ಪಾಲಿಕೆಯ ಜನನ ಮರಣ ನೋಂದಣಿ ವಿಭಾಗದಲ್ಲಿ ಕಿಡಿಗೇಡಿಗಳ ಗಲಾಟೆ..

ಪಾಲಿಕೆಯ ಜನನ ಮರಣ ನೋಂದಣಿ ವಿಭಾಗದಲ್ಲಿ ಕಿಡಿಗೇಡಿಗಳ ಗಲಾಟೆ..

ಕಂಪ್ಯೂಟರ್ ಕೆಡವಿ ದರ್ಪ ತೋರಿಸಿದ ದುಷ್ಟರು..

ಬಹುತೇಕ ಮಹಿಳಾ ಸಿಬ್ಬಂದಿಗಳಿರುವ ಸ್ಥಳಕ್ಕೆ ಬೇಕಿದೆ ಭದ್ರತೆ..

ಬೆಳಗಾವಿ : ಶುಕ್ರವಾರ ಮಧ್ಯಾಹ್ನ 1-30ರ ಸುಮಾರಿಗೆ ಬೆಳಗಾವಿ ಮಹಾನಗರ ಪಾಲಿಕೆಯ ಜನನ ಮತ್ತು ಮರಣ ನೋಂದಣಿಯ ವಿಭಾಗಕ್ಕೆ ಆಗಮಿಸಿದ ಮೂರು ಜನರು ತಮ್ಮ ದಾಖಲೆಗಳನ್ನು ಪಡೆಯುವ ಸಂದರ್ಭದಲ್ಲಿ ದಬ್ಬಾಳಿಕೆ ವರ್ತನೆ ತೋರಿದ್ದು, ಮಹಿಳಾ ಸಿಬ್ಬಂದಿಗಳ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ.

ಜೊತೆಗೆ ಸಿಟ್ಟಿನಿಂದ ಮಾತನಾಡುತ್ತಾ, ಕಿಟಕಿ ಒಳಗಿಂದ ಕೈ ಹಾಕಿ ಸಿಬ್ಬಂದಿಯ ಎದುರಿಗಿದ್ದ ಕಂಪ್ಯೂಟರ್ ಅನ್ನು ಹೊಡೆದು ಬಿಳಿಸಿ ತಮ್ಮ ದರ್ಪ ತೋರಿದ್ದಾರೆ, ತಮ್ಮ ದಾಖಲೆ ಪಡೆಯಲಿ ಸರದಿ ಸಾಲಿನಲ್ಲಿ ನಿಂತಿದ್ದ ಮೂವರು, ಈಗ ಊಟದ ಸಮಯ ಆಗಿದೆ 3ಗಂಟೆಗೆ ಮತ್ತೆ ಕೌಂಟರ್ ತೆರೆದು ತಮ್ಮ ದಾಖಲೆಗಳನ್ನು ನೀಡುತ್ತೇವೆ ಎಂದು ಹೇಳಿದ ಸಿಬ್ಬಂದಿಯ ಮಾತಿಗೆ ಬೆಲೆ ನೀಡದೇ ಏಕಾಏಕಿ ಈ ರೀತಿಯ ವರ್ತನೆ ಮಾಡಿದ್ದು, ಸಿಬ್ಬಂದಿಗಳಲ್ಲಿ ಆತಂಕ ಮೂಡಿದಂತಾಗಿತ್ತು.

ಪಾಲಿಕೆಯ ಜನನ ಮತ್ತು ಮರಣ ನೊಂದಣಿ ವಿಭಾಗದಲ್ಲಿ ಬಹುತೇಕ ಮಹಿಳಾ ಸಿಬ್ಬಂದಿಗಳೇ ಕಾರ್ಯ ನಿರ್ವಹಿಸುತ್ತಿದ್ದು ಇಲ್ಲಿ ಮತ್ತಷ್ಟು ಸೂಕ್ತ ವ್ಯವಸ್ಥೆ ಹಾಗೂ ಭದ್ರತೆಯ ಅವಶ್ಯಕತೆ ಇದೆ, ಭದ್ರತಾ ಸಿಬ್ಬಂದಿ, ಸ್ಥಳೀಯ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಹಾಗೂ ಪಾಲಿಕೆಯ ಅಧಿಕಾರಿಗಳು ಇಂತಹ ಅಹಿತಕರ ಘಟನೆಗಳನ್ನು ನಿಯಂತ್ರಿಸುವ ವ್ಯವಸ್ಥೆ ಮಾಡಬೇಕು.

ಇನ್ನು ಘಟನೆ ನಂತರ ಸ್ಥಳಕ್ಕೆ ಆಗಮಿಸಿದ ಪಾಲಿಕೆಯ ಆರೋಗ್ಯಾಧಿಕಾರಿ ಅಲ್ಲಿ ಪರಿಶೀಲನೆ ಮಾಡಿ, ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ, ದಬ್ಬಾಳಿಕೆ ಮಾಡಿದ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂಬ ಯೋಚನೆಯಲ್ಲಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..