ಕ್ಯಾಬೀಜ ಹಾಗೂ ಇತರ ತರಕಾರಿಗಳ ಹಾನಿಗೆ ಸೂಕ್ತ ಪರಿಹಾರ ನೀಡಿ..

ಕ್ಯಾಬೀಜ ಹಾಗೂ ಇತರ ತರಕಾರಿಗಳ ಹಾನಿಗೆ ಸೂಕ್ತ ಪರಿಹಾರ ನೀಡಿ..

ಸರ್ಕಾರ ಈಗಲಾದರೂ ರೈತರ ಬಗ್ಗೆ ಕಾಳಜಿ ತೋರಲಿ..

ಅಪ್ಪಾಸಾಹೇಬ ದೇಸಾಯಿ, ರೈತ ಸಂಘದ ಹೋರಾಟಗಾರರು.

ಬೆಳಗಾವಿ : ದರ ಕುಷಿತದಿಂದ ಹೊಲದಲ್ಲಿಯೇ ಕೊಳೆತು ಹೋಗುತ್ತಿರುವ ಕ್ಯಾಬೀಜ್ ಹಾಗೂ ಇತರ ತರಕಾರಿಗಳಿಗೆ ದರ ನಿಗದಿ ಪಡಿಸಿ, ಆಗಿರುವ ಹಾನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಬೆಳಗಾವಿ ರೈತ ಸಂಘದ ಹೋರಾಟಗಾರರಾದ ಅಪ್ಪಾಸಾಹೇಬ ದೇಸಾಯಿಯವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ರೈತರು ನೂರಾರು ಎಕರೆಗಳಲ್ಲಿ ತರಕಾರಿಗಳನ್ನು ಬೆಳೆದಿದ್ದು, ತರಕಾರಿಗಳ ಬೆಲೆ ಕುಸಿತದ ಕಾರಣದಿಂದ ಅವುಗಳನ್ನು ಮಾರಾಟ ಮಾಡದೆ ಇವು ಹೊಲದಲ್ಲಿಯೇ ಹಾಳಾಗುವ ಸ್ಥಿತಿ ನಿರ್ಮಾಣವಾಗಿದೆ, ಇದರಿಂದ ಸಾಮಾನ್ಯ ರೈತರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ.

ನಾವು ಕಳೆದ 20 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದೇವೆ, ಯಾವ ಸರ್ಕಾರಗಳೂ ಇದರ ಬಗ್ಗೆ ಗಮನ ಹರಿಸಿಲ್ಲ, ಈಗಲಾದರೂ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿ, ತರಕಾರಿ ಬೆಲೆ ನಿಗದಿ ಮಾಡಿ, ಆದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಮುಖಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ರೈತ ಪ್ರಮುಖರಾದ ಸುಭಾಸ ದಾಯಗೊಂಡೆ, ಮಾರುತಿ ಕಡೆಮಾನಿ, ರಾಮನಗೌಡ ಪಾಟೀಲ, ಚಂದ್ರು ರಾಜಾಯಿ, ರಾಜು ಕಾಗನೆಕರ್, ಫಕಿರಾ ಸದಾವರ ಮತ್ತಿತರರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ.