ಪಾಲಿಕೆಯ ಅಭಿವೃದ್ಧಿ ವಿಭಾಗದಿಂದ ಸಮಸ್ಯೆ ನಿವಾರಣೆಗೆ ರೋಬೋಟ್ ಬಳಕೆ..

ಪಾಲಿಕೆಯ ಅಭಿವೃದ್ಧಿ ವಿಭಾಗದಿಂದ ಸಮಸ್ಯೆ ನಿವಾರಣೆಗೆ ರೋಬೋಟ್ ಬಳಕೆ..

ಯುಜಿಡಿ ಸಮಸ್ಯೆಗಳ ನಿಯಂತ್ರಣಕ್ಕೆ ರೋಬೋಟ್ ಅತೀ ಉಪಯುಕ್ತ..

ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ಅಭಿವೃದ್ಧಿ
(ಇಂಜಿನಿಯರ್) ವಿಭಾಗದಿಂದ ರೋಬೋಟ್ ಬಳಸಿ ಅಂಡರ್ ಗ್ರೌಂಡ್ ಡ್ರೈನೇಜ್, ಬ್ಲಾಕ್ಕೇಜ್ ಹಾಗೂ ಅಂಡರ್ ಗ್ರೌಂಡಿನ ಗುಣಮಟ್ಟ ಪರೀಕ್ಷೆ ಮಾಡಲು ಹಾಗೂ ಹಾಳಾದ ಬಗ್ಗೆ ಗೊತ್ತು ಮಾಡಿಕೊಳ್ಳಲು ಹೊಸ ತಂತ್ರಗಾರಿಕೆಯನ್ನು ಬಳಸಲು ಇಂದು ಚಾಲನೆ ನೀಡಲಾಗಿದೆ.

ಈ ವಿಶೇಷ ಕಾರ್ಯದಲ್ಲಿ ಬೆಳಗಾವಿ ಪಾಲಿಕೆಯ ಮಹಾಪೌರರಾದ
ಮಂಗೇಶ್ ಪವಾರ ಉಪ ಮಹಾಪೌರರಾದ ವಾಣಿ ಜೋಶಿ ಆಡಳಿತ ಪಕ್ಷದ ನಾಯಕರಾದ ಹಣಮಂತ ಕೊಂಗಾಲಿ ವಿರೋಧ ಪಕ್ಷದ ನಾಯಕರಾದ ಮುಜಾಮಿಲ್ ದೋಣಿ ಹಾಗೂ ಇತರ ನಗರ ಸೇವಕರು ಭಾಗಿಯಾಗಿದ್ದರು.

ಪಾಲಿಕೆಯ ಅಭಿವೃದ್ಧಿ ವಿಭಾಗದ ಉಪ ಆಯುಕ್ತರಾದ ಲಕ್ಷ್ಮಿ ನಿಪ್ಪಾಣಿಕರ್ ಮತ್ತು ಇಂಜಿನಿಯರಗಳ ತಂಡ ಹೊಸ ತಂತ್ರಗಾರಿಕೆಯ ರೋಬೋಟ್ ಅನ್ನು ಪ್ರಯೋಗ ಮಾಡುವ ಮೂಲಕ ಅದರ ಬಳಕೆ ಹಾಗೂ ಪ್ರಯೋಜನೆ ಹೇಗೆ ಆಗುತ್ತದೆ ಎಂದು ತಿಳಿಸುಕೊಟ್ಟಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..