ಆರ್ ಸಿಬಿ ಸಂಭ್ರಮಾಚರಣೆ ದುರಂತದಲ್ಲಿ ರಾಜ್ಯ ಸರ್ಕಾರದ ವೈಪಲ್ಯವಿದೆ..

ಆರ್ ಸಿಬಿ ಸಂಭ್ರಮಾಚರಣೆ ದುರಂತದಲ್ಲಿ ರಾಜ್ಯ ಸರ್ಕಾರದ ವೈಪಲ್ಯವಿದೆ..

ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಿ..

ಬೆಳಗಾವಿ : ಆರ್ ಸಿಬಿ ಐಪಿಎಲ್ ಕಪ ವಿಜಯದ ಬಳಿಕ ನಡೆದ ಸಂಭ್ರಮಾಚರಣೆಯಲ್ಲಿ ನಡೆದ ದುರಂತಕ್ಕೆ ಸರಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು‌.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ಸಂಭವಿಸಿದ ಭೀಕರ ಕಾಲ್ತುಳಿತ ದುರಂತ, ಹಲವರ ಕನಸುಗಳನ್ನು ಕಸಿದುಕೊಂಡಿದೆ. ಸುಂದರ ಭವಿಷ್ಯದ ಕನಸು ಕಾಣುತ್ತಿದ್ದ ಹಲವರು ಈ ದುರಂತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಕಾಲ್ತುಳಿತದಲ್ಲಿ ಮೃತಪಟ್ಟ 11 ಜನ ಎಲ್ಲರೂ ಯುವಕರೇ ಸರಕಾರ ಮಾಡಿದ ತಪ್ಪಿನಿಂದ ಯುವಕರು ಬಲಿಯಾಗಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.
ಆರ್ ಸಿಬಿ ಯ ಐತಿಹಾಸಿಕ ವಿಜಯದ ಸಂಭ್ರಮವು ಕ್ಷಣಾರ್ಧದಲ್ಲಿ ದುಃಖಕ್ಕೆ ತಿರುಗಿದೆ. ಈ ಘಟನೆಯು ಕ್ರೀಡಾ ಪ್ರೇಮ ಮತ್ತು ಉತ್ಸಾಹದ ನಡುವೆ ಸುರಕ್ಷತೆ ಮತ್ತು ಜಾಗರೂಕತೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ. ಈ ದುರಂತದಿಂದ ಪಾಠ ಕಲಿತು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.