ಅಧಿಕಾರಿಗಳ ವರ್ಗಾವಣೆಯಲ್ಲಿ ಜನಪ್ರತಿನಿಧಿಗಳ ಪ್ರಭಾವ ಇದ್ದೆ ಇರುತ್ತದೆ..
ವರ್ಗಾವಣೆಗಳಲ್ಲಿ ಕೆಲವು ಕಡೆ ಅಸಮಾಧಾನಗಳು ಇರುತ್ತವೆ..
ಸಚಿವ ಸತೀಶ ಜಾರಕಿಹೊಳಿ..
ಬೆಳಗಾವಿ : ಮಳೆಯಿಂದ ಹಾನಿಯಾದ ರೈತರ ಬೆಳೆಗಳಿಗೆ ಸರಕಾರ ಪರಿಹಾರ ಕೊಡುವ ಚಿಂತನೆ ನಡೆಸಿದೆ, ಇದಕ್ಕೂ ಮೊದಲು ಬೆಳೆ ಹಾನಿಯಾದ ಜಮೀನು ಸರ್ವೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಶುಕ್ರವಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಎಲ್ಲೆಲ್ಲೆ ಮಳೆಯಿಂದ ಬೆಳೆ ಹಾನಿಗೆ ಹಿಂದೆಯೂ ಕೂಡ ಸರಕಾರ ಪರಿಹಾರ ನೀಡಿದೆ. ಈಗೂ ಮಾಡೋಣ ಎಂದರು.
ನದಿ ಪಾತ್ರದಲ್ಲಿ ಪ್ರವಾಹ ಬರುವಂಥ ಸ್ಥಿತಿ ಇಲ್ಲ ಜಿಲ್ಲಾಡಳಿತ ಈ ಕುರಿತು ನೋಡಿಕೊಳ್ಳುವುದು. ಮಹಾರಾಷ್ಟ್ರದೊಂದಿಗೆ ಜಿಲ್ಲಾಡಳಿತ ನಿಕಟ ಸಂಪರ್ಕ ಹೊಂದಿದ್ದಾರೆ. ಯಾವುದೇ ರೀತಿಯ ಪ್ರವಾಹದಂಥ ಬರುವಂಥ ಪ್ರಸಂಗ ಬರುವುದಿಲ್ಲ ಎಂದರು.
ಕಲಬುರ್ಗಿ ಶಾಸಕ ಬಿ ಆರ್ ಪಾಟೀಲ್ ಅವರು ಹೇಳಿದಂತೆ ರಾಜೀವ ಗಾಂಧಿ ವಸತಿ ಯೋಜನೆಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರದ ಆರೋಪದ ತನಿಖೆ ಮಾಡಬೇಕು. ಸರಕಾರದ ವಿರುದ್ಧ ಕಾಂಗ್ರೆಸ್ ಶಾಸಕರೇ ಆರೋಪ ಮಾಡಿದಾಗ ಸರಕಾರ ತನಿಖೆ ಮಾಡುವುದು ಸಹಜ ಎಂದರು.
ಕೆಪಿಸಿಸಿ ಅಧ್ಯಕ್ಷರ ಆಕಾಂಕ್ಷಿ ಇದ್ದೆ ಇದ್ದೇವೆ. ಅದನ್ನು ಮಾಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಷಯ.
ಯಾರಿಗೆ ಮಾಡುತ್ತಾರೆ. ಯಾರಿಗೆ ಬಿಡುತ್ತಾರೆ ಎನ್ನುವುದು ಹೈಕಮಾಂಡ್ ಗೆ ಬಿಟ್ಟ ವಿಷಯ, ಕಾದು ನೋಡೋಣ ನಾನು ಹೈಕಮಾಂಡ್ ಮೇಲೆ ಯಾವುದೇ ಒತ್ತಡ ಹಾಕಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಇನ್ನು ಅಧಿಕಾರಿಗಳ ವರ್ಗಾವಣೆ ಮಾಡುವುದು, ಬಿಡುವುದು ಸಿಎಂಗೆ ಬಿಟ್ಟ ವಿಚಾರ, ಸ್ಥಳೀಯ ಶಾಸಕರು, ಮಾಜಿ ಶಾಸಕರು ನಮಗೆ ಇಂತವರು ಬೇಕು ಎಂದು ಬೇಡಿಕೆ ಇಟ್ಟಾಗ ಕೆಲವು ಸಲ ವರ್ಗಾವಣೆ ಮಾಡಬೇಕಾಗುತ್ತದೆ, ಅಧಿಕಾರಿಗಳ ವರ್ಗಾವಣೆಯಲ್ಲಿ ರಾಜಕಾರಣಿಗಳ ಪ್ರಭಾವ ಮೊದಲಿನಿಂದಲೂ ಇದೆ, ಕೆಲವೊಂದು ವಿಚಾರದಲ್ಲಿ ನಮಗೂ ಹೊಂದಾಣಿಕೆಯಾಗುವುದಿಲ್ಲ. ಅನುಸರಿಸಿಕೊಂಡು ಹೋಗಬೇಕಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದು, ಜಿಲ್ಲಾ ವಿಭಜನೆ ಇದೇ ಸರಕಾರದಲ್ಲಿ ಆಗಬೇಕೆಂಬ ಆಸೆ ಇದೆ. ನೋಡೋಣ ಎಂದರು.
ವರದಿ ಪ್ರಕಾಶ ಬಸಪ್ಪ ಕುರಗುಂದ..