ಬಿಜೆಪಿಯವರಿಗೆ ನೈತಿಕ ಹಕ್ಕಿಲ್ಲ, ಬೆಲೆಯೇರಿಕೆಗೆ ಮೋದಿ ಸರ್ಕಾರವೇ ಕಾರಣ..
ಹಾಲಿನ ದರದ ಹೆಚ್ಚಳದಿಂದ ರೈತರಿಗೆ ಲಾಭವಾಗಿದೆ.
ಬಿಜೆಪಿಯವರು ರೈತ ವಿರೋಧಿಗಳಾ??
ಬೆಳಗಾವಿ : ಕ್ರುಡಾಯಿಲ ಹಾಗೂ ಗ್ಯಾಸ್ ಬೆಲೆಗಳನ್ನು ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ, ಅದನ್ನು ಯಾಕೆ ಹೆಚ್ಚು ಮಾಡಿದೆ? ಬಿಜೆಪಿಯವರಿಗೆ ಬೆಲೆಯೇರಿಕೆ ಬಗ್ಗೆ ಮಾತಾಡುವ ನೈತಿಕ ಹಕ್ಕು ಇಲ್ಲ, ಬೆಲೆಯೇರಿಕೆ ಆಗಿರುವದು ಬಿಜೆಪಿಯ ಕಾಲದಲ್ಲೇ, ಕೇಂದ್ರ ಸರ್ಕಾರದ ತಪ್ಪು ನೀತಿಯಿಂದ ಇಂದು ಅವಶ್ಯಕ ವಸ್ತುಗಳ ಬೆಲೆ ಏರಿಕೆ ಆಗಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರದಲ್ಲಿ ಯಾರದಾದರೂ ಸಂಬಳ ನಿಂತು ಹೋಗಿದೆಯಾ? ಪೆನ್ಸೆನ್ ಗಳು ನಿಂತಿವೆಯಾ? ಸಾಮಾಜಿಕ ಭದ್ರತೆಯ ಪೆನ್ಸನ್ ನಿಂತಿವೆಯಾ? ಬಿಜೆಪಿಯವರು ತಮ್ಮ ಅವಧಿಯಲ್ಲಿ ದುಡ್ಡು ಇಲ್ಲದಿದ್ದರೂ ಕೆಲಸಗಳನ್ನು ಅನುಮೋದನೆ ಮಾಡಿ, ಟೆಂಡರ್ ಕರೆದು ದುಡ್ಡು ಹೊಡೆದು ಹೋಗಿಬಿಟ್ಟರು ಈಗ ನಮಗೆ ಪಾಠ ಹೇಳುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

ಜಾತಿ ಜನಗಣತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಾತಿಗಣತಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ, ಜನರ ವಿವಿಧ ರಂಗದ ಸ್ಥಿತಿಗತಿ ತಿಳಿಯಲು ಜನಗಣತಿ ಅವಶ್ಯಕ, ಸರ್ವೇ ಸರಿಯಾಗಿ ಆಗಿಲ್ಲ ಎನ್ನುವದು ತಪ್ಪು ತಿಳುವಳಿಕೆ ಎಂದಿದ್ದಾರೆ, ಇನ್ನು ಗಡಿ ವಿಷಯದ ಬಗ್ಗೆ ಉತ್ತರಿಸಿದ ಮುಖ್ಯಮಂತ್ರಿಗಳು ಬೆಳಗಾವಿಯನ್ನು ನಾವು ಯಾವ ಕಾರಣಕ್ಕೂ ಬಿಟ್ಟು ಕೊಡುವದಿಲ್ಲ ಎಂದು ಗಟ್ಟಿಯಾಗಿ ಹೇಳಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ.