್ಲಿ ಕ್ಷೇತ್ರದ ಮಹಿಳೆಯರಿಗೆ ಸೀಮಂತ ಸಡಗರ..
ಬೆಳಗಾವಿ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಾಡುತ್ತಿರುವ ಮೂರು ಸಾವಿರ ಗರ್ಭಿಣಿಯರಿಗೆ ಸೀಮಂತದ ಈ ಕಾರ್ಯಕ್ರಮ ಮನಸ್ಸಿಗೆ ತುಂಬಾ ಹತ್ತಿರವಾದ ಹಾಗೂ ಹಬ್ಬದ ವಾತಾವರಣ ನಿರ್ಮಿಸಿದ ಕಾರ್ಯಕ್ರಮ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಸೋಮವಾರ ನಗರದ ಸಿಪಿಎಡ್ ಮೈದಾನದ ಭವ್ಯ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ವಿಶೇಷ ಹಾಗೂ ಆಯೋಜನೆ ಕುರಿತಾಗಿ ಸಂತಸ ವ್ಯಕ್ತ ಪಡಿಸಿ ಮಾತನಾಡಿದ ಸಚಿವರು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಮೊದಲಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಇಲಾಖೆಯ ಉಪನಿರ್ದೇಶಕರಾದ ನಾಗರಾಜ ಅವರು, ಇಲಾಖೆಗೆ ಆಧುನಿಕತೆಯ ಸ್ಪರ್ಶ ನೀಡಿದವರು ನಮ್ಮ ಸಚಿವರು ರಾಜ್ಯದಲ್ಲೇ ಪ್ರಥಮವಾಗಿ 3 ಸಾವಿರ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಾಗೂ ನೂರು ಜನ ಅಂಗವಿಕಲರಿಗೆ ತ್ರಿಚಕ್ರ ವಿತರಣೆ ಕಾರ್ಯಕ್ರಮ ನಡೆಯುತ್ತಿದ್ದು, ಇಂತಹ ಅತ್ಯದ್ಬುತ ಕಾರ್ಯಕ್ಕೆ
ನಮ್ಮೆಲ್ಲರಿಗೂ ಮೇಡಂ ಅವರೇ ಸ್ಪೂರ್ತಿಯಾಗಿದ್ದಾರೆ, ಮುಂದಿನ ದಿನಗಳಲ್ಲಿ ಅವರು ಮುಖ್ಯಮಂತ್ರಿ ಆಗುವರು, ಅವರು ಸಾಮಾನ್ಯರಲ್ಲ ಕಲ್ಲು ಮುಳ್ಳು ದಾರಿಯಲ್ಲಿ ನಡೆದು ಗೆದ್ದು ಬಂದಿರುವರು ಎಂಬ ಮೆಚ್ಚುಗೆಯ ಮಾತು ವ್ಯಕ್ತಪಡಿಸಿದ್ದು,
ಜಿಡ್ಡುಗಟ್ಟಿ ನಿಂತ ಇಲಾಖೆಗೆ ಹೊಸ ಚೇತನ ನೀಡಿದ್ದು ನಮ್ಮ ನೆಚ್ಚಿನ ಮೇಡಂ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಇನ್ನು ಕಾರ್ಯಕ್ರಮದ ಕೇಂದ್ರಬಿಂದು ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪ್ರಥಮ ಭಾರಿಗೆ ಸೀಮಂತ ಕಾರ್ಯಕ್ರಮ ಮಾಡುವ ಯೋಚನೆ ಬಂದಿದ್ದು, ಇದೊಂದು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಆಯೋಜನೆಗೊಂಡಿರುವ ಸರ್ಕಾರದ ಕಾರ್ಯಕ್ರಮ ಆದರೂ ನನ್ನ ಮನಸಿಗೆ ಹತ್ತಿರವಾದ ಕಾರ್ಯಕ್ರಮ, ನಿಜವಾಗಿ ಇದೊಂದು ಹಬ್ಬದ ವಾತಾವರಣ ಸರ್ಕಾರದ ಕಾರ್ಯಕ್ರಮ ಆಗಿದೆ ಎಂದಿದ್ದಾರೆ.
ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರಿಂದ ಉದ್ಯೋಗ ಮಾಡುವ ಮಹಿಳೆಯವರೆಗೂ ಎಲ್ಲರಿಗೂ ಸಲ್ಲುವ ಗೌರವವಿದು, ರಾಜ್ಯದಲ್ಲಿ ಮಹಿಳೆಯರಿಗೆ ಹಲವು ಯೋಜನೆ ತಂದಿದ್ದು ನಮ್ಮ ಕಾಂಗ್ರೆಸ್ ಸರ್ಕಾರ, ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವ ಇಲಾಖೆ ನಮ್ಮದು, ಅದರಂತೆ ನಾವು ಕೂಡಾ ಮಹಿಳಾ ಸಬಲೀಕರಣಕ್ಕಾಗಿ ಹತ್ತು ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೇವೆ ಎಂದಿದ್ದಾರೆ.

ಇನ್ನು ಈ ವಿಶೇಷ ಕಾರ್ಯಕ್ರಮದ ಮೂಲಕ ವಿಕಲಚೇತನರಿಗೆ 100 ಎಲೆಕ್ಟ್ರಾನಿಕ್ ಗಾಲಿ ಕುರ್ಚಿಗಳನ್ನು ನೀಡಿದ್ದೇವೆ, ತ್ರಿಚಕ್ರ ವಾಹನಗಳನ್ನು ಕೂಡಾ ನೀಡಿದ್ದೇವೆ, ಹಿರಿಯ ನಾಗರಿಕರನ್ನು ಗೌರವಿಸುವ ಸನ್ಮಾನಿಸುವ ಕಾರ್ಯಕ್ರಮವನ್ನು ನೆರವೇರಿಸಿದ್ದೇವೆ ಎಂದಿದ್ದಾರೆ.

ನನ್ನ ಇಲಾಖೆಯ ಉಪನಿರ್ದೇಶಕರಾದ ನಾಗರಾಜು ಅವರು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಯಾದ ಸುಮಿತ್ರಾ ಅವರು ಅತೀ ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಈ ಯಶಸ್ವಿ ಕಾರ್ಯಕ್ರಮಕ್ಕಾಗಿ ತುಂಬಾ ಕೃತಜ್ಞತೆ ಹೇಳುತ್ತೇನೆ ಎಂದಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..