ಚಂದಗಡ ದುರ್ಗಾದೇವಿಯ ಜಾತ್ರೆಯಲ್ಲಿ ಶ್ರದ್ಧಾ ಭಕ್ತಿಯ ಸಂಭ್ರಮ..
ಜಾತಿ ಜನಾಂಗ ಭಾಷೆಯ ಎಲ್ಲೇ ಮೀರಿ ದೇವಿಗೆ ನಡೆದುಕೊಳ್ಳುವ ಭಕ್ತಗಣ..
ಬೆಳಗಾವಿ : ನಗರದ ಸಮೀಪವಿರುವ ಚಂದಗಡ ಗ್ರಾಮದಲ್ಲಿ ಶ್ರೀ ದುರ್ಗಾದೇವಿಯ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದ್ದು ಸಾವಿರಾರು ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ದೇವಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ..

ಬೆಳಗಾವಿ ತಾಲೂಕಿನ ಚಂದಗಡ ಗ್ರಾಮದಲ್ಲಿ ಪ್ರತಿವರ್ಷ ದುರ್ಗಾದೇವಿಯ ಜಾತ್ರೆ ನಡೆಯುತ್ತಿದ್ದು, ಮೊನ್ನೆ ಮಂಗಳವಾರ ಪ್ರಾರಂಭವಾಗಿ ಮೂರು ದಿನಗಳ ನಂತರ ಅಂದರೆ ಗುರುವಾರ ಸಮಾಪ್ತಿಯಾಗುವದು, ಮೊದಲನೆಯ ದಿನ ಮಂಗಳವಾರ ಊರೆಲ್ಲಾ ದೇವಿಯ ಹೊನ್ನಾಟ (ಮೆರವಣಿಗೆ) ನಡೆದಿದ್ದು, ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಭಕ್ತರು ಸೇರಿ ಈ ಸಂಭ್ರಮದಲ್ಲಿ ಭಾಗಿಯಾಗುವರು

ಇಲ್ಲಿ ಜಾತಿ, ಭಾಷೆ, ಜನಾಂಗದ ಬೇದಬಾವ ಇಲ್ಲದೆ ಎಲ್ಲಾ ಭಕ್ತರು ದೇವಿ ಮಂದಿರಕ್ಕೆ ಆಗಮಿಸಿ, ದೇವಿಗೆ ಹಣ್ಣು, ಕಾಯಿ, ಹಸಿರು ಬಳೆ, ವಸ್ತ್ರ, ಎಲಿ ಅಡಕೆ, ಏರಿಸಿ ದೇವಿ ಕೃಪೆಗೆ ಪಾತ್ರರಾಗುವರು, ಬೇಡಿಕೊಂಡ ಹರಕೆ ತೀರಿದ ಭಕ್ತರು ದುರ್ಗಾದೇವಿಯ ಹೆಸರಿನಲ್ಲಿ ಮಾಂಸಾಹಾರದ ನೈವೇದ್ಯ ಮಾಡುವರು, ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಮಾಂಸಾಹಾರದ ಬೋಜನ ಇರುವದು ಸಾಮಾನ್ಯವಾಗಿದ್ದು, ತಾಲೂಕಿನ ನಾನಾ ಕಡೆಯಿಂದ ಜನರು ಜಾತ್ರೆಗೆ ಆಗಮಿಸಿ ಸಂತೋಷ್ ಸಂಭ್ರಮದೊಂದಿಗೆ ದೇವಿಯ ಆಶೀರ್ವಾದ ಪಡೆದು ಪುನೀತರಾಗುವರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..