ಬೆಳಗಾವಿಯಲ್ಲಿ 23ನೇ ಚಾತುರ್ಮಾಸ್ಯ ಮಹೋತ್ಸವಕ್ಕೆ ಬರದ ಸಿದ್ಧತೆ..
ಶ್ರೀ 1008 ಶ್ರೀ ರಘುವಿಜಯತೀರ್ಥ ಶ್ರಿಪದಂಗಳ 52 ದಿನಗಳ ಪುಣ್ಯ ಪುರಾಣ ಪಠಣ..
ಬೆಳಗಾವಿ : ಜಗದ್ಗುರು ಶ್ರೀ ಮನ್ಮದ್ವಾಚಾರ್ಯ ಮೂಲಸಂಸ್ಥಾನ, ಶ್ರೀ ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠ, ಶ್ರೀ 1008 ಶ್ರೀ ರಘುವಿಜಯತೀರ್ಥ ಶ್ರಿಪದಂಗಳ ಅವರು ಬೆಳಗಾವಿಯಲ್ಲಿ ಜೂಲೈ 20ನೇ ತಾರೀಕಿನಿಂದ ನಿರಂತರ 52 ದಿನಗಳ ವರೆಗೆ 23ನೇ ಚಾತುರ್ಮಾಸ್ಯ ಮಹೋತ್ಸವವನ್ನು ನಡೆಸಿಕೊಡುವವರುದ್ದು ಅದರ ಸಕಲ ಸಿದ್ಧತೆ ಭರದಿಂದ ಸಾಗಿದೆ..
ಬ್ರಾಹ್ಮಣ ಸಮುದಾಯದ ಪ್ರಮುಖ ಹಾಗೂ ನಗರ ಸೇವಕರಾದ ಜಯತೀರ್ಥ ಸವದತ್ತಿ ಹಾಗೂ ನ್ಯಾಯವಾದಿ ರಮೇಶ ದೇಶಪಾಂಡೆ ಅವರು ಸಿದ್ಧತಾ ಕಾರ್ಯದಲ್ಲಿ ಭಾಗಿಯಾಗಿದ್ದು ಚಾತುರ್ಮಾಸ್ಯದ ಕುರಿತಾಗಿ ಕೆಲ ಮಾಹಿತಿ ನೀಡಿದ್ದಾರೆ,
ಚೆನ್ನಮ್ಮ ನಗರದಲ್ಲಿ ಇರುವ, ವಿಶಾಲ ಹಾಗೂ ಪ್ರಶಾಂತವಾದ ನಮ್ಮ ಶ್ರೀ ಸತ್ಯ ಪ್ರಮೋದ ಸಭಾಗೃಹದಲ್ಲಿ ಈ 23ನೇ ಚಾತುರ್ಮಾಸ್ಯ ಮಹೋತ್ಸವ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಲಿದ್ದು, ಈಗಾಗಲೇ ಪೆಂಡಾಲ್ ಹಾಕುವ ಕಾರ್ಯ ನಡೆಯುತ್ತಿದೆ.

ಇನ್ನು 52ದಿನಗಳ ಕಾಲ ನಡೆಯುವ ಈ ದೀರ್ಘ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪ್ರತಿದಿನ 500ಕ್ಕೂ ಹೆಚ್ಚು ಭಕ್ತಾದಿಗಳು ಸೇರುವುದರಿಂದ ಅವರಿಗೆಲ್ಲ ಸುವ್ಯವಸ್ಥಿತವಾದ ಪ್ರಸಾದದ ವ್ಯವಸ್ಥೆ ಮಾಡಲು ಈಗಾಗಲೇ ಆಹಾರ ಧಾನ್ಯಗಳ, ಅಡುಗೆ ಸಾಮಗ್ರಿಗಳ ಸಂಗ್ರಹ ಕಾರ್ಯವೂ ನಡೆಯುತ್ತಿದೆ, ಇನ್ನು ನೀರಿನ ಹಲವು ಮೂಲಗಳು ಈಗಾಗಲೇ ಇದ್ದು ಮತ್ತೆ ಅವಶ್ಯಕತೆ ಆದಲ್ಲಿ ಅನುಕೂಲ ಆಗಲೆಂದು ಸಭಾಗ್ರಹದ ಪಕ್ಕದಲ್ಲಿ ಒಂದು ಭಾವಿ ತಗೆಸುತ್ತಿರುವುದಾಗಿ ಹೇಳಿದ್ದಾರೆ.
ಇನ್ನು ಜೂಲೈ 20 ರಿಂದ ನಿರಂತರವಾಗಿ 52 ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ಶ್ರೀಗಳು ಪ್ರತಿದಿನ ಬೆಳಿಗ್ಗೆ 8ರಿಂದ 10ವರೆಗೆ ಪ್ರತಿ ವಾರ ಒಂದು ಓಣಿಯಂತೆ ಭಕ್ತಾದಿಗಳ ಮನೆಗೆ ಬೇಟಿ ನೋಡುವರು, ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಭಕ್ತರು ನೆರವೇರಿಸುವ ಪಾದ ಪೂಜೆಯಲ್ಲಿ ಭಾಗಿ, ಹತ್ತರಿಂದ ಒಂದರವರೆಗೆ ವೈಕುಂಠ ರಾಮದೇವರ ಪೂಜೆ, ಸಂಜೆ ಐದರಿಂದ ಏಳರವರೆಗೆ ಶ್ರೀಮತ್ ಭಾಗವತ ಪ್ರವಚನದ ಕಾರ್ಯಕ್ರಮಗಳಿದ್ದು ಪ್ರತಿದಿನ ನೂರಾರು ಭಕ್ತರು ಆಗಮಿಸಿ, ಶ್ರೀಗಳ ಪ್ರವಚನದಲ್ಲಿ ಭಾಗಿಯಾಗಿ ಪುನೀತರಾಗುವರು ಎಂದಿದ್ದಾರೆ.
ಈ ಸಿದ್ಧತಾ ಅವಲೋಕನ ಸಂದರ್ಭದಲ್ಲಿ ನ್ಯಾಯವಾದಿ ರಮೇಶ ದೇಶಪಾಂಡೆ, ನಗರ ಸೇವಕ ಜಯತೀರ್ಥ ಸವದತ್ತಿ, ಪ್ರಾಣೇಶ್ ಹೊನವಾಡ, ಸಂತೋಷ ಕಟ್ಟಿ, ಶ್ರೀಧರ್ ಹಲಗತ್ತಿ, ರಘು ಕಟ್ಟಿ, ಅನಿರುದ್ಧ ಕಟ್ಟಿ ಹಾಗೂ ಸಮುದಾಯದ ಪ್ರಮುಖರು ಭಾಗಿಯಾಗಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..