ರಾಜಕಾರಣಿಗಳ ದಂಡಿನ ಮದ್ಯ, ರಾಜ್ಯದ ಜನಪ್ರಿಯ ಹಾಗೂ ವಿಚಾರವಂತ ಸಿಎಂ ಅವರಿಂದ ಸಾಹುಕಾರರೆಲ್ಲಿ ಎಂದೆನಿಸಿಕೊಳ್ಳುವ ಮಾಸ್ಟರ್ ಪೀಸ್ ಒಂದೇ ಒಂದು..

ರಾಜಕಾರಣಿಗಳ ದಂಡಿನ ಮದ್ಯ, ರಾಜ್ಯದ ಜನಪ್ರಿಯ ಹಾಗೂ ವಿಚಾರವಂತ ಸಿಎಂ ಅವರಿಂದ ಸಾಹುಕಾರರೆಲ್ಲಿ ಎಂದೆನಿಸಿಕೊಳ್ಳುವ ಮಾಸ್ಟರ್ ಪೀಸ್ ಒಂದೇ ಒಂದು..

ಅವರೇ ಸರ್ವ ಸಮುದಾಯಗಳ ಹಿತಚಿಂತಕ ಸಚಿವ ಸತೀಶ ಜಾರಕಿಹೊಳಿ ಅವರು..

ಬೆಳಗಾವಿ : ಕಳೆದ ಕೆಲ ದಿನಗಳ ಹಿಂದೆ ನಗರದಲ್ಲಿ ಒಂದು ಸರ್ಕಾರಿ ಕಾರ್ಯಕ್ರಮದ ಅಂಗವಾಗಿ ಆಗಮಿಸಿದ್ದ ರಾಜ್ಯದ ಯಶಸ್ವಿ, ಜನಪ್ರಿಯ ಹಾಗೂ ಭಾಗ್ಯಗಳ ಸರದಾರರೆಂದೇ ಕರೆಸಿಕೊಳ್ಳುವ, ವಿಚಾರವಂತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಅವತ್ತು ಆಡಿದ ಮಾತು ಕೆಲ ಮನಸ್ಸುಗಳಿಗೆ ಮುದ ನೀಡುವಂತಿತ್ತು..

ನಗರಾಭಿವೃದ್ಧಿ ಇಲಾಖೆಯ ಕಲಾಮಂದಿರ ವಾಣಿಜ್ಯ ಮಳಿಗೆ ಉದ್ಘಾಟನೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟನೆಯ ನಂತರ ಕಟ್ಟಡವನ್ನು ವೀಕ್ಷಿಸುತ್ತಿದ್ದರು, ಈ ವೇಳೆ ಸಿಎಂ ಅವರ ಜೊತೆಗೆ ಪಕ್ಷಾತೀತವಾಗಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಾಲಿಕೆಯ ಮೇಯರ, ಉಪಮೇಯರ ಹಾಗೂ ನಗರ ಸೇವಕರ ಆದಿಯಾಗಿ ರಾಜಕಾರಣಿಗಳ ದಂಡೇ ಸಿಎಂ ಅವರ ಜೊತೆಗಿದ್ದು, ಬ್ರಹತ್ ವಾಣಿಜ್ಯ ಕಟ್ಟಡದ ಬಗ್ಗೆ ಚರ್ಚೆ ಮಾಡುತ್ತಿದ್ದರು.

ಸಚಿವ ಸತೀಶ್ ಜಾರಕಿಹೊಳಿ ಅವರು ಸಂಗಡಿಗರೊಂದಿಗೆ ಮಾತನಾಡುತ್ತ ಸ್ವಲ್ಪ ದೂರ ನಿಂತಿದ್ದರು, ಆಗ ಎಲ್ಲರ ಮಧ್ಯೆಯೇ ರಾಜ್ಯದ ಪ್ರಭಾವಿ, ವಿಚಾರವಂತ, ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸಾಹುಕಾರರೆಲ್ಲಿ? ಸಾಹುಕಾರರೆಲ್ಲಿ? ಎಂದು ಕೂಗಿ ಕರೆದದ್ದು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ ಜಾರಕಿಹೊಳಿ ಅವರ ಆತ್ಮೀಯತೆಯ ಸಂಬಂಧಕ್ಕೆ ಸಾಕ್ಷಿಯಾದಂತಿತ್ತು..

ಇಡೀ ರಾಜ್ಯವೇ ಮೆಚ್ಚುವಂತಹ ವ್ಯಕ್ತಿತ್ವ ಹೊಂದಿರುವ ಸಿಎಂ ಅವರಿಂದ ಅಷ್ಟೊಂದು ಗೌರವ, ವಿಶ್ವಾಸ, ಕಾಳಜಿ, ಸ್ನೇಹ, ಆತ್ಮೀಯತೆಯ ಪ್ರೀತಿ ಗಳಿಸಿರುವ ಬೆಳಗಾವಿಯ ಸಾಹುಕಾರ ಸತೀಶ ಜಾರಕಿಹೊಳಿ ಅವರ ವ್ಯಕ್ತಿತ್ವ ಎಷ್ಟು ಆಕರ್ಷಣೀಯ ಎಂದು ಅರ್ಥಮಾಡಿಕೊಳ್ಳಬೇಕಾಗಿದೆ.

ಸತೀಶ ಜಾರಕಿಹೊಳಿ ಅವರ ಸರಳತೆ, ತಳಮಟ್ಟದ ಜನರೊಂದಿಗಿನ ಒಡನಾಟ, ಬಡ ದಿನ ದಲಿತರ ಸಮಸ್ಯೆಗಳಿಗೆ ಸ್ಪಂದನೆ, ಮಾನವೀಯತೆಯ ಕಾರ್ಯಗಳು, ದ್ವೇಷ ಸಾಧಿಸದ ನಗುಮುಖ, ಅಭಿವೃದ್ಧಿ ಪಥದ ಕಾರ್ಯಗಳು, ಶಿಕ್ಷಣ ಆರೋಗ್ಯ ಕ್ರೀಡೆ ಸಾಂಸ್ಕೃತಿಕ ರಂಗಕ್ಕೆ ಸಹಕಾರ, ಬೇದಭಾವವಿಲ್ಲದೇ ಸರ್ವ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸುವ ಆ ಮೂಲಕ ಜನಮಾನಸದಲ್ಲಿ ಅಜಾತಶತ್ರುವಾಗಿ, ತಮ್ಮ ಮಂದಹಾಸದಿಂದ ಮುನ್ನುಗ್ಗುತ್ತಿರುವ ಅವರ ವಿಶೇಷ ವ್ಯಕ್ತಿತ್ವಕ್ಕಾಗಿಯೇ ಸಿಎಂ ಅವರು ಅಷ್ಟೊಂದು ಕಾಳಜಿಯಿಂದ ಎಲ್ಲರ ಮಧ್ಯೆ ಸಾಹುಕಾರರೆಲ್ಲಿ? ಎಂದು ಕರೆದಿರಬಹುದು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..