ಬೀದಿ ನಾಯಿಗಳ ಸಮಸ್ಯೆಗೆ ಮತ್ತೆ ಗದರಿದ ನಗರ ಸೇವಕರು..
ಜನರಿಗೆ ನಾವು ಉತ್ತರಿಸಬೇಕು ನೀವಲ್ಲವೆಂದು ಆರೋಗ್ಯ ಅಧಿಕಾರಿಗೆ ತಾಕೀತು..
ಎಂದಿನಂತೆ ಸ್ಪಷ್ಟ ಉತ್ತರ ನೀಡದೇ ಮೌನಕ್ಕೆ ಶರಣಾದ ಆರೋಗ್ಯ ಅಧಿಕಾರಿ..
ಬೆಳಗಾವಿ : ನಗರದ ಹಲವಾರು ವಾರ್ಡುಗಳಲ್ಲಿ ಬೀದಿನಾಯಿಗಳ ಸಮಸ್ಯೆ ಇದೆ, ಎಷ್ಟೋ ಚಿಕ್ಕ ಮಕ್ಕಳಿಗೆ ಅವುಗಳಿಂದ ಹಾನಿಯಾಗಿದೆ, ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬೇಕೆಂದು ಪಾಲಿಕೆಯ ಪ್ರತಿ ಸಭೆಯಲ್ಲಿಯೂ ನಗರ ಸೇವಕರು ಚರ್ಚೆ ಮಾಡಿ ಮನವಿ ಮಾಡುತ್ತಾರೆ, ಆದರೆ ಸಮಸ್ಯೆ ಇನ್ನು ನಿಯಂತ್ರಣಕ್ಕೆ ಬರೆದೇ ಇರುವದರಿಂದ ಪಾಲಿಕೆಯ ಪರಿಷತ್ ಸಭೆಯಲ್ಲಿ ಆರೋಗ್ಯ ಅಧಿಕಾರಿಯ ಕಾರ್ಯವೈಖರಿಯ ವಿರುದ್ಧ ನಗರ ಸೇವಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಪರಿಷತ್ ಸಭೆಯ ಕಾರ್ಯಸೂಚಿಯಲ್ಲಿ ವಿಷಯವನ್ನು ಎತ್ತಿಕೊಂಡ ಕೆಲ ನಗರ ಸೇವಕರು, ಅಹ್ಮದ ನಗರ, ಉಜ್ವಲ್ ನಗರ, ವೈಭವ ನಗರ ಬೀದಿ ನಾಯಿಗಳ ಹಾವಳಿ ವಿಪರಿತವಾಗಿವೆ ಎಂದು ಒಬ್ಬ ಮಹಿಳಾ ನಗರ ಸೇವಕಿ ಹೇಳಿದರೆ, ಅಲ್ಲಿ ಬೀದಿ ದ್ವಿಪವೂ ಇಲ್ಲದಿರುವರಿಂದ ಕೆಲ ಜನವಸತಿ ಸ್ಥಳಗಳು ನಾಯಿಗಳ ಆರೈಕೆ ಕೇಂದ್ರಗಳಾಗಿ ಮಾರ್ಪಟ್ಟಿವೆ, ಆ ಪ್ರದೇಶದಲ್ಲಿ ಎಷ್ಟೊಂದು ಮಕ್ಕಳನ್ನು ಬೀದಿ ನಾಯಿಗಳು ಕಚ್ಚಿವೆ ಅದರ ಜವಾಬ್ದಾರಿ ಯಾರು ಎಂದು ನಗರ ಸೇವಕರು ನಾಯಿ ಕಚ್ಚಿದ ಮಕ್ಕಳ ಫೋಟೋ ತೋರಿಸುತ್ತಾ ಆರೋಗ್ಯ ಅಧಿಕಾರಿ ಸಂಜೀವ್ ನಾಂದ್ರೆ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಇನ್ನು ಪಾಲಿಕೆಯ ವಿರೋಧ ಪಕ್ಷದ ನಾಯಕ ಮುಜಮೀಲ್ ದೋಣಿ ಅವರು ಮಾತನಾಡಿ ಬೀದಿನಾಯಿಗಳ ಸಮಸ್ಯೆ ಒಂದೇ ಕಡೆ ಅಲ್ಲಾ ನಗರದ ಎಲ್ಲಾ ಕಡೆಗೆ ಇದೆ ನಾವು ಎಷ್ಟೋ ಸಲ ಹೇಳಿದರು ಆರೋಗ್ಯ ಅಧಿಕಾರಿ ಯಾಕೆ ನಿಯಂತ್ರಿಸುವದಿಲ್ಲ? ನಗರ ಸೇವಕರ ಮನೆ ಮುಂದೆಯೇ ಮಗುವನ್ನು ನಾಯಿ ಕಚ್ಚಿದೆ, ಜನರ ಪ್ರಶ್ನೆಗೆ ನಾವು ಏನು ಉತ್ತರ ನೀಡಬೇಕು ಎಂದರು.

ಇನ್ನು ಶ್ರೀನಗರದ ಮಹಿಳಾ ನಗರಸೇವಕರಾದ ರಾಥೋಡ್ ಮೇಡಂ ಅವರು, ನಮ್ಮ ವಾರ್ಡಿನಲ್ಲಿಯ ನಾಯಿ ಕೇಂದ್ರದಿಂದ ಅಲ್ಲಿನ ಶಬ್ದದಿಂದ ಸುತ್ತಮುತ್ತಲಿನ ಜನರಿಗೆ ತುಂಬಾ ತೊಂದರೆ ಆಗುತ್ತಿದೆಯೆಂದು ನಾನು ಹಲವಾರು ಈ ತಿಂಗಳಿನಿಂದ ಹೇಳಿಕೊಂಡು ಬಂದಿದ್ದೇನೆ, ಅವರು ಇನ್ನು ಅದಕ್ಕೆ ಬೇರೆ ಸ್ಥಳ ಹುಡುಕಿಲ್ಲ, ನಾಳೆ ಅವರು ಅದನ್ನು ಲಕ್ ಮಾಡದಿದ್ದರೆ, ನಾನೆ ಅದನ್ನು ಲಾಕ್ ಹಾಕುತ್ತೇನೆ, ಅಲ್ಲಿನ ಜನರು ಬಂದು ನನ್ನ ಕೇಳುವರು, ಈ ಆರೋಗ್ಯ ಅಧಿಕಾರಿನ್ನಲ್ಲ ಎಂದು ತಮ ಸಮಸ್ಯೆಯನ್ನು ಮಹಾಪೌರರ ಮುಂದೆ ಹೇಳಿಕೊಂಡಿದ್ದಾರೆ.

ಇಷ್ಟೆಲ್ಲಾ ನಗರ ಸೇವಕರು ಬೀದಿ ನಾಯಿಗಳ ಹಾವಳಿ ಕುರಿತಾಗಿ ತಮ್ಮ ಸಮಸ್ಯೆ ಹೇಳಿಕೊಂಡರೂ, ಪಾಲಿಕೆಯ ಆರೋಗ್ಯಾಧಿಕಾರಿ ನಂಜೀವ ನಾಂದ್ರೆ ಅವರು ಜವಾಬ್ದಾರಿ ಅಧಿಕಾರಿಯಾಗಿ ತಾವು ನಿರ್ವಹಿಸಿದ ಕಾರ್ಯದ ಬಗ್ಗೆ ಸ್ಪಷ್ಟ ಉತ್ತರ ನೀಡದೇ, ಮೌನಕ್ಕೆ ಯಾಕೆ ಶರಣಾಗಿದ್ದರು ಎಂಬುದು ತಿಳಿಯದಾಗಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ.