ಸಾರ್ವಜನಿಕರಿಗಾಗಿ ಕಚೇರಿಯಲ್ಲಿ ಮಾಹಿತಿ ಫಲಕ ಕಡ್ಡಾಯವಾಗಿರಲಿ.
ಮದ್ಯವರ್ತಿಗಳ ಹಾವಳಿಯ ಪರಿಶೀಲನೆ..
ಉಪನೊಂದನಾಧಿಕಾರಿ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ..
ಬೆಳಗಾವಿ : ಬುಧವಾರ ನಗರದ ಉತ್ತರ ಮತ್ತು ದಕ್ಷಿಣದ ಸಬ್ ರಿಜಿಸ್ಟರ್ ಕಚೇರಿಗೆ ಕರ್ನಾಟಕ ಲೋಕಾಯುಕ್ತ ಆಯುಕ್ತರ ಸೂಚನೆಯ ಮೇರೆಗೆ ಬೇಟಿ ನೀಡಿದ ಬೆಳಗಾವಿಯ ಲೋಕಾಯುಕ್ತ ಅಧಿಕಾರಿಗಳು ಎರಡೂ ಕಚೇರಿಯ ಉಪ ನೋಂದಣಾಧಿಕಾರಿ ಕಚೇರಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಚೇರಿಯಲ್ಲಿ ಸಾರ್ವಜನಿಕರಿಗೆ ನೀಡುವ ಸೇವೆಗಳ ಬಗ್ಗೆ ಮಾಹಿತಿ ಫಲಕ ಅಳವಡಿಸುವಿಕೆ, ನೋಂದಣಿಗಾಗಿ ಬಂದ ಜನರಿಗೆ ಸುವ್ಯವಸ್ಥೆ ನೀಡುವುದು, ಲೋಕಾಯುಕ್ತ ಅಧಿಕಾರಿಗಳ ಪರಿಚಯ ಹಾಗೂ ಸಂಪರ್ಕ ಸಂಖ್ಯೆಗಳನ್ನು ಸ್ಪಷ್ಟವಾಗಿ ಸೂಚನಾ ಫಲಕಗಳಲ್ಲಿ ನಮೂದಿಸುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಇನ್ನು ಎರಡೂ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಅಧಿಕವಾಗಿರುವ ಮಾತು ಕೇಳಿಬರುತ್ತಿದ್ದು ಕಚೇರಿಯ ಒಳಗಡೆ ಮಧ್ಯವರ್ತಿಗಳ ಹಾವಳಿಯ ವಿಚಾರವಾಗಿಯೂ ಕೆಲ ವಿಷಯಗಳ ಚರ್ಚೆ ಮಾಡಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ಬೆಳಗಾವಿ ಲೋಕಾಯುಕ್ತ ಅಧೀಕ್ಷಕರಾದ ಹನುಮಂತರಾಯ, ಬಿ ಎಸ್ ಪಾಟೀಲ್, ಭರತ ರೆಡ್ಡಿ, ಅನ್ನಪೂರ್ಣ ಹುಲಗೋರ್, ರವಿಕುಮಾರ ಧರ್ಮಟ್ಟಿ, ನಿರಂಜನ್ ಪಾಟೀಲ್, ಮಂಜುನಾಥ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..