ಕ್ರಾಂತಿಗೀತೆಗೆ ದ್ವನಿಯಾದ ಸಚಿವ ಸತೀಶ್ ಜಾರಕಿಹೊಳಿ..
ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೆ ಕಟ್ಟುತೆವ ಎಂದು ಭಾವನಾತ್ಮಕವಾಗಿ ಧ್ವನಿಗೂಡಿಸಿದ ಸಚಿವರು..
ಗೋಕಾಕ : ಜಾತಿಯಿಲ್ಲದ, ಭೀತಿಯಿಲ್ಲದ ನಾಡ ಕಟ್ಟುತೆವ, ಒಡೆದ ಮನಸುಗಳ, ಕಂಡ ಕನಸುಗಳ ಕಟ್ಟೆ ಕಟ್ಟುತೆವ, ನಾವು ಕಟ್ಟೆ ಕಟ್ಟುತೆವ.. ಎಂಬ ಕ್ರಾಂತಿಗೀತೆ ಹಾಡುವುದರ ಮೂಲಕ ತುಳಿತಕ್ಕೆ ಒಳಗಾದರ ಹಾಗೂ ದುರ್ಬಲರ ಧ್ವನಿಯಾಗಿ ನಾನು ಯಾವತ್ತಿಗೂ ತಮ್ಮೊಂದಿಗಿರುವೆ ಎಂಬ ಸಂದೇಶವನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಸಾರಿದಂತಿತ್ತು..
ಮಂಗಳವಾರ ದಿನಾಂಕ 15/04/2025ರಂದು ಭಾರತ ರತ್ನ ಡಾ ಬಾಬಾಸಾಹೇಬ ಅಂಬೇಡ್ಕರ ಅವರ 134ನೆ ಜಯಂತ್ಯೋತ್ಸವದ ಅಂಗವಾಗಿ, ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿರುವ ಹೋರಾಟದ ಹಾಡುಗಳು ಎಂಬ ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಕ್ರಾಂತಿ ಗೀತೆಗೆ ದ್ವನಿಯಾಗುವ ಮೂಲಕ ಯುವಸಮೂಹಕ್ಕೆ ಸ್ಪೂರ್ತಿಯಾಗಿದ್ದಾರೆ..

ಮಾನವ ಬಂಧುತ್ವ ವೇದಿಕೆಯ ಸಹಯೋಗದಲ್ಲಿ ರಾಜ್ಯಮಟ್ಟದ ಪ್ರತಿಷ್ಠಿತ ತಂಡಗಳಿಂದ ಹೋರಾಟದ ಹಾಡುಗಳು ಮತ್ತು ಸಾಂಸ್ಕೃತಿಕ ಸಂಜೆ ಎಂಬ ಕ್ರಾಂತಿಕಾರಿ ಹಾಗೂ ಜಾಗೃತಿ ಮೂಡಿಸುವ ಸಾರ್ಥಕ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವ ಸತೀಶ್ ಜಾರಕಿಹೊಳಿ ಅವರು ಅಲ್ಲಿನ ಗಾಯನ ಸಮೂಹದವರೊಂದಿಗೆ ತಾವು ಹಾಡುವುದರ ಮೂಲಕ ಸಮಾಜಕ್ಕೆ ಏಳಿಗೆಯ ಹಾಗೂ ಆತ್ಮವಿಶ್ವಾಸದ ಸಂದೇಶ ನೀಡಿದ್ದಾರೆ.
ವರದಿ ಪ್ರಕಾಶ ಬಸಪ್ಪ ಕುರಗುಂದ..