ಮಳೆಯಲ್ಲಿ ನೆನೆದು, ರಸ್ತೆ ಮೇಲೆ ಬಿದ್ದ ವ್ಯಕ್ತಿಗೆ ಉಪಚಾರ ಮಾಡಿದ ಸಮಾಜ ಸೇವಕ..
ವ್ಯಕ್ತಿಗೆ ಬಟ್ಟೆ ಬರೇ ನೀಡಿ, ಉತ್ತಮ ಚಿಕಿತ್ಸೆ ಒದಗಿಸಿದ ಗಂಗಾಧರ ಪಾಟೀಲ..
ಬೆಳಗಾವಿ : ನಗರದ ರೇಲ್ವೆ ಸ್ಟೇಷನ್ ಹತ್ತಿರ ವಯಸ್ಸಾದ ವ್ಯಕ್ತಿಯೊಬ್ಬರು ಮಳೆಯಲ್ಲಿ ನೆನೆದು, ರಸ್ತೆ ಮೇಲೆ ಕುಳಿತಿದ್ದ ವಿಷಯವು ಬೆಳಗಾವಿಯ ಸಮಾಜ ಸೇವಕರಾದ ಗಂಗಾಧರ ಪಾಟೀಲ ಅವರಿಗೆ ತಿಳಿದಿತ್ತು. ಸರಿಯಾದ ಬಟ್ಟೆ ಇಲ್ಲದ ವ್ಯಕ್ತಿಮಳೆಯಲ್ಲಿ ನೆನೆದು ಸರಿಯಾಗಿ ನಡೆಯಲು ಕೂಡಾ ಆಗದ ಸ್ಥಿತಿ ಆ ವ್ಯಕ್ತಿಯದ್ದಾಗಿತ್ತು..

ಆಗ ಗಂಗಾಧರ ಪಾಟೀಲ್ ಹಾಗೂ ಅವರ ತಂಡವು ಸ್ಥಳಕ್ಕೆ ಹೋಗಿ ಆ ವ್ಯಕ್ತಿಯ ಬಟ್ಟೆಗಳನ್ನು ಬದಲಾಯಿಸಿ ಅವನ ದೇಹದ ಮೇಲೆ ಬೆಚ್ಚಗಿನ ಶಾಲು ಹಾಗೂ ಜಾಕೆಟ್ ಕೊಟ್ಟು ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿತು. ಜಿಲ್ಲಾಸ್ಪತ್ರೆಯಲ್ಲಿ ಆ ವ್ಯಕ್ತಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ.

ಈ ವೇಳೆ ಸಾಮಾಜಿಕ ಕಾರ್ಯಕರ್ತ ಗಂಗಾಧರ ಪಾಟೀಲ, ಕ್ಯಾಂಪ್ ಪೊಲೀಸ್ ಠಾಣೆ ಪೊಲೀಸ್ ಪೇದೆ ಪಿ.ಕೆ. ಟಿ. ಪಮ್ಮಾರ ಮತ್ತು ಸಂಜಯ್ ಕುಂಡೆಕರ್ ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..