ಛತ್ರಪತಿ ಶಾಹು ಮಹಾರಾಜರ ಜಯಂತಿಯ ಆಚರಣೆ..
ಬೆಳಗಾವಿ ಜಿಲ್ಲಾ ಛಲವಾದಿ ಮಹಾಸಭಾದಿಂದ ಆಯೋಜನೆ.
ಬೆಳಗಾವಿ : ಸಾಮಾಜಿಕ ಪ್ರಜಾಪ್ರಭುತ್ವದ ರೂವಾರಿ ಹಾಗೂ ಮಾಹಾನ ದಾರ್ಶನಿಕರಾದ ಛತ್ರಪತಿ ಶಾಹು ಮಹಾರಾಜರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ.
ಗುರುವಾರ ದಿನಾಂಕ 26/06/2025ರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶಾಹು ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಬೆಳಗಾವಿ ಜಿಲ್ಲಾ ಛಲವಾದಿ ಮಹಾಸಭಾ ಘಟಕದ ಎಲ್ಲಾ ಪದಾಧಿಕಾರಿಗಳು ಅತ್ಯಂತ ಭಕ್ತಿ ಹಾಗೂ ಗೌರವದಿಂದ ಛತ್ರಪತಿ ಶಾಹು ಮಹಾರಾಜರ ಜಯಂತಿಯನ್ನು ಆಚರಣೆ ಮಾಡಿದ್ದಾರೆ.
ಈ ವೇಳೆ ಛಲವಾದಿ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ದುರ್ಗೇಶ ಮೇತ್ರಿ ಅವರು ಮಾತನಾಡಿ, ಹಿಂದುಳಿದವರಿಗೆ, ದಿನ ದಲಿತರಿಗೆ ಆಶಾಕಿರಣವಾಗಿದ್ದ ಶಾಹು ಮಹಾರಾಜರು ಹುಟ್ಟಿದ್ದು 1874ರ ಜೂನ್ 26ರಂದು, ತಂದೆ ಅಪ್ಪಾಸಾಹೇಬ ತಾಯಿ ರಾಧಾಬಾಯಿ, ಇವರ ಪೂರ್ವಿಕರು ಛತ್ರಪತಿ ಶಿವಾಜಿಯ ವಂಶಸ್ಥರಾಗಿದ್ದರಿಂದ ಶಾಹು ಮಹಾರಾಜ್ ಅವರಿಗೆ ಛತ್ರಪತಿ ಎಂದು ಬಿರುದು ಬಂದಿದೆ ಎಂಬ ಪ್ರತೀತಿ ಇದೆ.
ಸಾಮಾಜಿಕ ಪ್ರಜಾಪ್ರಭುತ್ವ, ದಾರ್ಶನಿಕತೆ, ಪುಲೇ ಅವರ ಮುಂದುವರೆದ ಕಾರ್ಯಗಳು, ಅಸ್ಪೃಶ್ಯರ ಹಾಗೂ ಹಿಂದುಳಿದವರ ಶಿಕ್ಷಣ ಹಾಗೂ ಏಳಿಗೆ, ಸಮಾನವಾದ ಸಾಮಾಜಿಕ ಸ್ಥಾನಮಾನ ಹೀಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಿಂದುಳಿದ ಹಾಗೂ ದೀನ ದಲಿತರಿಗೆ ಅವಕಾಶಗಳನ್ನು ಒದಗಿಸಿ, ಅವರ ಬಾಳಿನ ಆಶಾಕಿರಣವಾದ ಛತ್ರಪತಿ ಶಾಹು ಮಹಾರಾಜರ ಕೊಡುಗೆಯನ್ನು ದೇಶ ಎಂದು ಮರೆಯಲಾರದ ಎಂದಿದ್ದಾರೆ.
ಈ ವೇಳೆ ರಾಜು ಕೊಲ್ಕಾರ, ದುರ್ಗೆಶ ಮೇತ್ರಿ, ಹಣಮಂತ ಮದಾಳೆ, ದೀಪಕ ಮೇತ್ರಿ, ರಾಜೇಶ್ ತಿರಕಣ್ಣವರ, ಭರಮೂ ಪುಣ್ಯನವರ, ಬಾಬು ಕೋಲಕಾರ, ಬಸವರಾಜ ಕೋಲಕಾರ, ಅಶೋಕ್ ಕೋಲಕಾರ, ಲಕ್ಷ್ಮಣ ಕಾಂಬಳೆ, ಮಲ್ಲೇಶ್ ಕಾಂಬಳೆ, ಸುನಿಲ್ ಕೋಲಕಾರ, ಗಜಾನನ ಮೇತ್ರಿ, ಮತ್ತಿತರರು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ.