ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜಶೀಟ್ ಬಿಡುಗಡೆ ಮಾಡಿದ ಬಿಜೆಪಿ..

ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜಶೀಟ್ ಬಿಡುಗಡೆ ಮಾಡಿದ ಬಿಜೆಪಿ..

ಬೆಳಿಗ್ಗೆ ಹಾಲು, ರಾತ್ರಿ ಆಲ್ಕೋಹಾಲು ಕೊಳ್ಳುವಾಗ ಕಣ್ಣಿರೀಡುವಂತೆ ಮಾಡಿದ ಕಾಂಗ್ರೆಸ್ ಸರ್ಕಾರ.

ಶಾಸಕ ಬಾಲಚಂದ್ರ ಜಾರಕಿಹೊಳಿ..

ಬೆಳಗಾವಿ : ಕರ್ನಾಟಕದ ಜನರ ಬದುಕಿಗೆ ಶಾಪವಾದ ರಾಜ್ಯದ ವಸೂಲಿ ಸರ್ಕಾರವೆಂದು, ಎಲ್ಲೆಡೆ ಬೆಲೆಯೇರಿಕೆ, ಭ್ರಷ್ಟಾಚಾರ, ಹದಗೆಟ್ಟ ಕಾನೂನು ಸುವ್ಯವಸ್ಥೆಯನ್ನು ಹೊಂದಿದ ಈ ಕಾಂಗ್ರೆಸ್ ಸರ್ಕಾರ, ಎರಡು ವರ್ಷಗಳ ಸಾಧನಾ ಸಮಾವೇಶ ಮಾಡುತ್ತಿರುವದನ್ನು ವಿರೋಧಿಸಿ, ಬೆಳಗಾವಿ ಜಿಲ್ಲಾ ಬಿಜೆಪಿ ಘಟಕದಿಂದ “ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜ್ ಶೀಟ್” ಬಿಡುಗಡೆ ಮಾಡಿದೆ.

ಬುಧವಾರ ನಗರದ ಖಾಸಗಿ ಹೋಟೆಲಿನಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ರಾಜ್ಯ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಹಿಂದಿನ ಯಾವುದೇ ಸರ್ಕಾರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕುಡಿಯುವ ನೀರಿಗಾಗಿ ಕನಿಷ್ಠ 50 ಲಕ್ಷ ಮೊತ್ತವನ್ನು ಇಡುತ್ತಿದ್ದರು ಆದರೆ ಈ ಸರ್ಕಾರದಲ್ಲಿ ಮೊನ್ನೆ ಮಾರ್ಚ ಹಾಗೂ ಏಪ್ರಿಲ್ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ, ಕುಡಿಯುವ ನೀರಿಗಾಗಿ ಕೇವಲ ಐದು ಲಕ್ಷವನ್ನೂ ಕೂಡಾ ಈ ಸರ್ಕಾರ ನೀಡಲಿಲ್ಲ, ತುರ್ತು ಸಮಯದಲ್ಲಿ ಟ್ಯಾಂಕರ ಮೂಲಕ ನೀರು ತರಲು ಹಣ ಇಡದ ಬೇಜವಾಬ್ದಾರಿ ಸರ್ಕಾರವಿದು ಎಂದು ದೂರಿದ್ದಾರೆ.

ಸಿದ್ಧರಾಮಯ್ಯ ಪ್ರತಿ ಸಲ ನಾವು ಬಡವರ ಪರವಾಗಿದ್ದೇವೆ ನಮ್ಮದು ಬಡವರ ಸರಕಾರ ಎನ್ನುತ್ತಾರೆ, ಆದರೆ ಬಡವರು ಕುಡಿಯುವ ಸಾರಾಯಿ ಬೆಲೆ ಹೆಚ್ಚಿಸುತ್ತಾರೆ, ಅದೇ ಶ್ರೀಮಂತರು ಕುಡಿಯುವ ಹೈ ಕ್ವಾಲಿಟಿ ಮದ್ಯಪಾನದ ಬೆಲೆ ಹೆಚ್ಚಿಸುವದಿಲ್ಲ, ಬಡವರ ಪರ ಸರ್ಕಾರ ಅನ್ನೋದು ಬಡವರ ಮೇಲೆಯೇ ಅಧಿಕ ಬಾರ ಹಾಕುವದು, ಹಾಲಿನ ದರ ಹೆಚ್ಚಳದಿಂದ ಬೆಳಿಗ್ಗೆ ಹಾಲು ಕೊಳ್ಳುವಾಗ ಅಳುವದು, ರಾತ್ರಿ ಆಲ್ಕೋಹಾಲ್ ಕುಡಿಯುವಾಗಲು ಅಳುವದು ರಾಜ್ಯದ ಜನರ ಪರಿಸ್ಥಿತಿ ಆಗಿದೆ, ಕಾಂಗ್ರೆಸ್ಸಿನವರು ಹಾಲು ಬಿಡುತ್ತಿಲ್ಲ ಅಲ್ಕೂಹಾಲು ಬಿಡುತ್ತಿಲ್ಲ ಎಲ್ಲದರ ಬೆಲೆಯೂ ದುಬಾರಿ ಮಾಡಿದ್ದಾರೆ ಎಂದಿದ್ದಾರೆ.

ಈ ಸರ್ಕಾರ ಎಷ್ಟು ಮೊಂಡ ಸರ್ಕಾರ ಇದೆಯೆಂದರೆ, ಅವರು ಎಲ್ಲಾರೂ ಹೇಳೋದೊಂದೇ ನಾವು ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ನೀಡುತ್ತಿದ್ದೇವೆ ಎಂದು, ಗ್ಯಾರೆಂಟಿಗಳನ್ನು ಒಂದು ಕಡೆಯಿಂದ ಕೊಡುವದು ಮತ್ತೊಂದು ಕಡೆ ಪಡೆಯುವದನ್ನು ಮಾಡುತ್ತಿದ್ದಾರೆ, ಸ್ಟ್ಯಾಂಪ್ ಡ್ಯೂಟಿ ಹೆಚ್ಚಳ ಅಂತೂ ಕರ್ನಾಟಕದಲ್ಲಿ ಇತಿಹಾಸ ಆಗಿದೆ, ಅದಕ್ಕೆ ನಮ್ಮ ಭಾರತೀಯ ಜನತಾ ಪಾರ್ಟಿ ಬೆಂಗಳೂರಿನಿಂದ ಹಿಡಿದು ಹಳ್ಳಿವರೆಗೆ ಹೋರಾಟ ಮಾಡುತ್ತೇವೆ, ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ.

ಈ ಸುದ್ದಿಗೋಷ್ಠಿಯಲ್ಲಿ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ವಿ ಐ ಪಾಟೀಲ್, ಅರವಿಂದ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಪಾಲಿಕೆಯ ಆಡಳಿತ ಪಕ್ಷದ ಅಧ್ಯಕ್ಷರಾದ ಹನುಮಂತ ಕೊoಗಾಲಿ, ಮಲ್ಲಿಕಾರ್ಜುನ ಮಾದಮ್ಮನವರ ಹಾಗೂ ಪಕ್ಷದ ಇತರ ಪದಾಧಿಕಾರಿಗಳು ಭಾಗಿಯಾಗಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ.