ಬಾಪುಸಾಹೇಬ ಇನಾಮದಾರ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ..

ಬಾಪುಸಾಹೇಬ ಇನಾಮದಾರ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ..

ರೈತ ಸ್ನೇಹಿಯಾದ ಜಿಲ್ಲಾಧಿಕಾರಿಗಳ ಪರವಾಗಿ ನಿಂತ ರೈತ ಸಂಘಟನೆಗಳು..

ಬೆಳಗಾವಿ : ಬಾಪುಸಾಹೇಬ ಇನಾಮದಾರ ವಿರುದ್ಧ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸುರಿಯುವ ಮಳೆಯಲ್ಲಿಯೇ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮದ ಸುತ್ತಮುತ್ತಲಿನ ಜಮೀನು ವಿಚಾರದಲ್ಲಿ ವ್ಯಾಜ್ಯದ ಸಮಸ್ಯೆಯನ್ನು ಬಗೆಹರೆಸುವ ನಿಟ್ಟಿನಲ್ಲಿ ಹಾಗೂ ರೈತರಿಗೆ ನ್ಯಾಯ ನೀಡುವ ಸಲುವಾಗಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್ ಅವರು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಡಿಸಿಯವರ ವಿರುದ್ಧ ಕೋರ್ಟ್ ಗೆ ಹೋಗಿ ಕ್ರಮಕ್ಕೆ ಒತ್ತಾಯಿಸಿರುವ ಬಾಪುಸಾಹೇಬನ ನಡೆಯ ವಿರುದ್ಧ ಕೆರಳಿದ ರೈತ ಸಂಘಟನೆಯವರು ಇಂದು ಇನಾಮದಾರ ಕುಟುಂಬಸ್ಥರ ವಿರುದ್ಧ ಘೋಷಣೆ ಕೂಗುತ್ತಾ ಹೋರಾಟ ನಡೆಸಿದರು.

ದೇಶದ್ರೋಹಿ ಇನಾಮದಾರ ಎಂದು ಘೋಷಣೆ ಕೂಗಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸುರಿವ ಮಳೆ ನಡುವೆ ರಸ್ತೆ ಮೇಲೆ ಕುಳಿತ ರೈತರಿಂದ ತೀವ್ರ ಹೋರಾಟ ನಡೆದು, ಇನಾಮದಾರ ಕುಟುಂಬಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿ, ರಾಜ್ಯಪಾಲರಿಗೆ ಮನವಿ‌ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚುನಪ್ಪಾ ಪೂಜೇರಿ, ಪ್ರಕಾಶ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..