ಶ್ರೀರಾಮ ಮಂದಿರ ಹೋರಾಟಗಳು ಹಾಗೂ ರಾಮಾಯಣ ಗ್ರಂಥದ ಬಿಡುಗಡೆ..
ಪ್ರಹ್ಲಾದ ಪ್ರಕಾಶನದಡಿ ಡಾ ಸಿ ಕೆ ಜೋರಾಪೂರ ವಿರಚಿತ ಗ್ರಂಥದ ಅನಾವರಣ.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ..
ಬೆಳಗಾವಿ : ನಾಡಹಬ್ಬ ಉತ್ಸವ ಸಮಿತಿ ಬೆಳಗಾವಿ ಹಾಗೂ ಪ್ರಹ್ಲಾದ ಪ್ರಕಾಶನ ಬೆಳಗಾವಿ ಅವರ ನೇತೃತ್ವದಲ್ಲಿ ಡಾ ಸಿ ಕೆ ಜೋರಾಪೂರ ಅವರ ಶ್ರೀರಾಮ ಮಂದಿರದ ಹೋರಾಟಗಳು ಹಾಗೂ ರಾಮಾಯಣ ಎಂಬ ಅದ್ಬುತ ಗ್ರಂಥದ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮವು ನಗರದ ಕನ್ನಡ ಭವನದಲ್ಲಿ ಅರ್ಥಪೂರ್ಣವಾಗಿ ಜರುಗಿದೆ..
ಗುರುವಾರ ದಿನಾಂಕ 15/05/2025ರಂದು ಜರುಗಿದ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿಮಠ ಬೆಳಗಾವಿ ಹಾಗೂ ಪೂಜ್ಯ ಶ್ರೀ ಹರಿಗುರು ಮಹಾರಾಜರು ರುದ್ರಕೇಸರಿಮಠ ಬೆಳಗಾವಿ ಇವರು ವಹಿಸಿದ್ದು, ಕಾರ್ಕಳದ ಶಾಸಕರಾದ ವಿ ಸುನೀಲಕುಮಾರ ಗ್ರಂಥ ಬಿಡುಗಡೆಯನ್ನು ನೆರವೇರಿಸಿದ್ದಾರೆ.
ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಅರವಿಂದ ದೇಶಪಾಂಡೆ, (ರಾಷ್ಟ್ರವಾದಿಗಳು), ಪ್ರಮೋದಾಚಾರ್ಯ ಕಟ್ಟಿ ವಹಿಸಿಕೊಂಡಿದ್ದು, ಅಧ್ಯಕ್ಷತೆಯನ್ನು ಡಾ ಎಚ್ ಬಿ ರಾಜಶೇಖರ, ಬೆಳಗಾವಿ ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷರು ವಹಿಸಿಕೊಂಡಿದ್ದರು. ಗೋವಿಂದಪ್ಪ ಗೌಡಪ್ಪಗೊಳ ಕೃತಿ ಪರಿಚಯ ಮಾಡಿದರೆ, ವಿಶ್ವ ಹಿಂದೂ ಪರಿಷತ್ತಿನ ಸಾಮರಸ್ಯ ಪ್ರಮುಖರಾದ ಕೃಷ್ಣ ಭಟ ಹಾಗೂ ಗೀತಾ ಸುತಾರ, ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷರ ಗೌರವ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರಗು ತಂದಿತ್ತು.

ಇದೇ ಕಾರ್ಯಕ್ರಮದಲ್ಲಿ ನಗರದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿದ್ದು, ಬಾ ತಿಪ್ಪೇಸ್ವಾಮಿ, ಮಾಧವಾಚಾರ್ಯರು, ಎಸ್ ಎಸ್ ಕಿವಡಸನ್ನವರ, ನಿರೂಪದಯ್ಯ ಕಲ್ಲೊಳ್ಳಿಮಠ, ಎಲ್ ಎಸ್ ಶಾಸ್ತ್ರಿ, ಹನುಮಂತ ಕೋoಗಾಲಿ, ಸುರೇಶ್ ಯಾದವ, ವಿ ಕೆ ಬಡಿಗೇರ ಹಾಗೂ ಡಾ ಶಿವು ನಂದಾಗವಿ ಅವರಿಗೆ ಪೂಜ್ಯರು ಹಾಗೂ ಗಣ್ಯರಿಂದ ಸನ್ಮಾನ ಕಾರ್ಯ ಜರುಗಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ನಾಡಹಬ್ಬ ಉತ್ಸವ ಸಮಿತಿಯ ಪ್ರಹ್ಲಾದ ಪ್ರಕಾಶನ ಪದಾಧಿಕಾರಿಗಳಾದ ಜಯತೀರ್ಥ ಸವದತ್ತಿ, ಸುಜಾತಾ ಉಳ್ಳಾಲ, ಮಧುಕರ ಗುಂಡೆನಟ್ಟಿ, ವಿಜಯಾ ಹಿರೇಮಠ್, ಸೋಮಲಿಂಗ ಮಾವಿನಕಟ್ಟಿ, ಎಂ ಕೆ ಜೋರಾಪುರ, ಪ್ರಹ್ಲಾದಕುಮಾರ ಜೋರಾಪುರ, ಆರ್ ಪಿ ಪಾಟೀಲ, ಪಿ ಟಿ ಪಾಟೀಲ, ಗುರುಗೌಡ ಪಾಟೀಲ, ಜಯಶ್ರೀ ಮಾಳಗಿ, ಬಸವರಾಜ ಕ್ಷತ್ರಿ, ಆನಂದ ಕರನಿಂಗಣವರ, ಕೇದಾರನಾಥ ಜೋರಾಪುರ್ ಮತ್ತಿತರರು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ.