ಬೆಳಗಾವಿ ಪಾಲಿಕೆ ವ್ಯಾಪ್ತಿಯ ಇ-ಆಸ್ತಿ ತಂತ್ರಾಂಶ ಅನುಷ್ಠಾನ ಮತ್ತಷ್ಟು ಸರಳ..

ಬೆಳಗಾವಿ ಪಾಲಿಕೆ ವ್ಯಾಪ್ತಿಯ ಇ-ಆಸ್ತಿ ತಂತ್ರಾಂಶ ಅನುಷ್ಠಾನ ಮತ್ತಷ್ಟು ಸರಳ..

ಸಾರ್ವಜನಿಕರಿಗೆ ತ್ವರಿತ ಸೇವೆಗಾಗಿ ಸಹಾಯವಾಣಿ ಕೇಂದ್ರಗಳು.

ಬೆಳಗಾವಿ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಇ-ಆಸ್ತಿ ತಂತ್ರಾಂಶ ಪ್ರಕ್ರಿಯೆಯನ್ನು ಪರಿಣಾಮಕಾರಿ ಹಾಗೂ ವೇಗವಾಗಿ ಕಾರ್ಯರೂಪಕ್ಕೆ ತರುವುದಕ್ಕಾಗಿ ಜೊತೆಗೆ ಸಾರ್ವಜನಿಕರಿಗೆ ಸರಳವಾಗಿ ಸೇವೆ ಲಭಿಸುವ ಉದ್ದೇಶದಿಂದ ಸಾರ್ವಜನಿಕ ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.

ನಗರದ ಪಾಲಿಕೆಯ ಗೋವಾವೇಸ್ ಮಳಿಗೆಯ ದಕ್ಷಿಣ ವಲಯ ಕಚೇರಿಯಲ್ಲಿ ವಾರ್ಡ್ ಸಂಖ್ಯೆ 1 ರಿಂದ 20ರ ವರೆಗೆ, (ಸಹಾಯವಾಣಿ -7483112829) ಕೋಣವಾಳ ಗಲ್ಲಿಯ ಕೇಂದ್ರ ವಲಯ ಕಚೇರಿಯಲ್ಲಿ ವಾರ್ಡ್ ಸಂಖ್ಯೆ 21 ರಿಂದ 39ರ ವರೆಗೆ (ಸಹಾಯವಾಣಿ 7996742132) ಹಾಗೂ ಪಾಲಿಕೆಯ ಮುಖ್ಯ ಕಚೇರಿಯ ಅನೆಕ್ಸ್ ಬಿಲ್ಡಿಂಗ್ ನಲ್ಲಿ ವಾರ್ಡ ಸಂಖ್ಯೆ 40ರಿಂದ 58ರ ವರೆಗಿನ ಸಾರ್ವಜನಿಕರು ಈ ಸಹಾಯವಾಣಿ ಕೇಂದ್ರಗಳಲ್ಲಿ ತಮ್ಮ ಇ-ಆಸ್ತಿ ಅರ್ಜಿಗಳನ್ನು ಸಲ್ಲಿಸಬಹುದು ಹಾಗೂ ಸಹಾಯವಾಣಿ ಸಂಖ್ಯೆಯ ಮೂಲಕ ಮಾಹಿತಿ ಪಡೆಯಬಹುದು.

ಇನ್ನು ಸಾರ್ವಜನಿಕರು ಖುದ್ದಾಗಿ ವೆಬ್ ಸೈಟ್ : http://easthi.kar.gov.in ಗೆ ಸಂಪರ್ಕಿಸಿ ತಮ್ಮ ವಿವಿರಗಳನ್ನು ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ ಎಂಬ ಮಾಹಿತಿಯನ್ನು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ.