ಸತೀಶ ಜಾರಕಿಹೊಳಿ ಅವರು ಕರ್ನಾಟಕದ ಮಹಾನ ಶಕ್ತಿ..
ಅವರ ಯೋಚನೆ ಹಾಗೂ ಯೋಜನೆಗಳು ಅಸಂಖ್ಯಾತ ವಿದ್ಯಾವಂತರಿಗೆ ದಾರಿ ದೀಪವಾಗಿವೆ.
ಇಂದು ಅವರು ಎಲ್ಲಾ ಕ್ಷೇತ್ರಗಳಲ್ಲೂ ದಿಗ್ವಿಜಯ ಸಾಧಿಸಲು ಅವರ ಹೃದಯ ವೈಶಾಲ್ಯವೇ ಕಾರಣ..
ರಾಮತೀರ್ಥ ನಗರದ ನಿವಾಸಿಗಳ ಅಭಿಮಾನದ ನುಡಿಗಳು..
ಬೆಳಗಾವಿ : ದೇವಸ್ಥಾನದ ಬಳಿಯ (ಅಕ್ಕ ಪಕ್ಕದ) ಖುಲ್ಲಾ ಜಾಗೆಗಳಲ್ಲಿ ವ್ರದ್ಧರು, ಮಹಿಳೆಯರು ಹಾಗೂ ಮಕ್ಕಳಿಗೆ ವಿಹಾರಕ್ಕಾಗಿ ಜಾತ್ರೆ ಹಾಗೂ ಉತ್ಸವಗಳಿಗೆ ಸೂಕ್ತವಾಗಿದ್ದು, ಇದರ ಕುರಿತಾಗಿ
ಅಗತ್ಯ ಕ್ರಮ ಕೈಗೊಳ್ಳುವದಾಗಿ ರಾಜ್ಯ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಭರವಸೆ ನೀಡಿದ್ದಾರೆ.
ಸೋಮವಾರ ಬೆಳಗಾವಿಯ ರಾಮತೀರ್ಥ ನಗರದಲ್ಲಿ ಜೀರ್ಣೋದ್ಧಾರಗೊಂಡು, ಹೊಸ ವಿನ್ಯಾಸದಲ್ಲಿ ರೂಪುಗೊಂಡಿರುವ ಭಕ್ತರ ಆಕರ್ಷಣೆಯ ಕೇಂದ್ರವೆನಿಸಿದ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸಚಿವರು ಬೇಟಿ ಕೊಟ್ಟು, ಗದ್ದುಗೆಯ ಆಶೀರ್ವಾದ ಪಡೆದು , ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನ ಸ್ವೀಕರಿಸಿದ್ದಾರೆ.

ನಂತರ ದೇವಸ್ಥಾನದ ನೂತನ ಫಲಕ ಅನಾವರಣಗೊಳಿಸಿದ ಸಚಿವರು ಸ್ಥಳೀಯರ ಬೇಡಿಕೆಯಂತೆ ಆಂಜನೇಯ ದೇವಸ್ಥಾನದಲ್ಲಿ ಅಗತ್ಯ ಸ್ಥಳಾವಕಾಶ ಕಲ್ಪಿಸುವಂತೆ ಕೋರಿದ ಮನವಿಯನ್ನು ಸ್ವೀಕರಿಸಿ , ರಹವಾಸಿಗಳನ್ನುದ್ದೇಶಿಸಿ ಮಾತನಾಡಿದರು.
ರಾಮತೀರ್ಥನಗರದ ಜನರ ಪ್ರೀತಿಯ ಕರೆಗೆ ಧನ್ಯವಾದಗಳು ಎಂದ ಸಚಿವರು ಶ್ರೀ ದುರ್ಗಾ ಮಹಿಳಾ ಮಂಡಳ ಮತ್ತು ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿ ಸೇರಿಕೊಂಡು ಕೋರಿದ ಮನವಿಗೆ ಸ್ಪಂದಿಸಿ, ಅಭಿಮಾನದಿಂದ ಮಾತನಾಡಿ, ತಮ್ಮ ಮನವಿಯಲ್ಲಿಯ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು, ಮಂಜೂರು ಮಾಡಲು ಆದೇಶಿಸುವದಾಗಿ ಹೇಳಿದ್ದಾರೆ, ಜನರ ಆಶಯಗಳನ್ನು ಈಡೇರಿಸುವದೇ ಸರ್ಕಾರದ ಕಾರ್ಯ ಎಂದ ಸಚಿವರು ಗೌರವದ ಸನ್ಮಾನಕ್ಕೆ ಧನ್ಯವಾದ ತಿಳಿಸಿದ್ದಾರೆ..

ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿ ಅದ್ಯಕ್ಷ ಸುರೇಶ ಉರಬಿನಹಟ್ಟಿ ಸರ್ವರನ್ನು ಸ್ವಾಗತಿಸಿ, ಮಾತನಾಡಿ, ಸಚಿವ ಸತೀಶ ಜಾರಕಿಹೊಳಿ ನಮ್ಮವರು. ಅವರಲ್ಲಿಯ ಅಭಿವೃದ್ಧಿಯ ದೂರದೃಷ್ಟಿ ಯಾರಿಗೂ ನಿಲುಕದು. ಅವರೊಬ್ಬ ಕರ್ನಾಟಕದ ಮಹಾನ್ ಶಕ್ತಿ ಅಂಥವರು ನಮ್ಮ ಕರೆಗೆ ಓಗೊಟ್ಟು ದೇವಸ್ಥಾನಕ್ಕೆ ಬಂದಿದ್ದು ರಾಮತೀರ್ಥನಗರ ಮತ್ತು ಈ ಸ್ಥಳದ ಜನರ ಪುಣ್ಯವಾಗಿದೆ ಎಂದಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಅವರ ಯೋಚನೆಗಳು ಮತ್ತು ಯೋಜನೆಗಳು ಅಸಂಖ್ಯಾತ ವಿದ್ಯಾವಂತರ ಬದುಕಿಗೆ ಕೈಗನ್ನಡಿಯಾಗಿವೆ, ಎಲ್ಲ ಕ್ಷೇತ್ರಗಳಲ್ಲೂ ಅವರು ವಿಜಯಶೀಲರೆನಿಸುವದಕ್ಕೆ ಅವರಲ್ಲಿಯ ವಿಶಾಲ ಹೃದಯವಂತಿಕೆ ಸಾಕ್ಷಿಯಾಗಿದೆ ಎಂದರಲ್ಲದೆ ಸನ್ಮಾನ ಸ್ವೀಕರಿಸಿದ್ದಕೆ ಸಂಘದ ಪರ ಧನ್ಯವಾದ ಹೇಳಿದರು.

ಉಪಸ್ತಿತರಿದ್ದ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅದ್ಯಕ್ಷ ವಿನಯ ನಾವಲಗಟ್ಟಿ ಅವರನ್ನೂ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಘದ ಎಸ್ ಜಿ ಕಲ್ಯಾಣಿ, ಮನೋಹರ ಕಾಜಗಾರ, ಎಸ್ ಎಲ್ ಸನದಿ, ಜಿ ಎಸ್ ಪಾಟೀಲ, ರಾಜಶೇಖರ ಚೆಳಗೇರಿ, ಪಿ ಎಫ್ ಪೂಜಾರ, ಡಿ ಎಮ್ ಟೊಣ್ಣೆ, ಮಲ್ಹಾರ ದಿಕ್ಷಿತ್, ದುಂಡಪ್ಪಾ ಉಳ್ಳೇಗಡ್ಡಿ, ರುದ್ರ ಗೌಡ ಜುಟ್ಟನ್ನವರ, ಪ್ರಹ್ಲಾದ ಹೊಳೆಯಾಚಿ, ಶಿವಾನಂದ ಕಾಗತೀಕರ, ರಾಜಶೇಖರ ಚೆಳಗೇರಿ, ಪಿ ಎಫ್ ಪೂಜಾರ, ಆನಂದ ಹಣ್ಣಿಕೇರಿ, ಬಸವರಾಜ ಹಿರೇಮಠ, ಜಿ ಎಸ್ ಹಿರೇಮಠ, ಜಿ ಐ ದಳವಾಯಿ, ಎನ್ ಬಿ ಹಣ್ಣಿಕೇರಿ , ಡಾ ಬಿ ಸಿ ಚವ್ಹಾಣ, ಸೇರಿದಂತೆ, ಶ್ರೀ ದುರ್ಗಾ ಮಹಿಳಾ ಮಂಡಳದ ನಿರ್ಮಲಾ ಉರಬಿನಹಟ್ಟಿ, ಪ್ರೇಮಾ ಬಾಗೇವಾಡಿ ಸುನೀತಾ ಕೆರೂರ, ಕಾವ್ಯಾ ಚಿಟಗಿ, ಮಹಾದೇವಿ ಕಮತ್, ಲತಾ ಕಾಜಗಾರ, ಉಮಾ ಖಾನವಾಡೆ, ಮಹಾನಂದಾ ಹಿರೇಮಠ, ವಿದ್ಯಾ ಮೆಳವಂಕಿ, ಸುಮಾ ಕದಮ್, ಮಹಾದೇವಿ ಮೂಲಿಮನಿ, ತೋಂಟಾಪೂರ, ಲಕ್ಷ್ಮೀ ಮಜಲಟ್ಟಿ, ಭಂಡಾರಿ ಸೇರಿದಂತೆ ಸ್ನೇಹ ಸಮಾಜ ಸೇವಾ ಸಂಘದ ಸದಸ್ಯರು, ರಹವಾಸಿಗಳು, ಮಹಿಳೆಯರು ಉಪಸ್ತಿತರಿದ್ದರು.
ವರದಿ ಪ್ರಕಾಶ ಬಸಪ್ಪ ಕುರಗುಂದ..