ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ನೇರವಾಗಿ ಸಹಾಯಧನ ನೀಡಬೇಕೆಂದು ಸರ್ಕಾರದ ಸುತ್ತೋಲೆಯಿದೆ..
ಲ್ಯಾಪ ಟ್ಯಾಪ್ ಖರೀದಿಗೆ ಅಧಿಕಾರಿಗಳು ಏಕೆ ಒಪ್ಪಿಕೊಂಡರು??
ಲ್ಯಾಪಟ್ಯಾಪ್ ಪ್ರಕರಣದಲ್ಲಿ ಸಮಿತಿ ಸದಸ್ಯರನ್ನು ದೂರುವದು ಸರಿಯಲ್ಲ..
ಶಾಸಕ ಅಭಯ ಪಾಟೀಲ..
ಬೆಳಗಾವಿ : ಬಡ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಶಿಕ್ಷಣದ ಅನುಕೂಲಕ್ಕಾಗಿ ಪಾಲಿಕೆಯಿಂದ ಲ್ಯಾಪ್ ಟ್ಯಾಪಗಳನ್ನು ಕೊಳ್ಳಲು ಸಹಾಯಧನ ನೀಡಬೇಕೆಂದು ಸರ್ಕಾರದ ಸುತ್ತೋಲೆ ಇರುವಾಗ ಅಧಿಕಾರಿಗಳು ಒಂದು ಖಾಸಗಿ ಎಜೇನ್ಸಿಯಿಂದ ಲ್ಯಾಪ್ ಟ್ಯಾಪ್ ಖರೀದಿ ಮಾಡಿಸಿ ವಿತರಿಸುವ ಅವಶ್ಯಕತೆ ಏನಿತ್ತು? ಜೊತೆಗೆ ಸರಿಯಾದ ಟಿಪ್ಪಣಿ ನೀಡದೇ ಸ್ಥಾಯಿ ಸಮಿತಿಯ ದಾರಿ ತಪ್ಪಿಸುವ ಕೆಲಸ ಕೂಡಾ ಮಾಡಿದ್ದು ಎಷ್ಟು ಸರಿ ಎಂದು ಪಾಲಿಕೆಯ ಆಡಳಿತ ಪಕ್ಷದ ಅಧ್ಯಕ್ಷರಾದ ಹನುಮಂತ ಕೊಂಗಾಲಿ ಹೇಳಿದ್ದಾರೆ.

ಮಂಗಳವಾರ ಪಾಲಿಕೆಯ ಪರಿಷತ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಲ್ಯಾಪ್ ಟ್ಯಾಪ್ ಪ್ರಕರಣದ ಕುರಿತು ಮಾತನಾಡಿದ ಅವರು, ಪಾಲಿಕೆಯಿಂದ ವಿತರಣೆ ಮಾಡಿದ ಲ್ಯಾಪ್ ಟ್ಯಾಪಗಳ ಗುಣಮಟ್ಟ ಕಳಪೆಯಾಗಿವೆ ಎಂದು ಮಾಧ್ಯಮಗಳಲ್ಲಿ ಬಂದಿದ್ದು, ಅದರ ತನಿಖೆ ಆಗಿ ಕ್ಲಿನ್ ಚಿಟ್ ಬಂದಿದ್ದು ಒಂದು ಕಡೆಯಾದರೆ, ಮತ್ತೊಂದೆಡೆ ಪಾಲಿಕೆ ಸದಸ್ಯರನ್ನು ಹಾದಿ ತಪ್ಪಿಸುವ ಕಾರ್ಯ ಯಾಕೆ ಆಗಿದೆ, ಸರ್ಕಾರದ ಸುತ್ತೋಲೆ ಪ್ರಕಾರ ಟಿಪ್ಪಣಿ ಯಾಕೆ ಮಾಡಲಿಲ್ಲ, ವಿದ್ಯಾರ್ಥಿಗಳಿಗೆ ಈಗಾಗಲೇ ನೀಡಿದಂತಹ ಲ್ಯಾಪ್ ಟ್ಯಾಪಗಳನ್ನು ಮತ್ತೆ ಹಿಂಪಡೆದ ಉದ್ದೇಶವೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಇದಕ್ಕೆ ಧ್ವನಿಗೂಡಿಸಿದ ಶಾಸಕ ಅಭಯ ಪಾಟೀಲ ಅವರು, ಪಾಲಿಕೆಯಿಂದ ಈ ಮೊದಲು ಲ್ಯಾಪ್ ಟ್ಯಾಪ್ ಖರೀದಿಗಾಗಿ ಹಣ ನೀಡಿದಾಗ ಆ ಹಣ ಬೇರೆ ಕೆಲಸಕ್ಕೆ ಬಳಕೆಯಾದ ನಿದರ್ಶನವಿದ್ದು ಈಗ ಹಾಗಾಗಬಾರದು ಎಂದು ಪಾಲಿಕೆಯ ಸಮಿತಿಯವರು ಲ್ಯಾಪ್ ಟ್ಯಾಪ್ ನೀಡಬೇಕೆಂದು ಒಪ್ಪಿಗೆ ಸೂಚಿಸಿದಾಗ, ಅಧಿಕಾರಿಗಳಾದ ತಾವು ಟೆಂಡರ್ ಪ್ರಕ್ರಿಯೆಯಲ್ಲಿನ ಸರ್ಕಾರಿ ನಿಯಮವನ್ನು ಸರಿಯಾಗಿ ಪಾಲಿಸಬೇಕಿತ್ತು, ಟಿಪ್ಪಣಿ ಕೊಡುವದೊಂದು ಮಾಡುವದೊಂದು ಮಾಡಬೇಡಿ, ಮಾಡುವಾದಾದರೆ ವಿಶೇಷ ಅನುಮತಿ ತಗೆದುಕೊಂಡು ಮಾಡಿರಿ, ಬದಲಾಗಿ ಸಮಿತಿಯ ಸದಸ್ಯರ ಮೇಲೆ ಅಪವಾದ ಬರುವಂತೆ ಮಾಡಬೇಡಿ ಎಂದರು.
ಈ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಮಹಾಪೌರರು, ಈ ವಿಷಯವನ್ನು ಮತ್ತಿಮ್ಮೆ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಿ, ಒಂದು ನಿರ್ಣಯ ಬಂದ ಮೇಲೆ ಸಾಮಾನ್ಯ ಸಭೆಗೆ ತರುವಂತೆ ಸೂಚನೆ ನೀಡಿದರು..

ಇನ್ನು ಬೆಳಗಾವಿಯ ಪ್ರತಿಷ್ಠಿತ ವೇಗಾ ಹೆಲ್ಮೆಟ್ ಕಂಪನಿಯಿಂದ ಪಾಲಿಕೆಗೆ ಏಳು ಕೋಟಿಗೂ ಅಧಿಕ ರೂ. ತೆರಿಗೆ ವಂಚನೆ ಮಾಡಿರುವ ಕುರಿತು ಸಮಗ್ರ ತನಿಖೆ ನಡೆಸಿ ಅದನ್ನು ಭರ್ತಿ ಮಾಡಿಸಿಕೊಳ್ಳಬೇಕು ಎಂದು ಮೇಯರ್ ಮಂಗೇಶ್ ಪವಾರ್ ಸೂಚನೆ ನೀಡಿದರು.
ಪಾಲಿಕೆಯ ಸದಸ್ಯರು ಈಗಾಗಲೇ ಚರ್ಚೆ ನಡೆಸಿದ್ದಾರೆ. ಕಾನೂನು ಪ್ರಕಾರವಾಗಿ ಪಾಲಿಕೆಗೆ ಬರಬೇಕಾದ ತೆರಿಗೆಯನ್ನು ಭರಿಸಿಕೊಳ್ಳಬೇಕು ಎಂದು ಸೂಚಿಸಿದರು.
ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮಾತನಾಡಿ, ವೇಗಾ ಕಂಪನಿಯವರು ಹೊಂದಾಣಿಕೆ ಮಾಡಿಕೊಳ್ಳಲು ಬಂದಿದ್ದರು. ಅದನ್ನು ಹೊಂದಾಣಿಕೆಗೆ ಅವಕಾಶ ಕೊಡದೆ ನೇರವಾಗಿ ತೆರಿಗೆ ಪಾವತಿಸಿಕೊಳ್ಳಬೇಕು ಎಂದರು.
ಪಾಲಿಕೆ ಸದಸ್ಯ ಶಾಹೀನ್ ಪಠಾಣ್ ಮಾತನಾಡಿ, ವೇಗಾ ಕಂಪನಿ ದೊಡ್ಡ ಕಂಪನಿ ಇದೆ. ಅಲ್ಲಿ ಬೆಳಗಾವಿ ನಗರದ ಜನರು ಉದ್ಯೋಗ ಮಾಡುತ್ತಿದ್ದಾರೆ. ಅವರಿಗೆ ಕಾಲಾವಕಾಶ ಕೊಡಬೇಕು ಎಂದ ಸಭೆಗೆ ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಬಿಜೆಪಿ ಸದಸ್ಯ ರವಿ ಧೋತ್ರೆ, ಬೆಳಗಾವಿ ನಗರದಲ್ಲಿ ಸಾಕಷ್ಟು ದೊಡ್ಡ ದೊಡ್ಡ ಕಂಪನಿಗಳಿವೆ. ವೇಗಾ ಕಂಪನಿಗೆ ಸಮಯಾವಕಾಶ ಕೊಟ್ಟರೆ ಮತ್ತೇ ಅದರ ದುರುಪಯೋಗ ಬೇರೆ ಕಂಪನಿಯರುವ ಇದೇ ಮಾರ್ಗ ಉಪಯೋಗಿಸುತ್ತಾರೆ. ವೇಗಾ ಕಂಪನಿಯು ಸುಮಾರು ಐದು ದೇಶಗಳಲ್ಲಿ ವ್ಯಾಪಾರ ಮಾಡುತ್ತಾರೆ. ಏಕಕಾಲಕ್ಕೆ ತೆರಿಗೆ ಹಣ ತುಂಬಿಸಿಕೊಳ್ಳಿ ಎಂದರು.
ಕಂದಾಯ ಇಲಾಖೆಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಮಾತನಾಡಿ, ಈಗಾಗಲೇ ವೇಗಾ ಕಂಪನಿಗೆ ನೋಟಿಸ್ ನೀಡಲಾಗಿದೆ. ಶೀಘ್ರದಲ್ಲೇ ಬಾಕಿ ತೆರಿಗೆ ಹಣ ಭರಿಸಿಕೊಳ್ಳಲಾಗುವುದು ಎಂದರು.