ಗೋಕಾಕಿನಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯ ಆಚರಣೆ.
ಬಸವಣ್ಣನವರ ತತ್ವ ಹಾಗೂ ಆದರ್ಶ ಸರ್ವಕಾಲಕ್ಕೂ ಸಲ್ಲುತ್ತವೆ..
ಪ್ರಿಯಾಂಕಾ ಜಾರಕಿಹೊಳಿ, ಸಂಸದರು ಚಿಕ್ಕೋಡಿ ಲೋಕಸಭೆ..
ಗೋಕಾಕ : ಜಗಜ್ಯೋತಿ ಬಸವೇಶ್ವರರು ಹನ್ನೆರಡನೆಯ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿ ಮಾಡಿದ್ದು ನಮಗೆಲ್ಲ ತಿಳಿದ ವಿಷಯ, ಆಗಿನ ಅವರ ವಚನ ಸಾಹಿತ್ಯ, ವಿಚಾರ, ತತ್ವ ಆದರ್ಶ, ನೀತಿಗಳ ಮೂಲಕ ಅನೇಕ ಸಾಮಾಜಿಕ ಸುಧಾರಣೆಗಳನ್ನು ತಂದಿದ್ದು, ಸರ್ವಕಾಲಕ್ಕೂ ಬಸವಣ್ಣನವರ ವಿಚಾರಗಳು ಸಲ್ಲುತ್ತವೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಹೇಳಿದ್ದಾರೆ.
ಬುಧವಾರ ದಿನಾಂಕ 30/04/2025 ರಂದು ನಗರದ ಬಸವ ಮಂಟಪ ಪ್ರತಿಷ್ಠಾನ ಹಾಗೂ ರಾಷ್ಟ್ರೀಯ ಬಸವ ದಳ ಗೋಕಾಕ ಘಟಕದ ವತಿಯಿಂದ ಆಯೋಜನೆಗೊಂಡ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ ಸಂದರ್ಭದಲ್ಲಿ, ಬಸವೇಶ್ವರ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಿ ಜಯಂತಿಯನ್ನು ಉದ್ದೇಶಿಸಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಮಾತನಾಡಿದ್ದಾರೆ.

ಸಮಾನತೆ, ಕಾಯಕ ನಿಷ್ಟೆ, ಸರಳವಾದ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಆಚರಣೆ, ಮೂಢನಂಬಿಕೆಗಳ ಜಾತಿಬೇಧದ ನಿವಾರಣೆ ಇಂತಹ ಹಲವಾರು ವಿಚಾರಗಳಿಂದ ಆಗಿನ ಸಮಾಜದಲ್ಲಿ ಸುಧಾರಣೆಯ ಕ್ರಾಂತಿಯನ್ನೇ ಮಾಡಿದವರು ಬಸವಣ್ಣನವರು, ಅವರ ವಚನ ವಿಚಾರಗಳು ಇಂದಿಗೂ ಮುಂದೆಯೂ ಎಂದೆಂದಿಗೂ ಸಾರ್ವಕಾಲಿಕ ಸಲ್ಲುವಂತಹ ವಿಚಾರಗಳು ಅವುಗಳಿಂದ ಸಮಾಜದಲ್ಲಿ ಶಾಂತಿ ಮತ್ತು ಸಮೃದ್ಧಿ ಸಾಧ್ಯ ಎಂದಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಮಠಾಧೀಶರು, ಬಸವ ಮಂಟಪ ಪ್ರತಿಷ್ಠಾನ ಹಾಗೂ ರಾಷ್ಟ್ರೀಯ ಬಸವ ದಳದ ಸದಸ್ಯರು, ಬಸವ ಅನುಯಾಯಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ.